ಕನ್ನಡ ಭಾಷೆ ಉಳಿವಿಗೆ ಗ್ರಾಮೀಣ ಜನರೇ ಕಾರಣ: ಡಾ. ಹನುಮಂತಯ್ಯ

0
26
loading...

ರಾಯಬಾಗ 23: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ನುಡಿ ಹಬ್ಬವನ್ನು ವಿಷೇಶವಾಗಿ ಗಡಿ ಭಾಗದಲ್ಲಿ ಆಚರಿಸಲಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರತಿಯೊಂದು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ನುಡಿ ಹಬ್ಬದ ಮೂಲಕ ಕನ್ನಡಿಗರ ಭಾವನಾತ್ಮಕ ಸಂಬಂಧಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ ಎಂದು ಕ.ಅ.ಪ್ರಾಧಿಕಾರ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಹೇಳಿದರು.
ಶುಕ್ರವಾರ ರಾತ್ರಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಆವರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ತಾಲೂಕಾ ಆಡಳಿತ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ “ಕನ್ನಡ ನುಡಿ ಹಬ್ಬ” ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿಯತಕ್ಕಂತಹದ್ದು, ಬೆಳೆಯತಕ್ಕಂತದ್ದು ಸಾಮಾನ್ಯ ಜನರ ಕೈಯಲ್ಲಿ ಇದೇ ಹೊರತು, ಅಧಿಕಾರಿಗಳು, ರಾಜಕಾರಣಿಗಳು ಅಥವಾ ಕೆಲವೇ ಕೇಲವೊಂದು ಜನರ ಕೈಯಲ್ಲಿ ಇಲ್ಲ. ಕನ್ನಡ ಭಾಷೆಯನ್ನು ಉಳಿಸುತ್ತಿರುವುದು ಗ್ರಾಮೀಣ ಜನರು ಹೊರತು ನಗರ ಜನರಲ್ಲ ಎಂದರು. ಕನ್ನಡ ಭಾಷೆ, ಸಂಸ್ಕøತಿ ಶ್ರೀಮಂತವಾಗಿದೆ. ಕರ್ನಾಟಕದಲ್ಲಿ ವಿದೇಶಗಳಿಂದ ಅನೇಕ ರಾಷ್ಟ್ರಗಳು ಬಂಡವಾಳ ಹೂಡಿಕೆ ಮಾಡಲು ಬರುತ್ತಿದ್ದಾರೆ. ಅವರು ಕೇವಲ ಬೆಂಗಳೂರಿನಲ್ಲಿ ಮಾತ್ರ ಬಂಡವಾಳ ಹೂಡಿಕೆ ಮಾಡದೇ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಬಂಡವಾಳ ಹೂಡಿ, ಸ್ಥಳೀಯರಿಗೆ ಉದ್ಯೋಗ ದೊರಕುವಂತೆ ಆಗಬೇಕೆಂದು ಒತ್ತಾಯಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಕೆ.ಮುರಳಿಧರ, ನ್ಯಾಯವಾದಿ ಡಿ.ಎಚ್.ಯಲ್ಲಟ್ಟಿ, ವಸಂತ ಹೊಸಮನಿ, ಡಿ.ಎಸ್.ಡಿಗ್ರಜ, ಎಮ್.ಎಚ್.ರಾಮದುರ್ಗ, ಕ.ರ.ವೇ ತಾಲೂಕಾಧ್ಯಕ್ಷ ಅಶೋಕ ಅಂಗಡಿ, ಅನೀಲ ಶೆಟ್ಟಿ, ರಾಹುಲ ಕಾಂಬಳೆ ವೇದಿಕೆ ಹಂಚಿಕೊಂಡರು.
ಬೆಂಗಳೂರಿನಿಂದ ಆಗಮಿಸಿದ್ದ ಜಾನಪದ ಕಲಾವಿದರು ಕನ್ನಡ ಭಾಷೆ, ಸಂಸ್ಕøತಿ ಬಿಂಬಿಸುವ ಸಾಂಸ್ಕøತಿಕ ಸಂಗೀತ ನೃತ್ಯ ಕಲೆ ಪ್ರದರ್ಶಿಸಿದರು.
ಅಂತರರಾಷ್ಟ್ರೀಯ ಜಾನಪದ ಕಲಾವಿದ ಗೋ.ನಾ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here