ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಸರಕಾರ ಬದ್ಧ: ಪಟ್ಟಣ

0
21
loading...

ರಾಮದುರ್ಗ 26: ಸರ್ಕಾರ ಹಿಂದುಳಿದ ಜನರ ಅಭಿವೃದ್ದಿಗೆ ಅನೇಕ ಜನಪರ ಯೋಜನೆಗಳನ್ನು ಹಾಕಿಕೊಂಡಿದೆ. ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿರುವುದೆ ಕಾಂಗ್ರೆಸ್ ಸರಕಾರ, ಕಾರಣ ಸಮಾಜದ ಎಲ್ಲ ಸಮುದಾಯದ ಅಭಿವೃದ್ಧಿಗೆ ಸರಕಾರ ಬದ್ಧವಿದೆ ಅದರ ಸದುಪಯೋಗ ಪಡದುಕೊಳ್ಳಬೇಕೆಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಎಂ. ಪಟ್ಟಣ ಅಭಿಪ್ರಾಯ ವ್ಯಕ್ತ ಪಡಿಸಿದರು.
ಸ್ಥಳೀಯ ಬೆಣ್ಣಿ ಬಂಧುಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಹಿತದೃಷ್ಠಿಯಿಂದ ರಾಜ್ಯ ಸರಕಾರ ಬಜೆಟ್‍ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಟ್ಟು ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಎಲ್ಲ ವರ್ಗಗಳ ಏಳ್ಗೆಗೆಗೆ ಯೋಜನೆ ರೂಪಿಸಿಕೊಂಡಿದ್ದು, ಸಾರ್ವಜನಿಕರು ಸರಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸಾಮಾಜಿಕ ರಾಜಕೀಯ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.
ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಮಂಡಳಿಗೆ ನಾಮನಿರ್ದೇಶನಗೊಂಡ ಮಹ್ಮದಶಫಿ ಬೆಣ್ಣಿ ಮಾತನಾಡಿ, ಶಾಸಕರು ತಾಲೂಕಿನ ಎಲ್ಲ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿಗೆ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಾಗೂ ಅವರು ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, ಶಾಸಕರ ಘನತೆಯನ್ನು ಹೆಚ್ಚಿಸಲು ಶ್ರಮಿಸುವುದಾಗಿ ತಿಳಿಸಿದರು.
ಗೊಡಚಿ ಜಿ.ಪಂ ಸದಸ್ಯ ಜಹೂರ ಹಾಜಿ, ಪುರಸಭೆ ಅಧ್ಯಕ್ಷ ಹುಸೇನಭಾಷಾ ಮೊರಬ ಸೇರಿದಂತೆ ಮುಂತಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಅಶೋಕ ಎಂ. ಪಟ್ಟಣ, ಜಿ.ಪಂ ಸದಸ್ಯ ಜಹೂರ ಹಾಜಿ, ವಿವಿಧ ನಿಗಮ ಮಂಡಳಿಯ ನಾಮನಿರ್ದೇಶನಗೊಂಡ ಸದಸ್ಯರಿಗೆ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸೇರಿದಂತೆ ಮುಂತಾದವರನ್ನು ಬೆಣ್ಣಿ ಬಂಧುಗಳಿಂದ ಸನ್ಮಾನಿಸಲಾಯಿತು.
ವಿದ್ಯುತ್‍ಶಕ್ತಿ ನಿಗಮ ಮಂಡಳಿಗೆ ನಾಮನಿರ್ದೇಶನಗೊಂಡ ಮಹಾಂತೇಶ ಉಮತಾರ, ಪುರಸಭೆ ಉಪಾಧ್ಯಕ್ಷೆ ಸುಮಂಗಲಾ ರಾಯಭಾಗ, ಬಟಕುರ್ಕಿ ಜಿ.ಪಂ ಸದಸ್ಯ ಕೃಷ್ಣಪ್ಪ ರಾಠೋಡ, ಸಂಜು ನಲವಡೆ ಹಾಗೂ ಇತರರು ಇದ್ದರು.

loading...

LEAVE A REPLY

Please enter your comment!
Please enter your name here