ಕುಡಿಯುವ ನೀರಿಗೆ ಹೊಸ ಬೋರವೆಲ್: ಉಮಾ

0
28
loading...

ಬೈಲಹೊಂಗಲ 23: ಭೀಕರ ಬರಗಾಲದಿಂದ ತತ್ತರಿಸಿ ಹೋಗಿರುವ ಪಟ್ಟಣದ ಜನತೆಗೆ ಪುರಸಭೆಯಿಂದ ಕುಡಿಯುವ ನೀರಿನ ಸಲುವಾಗಿ ಬೋರವೆಲ್ ಕೊರೆಯಿಸಲಾಗುತ್ತಿದ್ದು, ಕುಡಿಯುವ ನೀರನ್ನು ಮಿತವಾಗಿ ಬಳಸಬೇಕೆಂದು ಪುರಸಭೆ ಸದಸ್ಯೆ ಉಮಾ ಹೊಸೂರ ಹೇಳಿದರು.
ಅವರು ಶನಿವಾರ ಪಟ್ಟಣದ ಪುರಸಭೆ 24 ನೇ ವಾರ್ಡನ ಇಸ್ಲಾಂಪುರ ಗಲ್ಲಿಯಲ್ಲಿ ಪುರಸಭೆ ವತಿಯಿಂದ ಕೊರೆಯಿಸಿದ ಕುಡಿಯುವ ನೀರಿನ ಬೋರವೆಲ್‍ಗೆ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿ, ನೀರು ಪ್ರತಿಯೊಬ್ಬರಿಗೂ ಅತ್ಯವಶ್ಯ. ಅದನ್ನು ಸರಿಯಾಗಿ ಬಳಕೆ ಮಾಡಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಿ, ಕುಡಿಯುವ ನೀರಿನ ದಾಹ ನೀಗಿಸಬೇಕೆಂದರು.
ಮಲಪ್ರಭಾ ನದಿಯಲ್ಲಿ ನೀರಿನ ಅಭಾವ ಇರುವದರಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಲುವಾಗಿ ಪುರಸಭೆ ವತಿಯಿಂದ ಪ್ರತಿ ವಾರ್ಡಿನಲ್ಲೂ ಬೋರವೆಲ್ಲ ಕೊರೆಸಲಾಗುತ್ತಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಾಂತೇಶ ಹೊಸೂರ, ಬಸವರಾಜ ಹುಲಕುಂದ, ರಫೀಖ ದೇಶನೂರ, ಅಬ್ದುಲ್ ಸತ್ತಾರ ತೋಲಗಿ, ವಿಶಾಲ ಹೊಸೂರ ಹಾಗೂ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here