ಕುಳಗಿ ರಸ್ತೆಯಲ್ಲಿ ಒಂಟಿ ಸಲಗನ ರಾಜ ನಡಿಗೆ

0
25
loading...

ದಾಂಡೇಲಿ : ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಆನೆಗಳು, ಕರಡಿಗಳು ಮತ್ತು ಹುಲಿಗಳಿದ್ದು, ಇವುಗಳಲ್ಲಿ ಆನೆಗಳು ಬಹುತೇಕ ಜನರಿಗೆ ನೋಡಲು ಸಿಗುತ್ತಿರುವುದು ಸಾಮಾನ್ಯವಾಗಿದೆ.

ಇತ್ತೀಚೆಗೆ ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ವನ್ಯಜೀವಿ ದಾಂಡೇಲಿ ಕಛೇರಿಯ ಉದ್ಯೋಗಿ ಎಂ.ಪಿ.ನಾಯ್ಕ ಮತ್ತು ಕುಟುಂಬ ಹಾಗೂ ಪತ್ರಕರ್ತ ಗುರುಶಾಂತ, ಜಡೆಹಿರೇಮಠ ಹೋಗುತ್ತಿರುವಾಗ ಕುಳಗಿ ರಸ್ತೆಯಲ್ಲಿ ಒಂಟಿ ಸಲಗವೊಂದು ರಾಜನಡಿಗೆಯಲ್ಲಿ ರಸ್ತೆಯನ್ನು ದಾಟುತ್ತಿರುವುದನ್ನು ಕಂಡು ಒಂದು ಕ್ಷಣ ದಂಗಾದರೂ, ಅವರು ತಮ್ಮ ಮೊಬೈಲ್ ಕ್ಯಾಮಾರದಲ್ಲಿ ಗಜ ನಡಿಗೆಯನ್ನು ಕ್ಲಿಕ್ಕಿಸಿ ಆನಂದಿಸಿದರು.

ಯಲ್ಲಾಪುರದಿಂದ ದಾಂಡೇಲಿಗೆ ಬರುವಾಗ ಒಳದಾರಿಯಾದ ಭಾಗವತಿ ಕ್ರಾಸ್ ರಸ್ತೆಯ ಮೂಲಕ ದಾಂಡೇಲಿಗೆ ಬರಲು ಅನುಕೂಲಕರವಾಗಿದ್ದರೂ, ಸಂಜೆ 7 ಘಂಟೆಯಿಂದ ಬೆಳಿಗ್ಗೆಯವರೇಗೆ ಈ ರಸ್ತೆಯಲ್ಲಿ ಸಂಚರಿಸುವುದು ಸ್ವಲ್ಪ ಕ್ಷಿಷ್ಟದ ಸ್ಥಿತಿಯಿದೆ. ಈ ರಸ್ತೆಯಲ್ಲಿ ಆನೆ, ಹುಲಿ, ಕರಡಿ ಮೊದಲಾದ ಕಾಡು ಪ್ರಾಣಿಗಳು ಸಂಚರಿಸುತ್ತಿದ್ದು, ವಾಹನ ಸವಾರರು, ಪ್ರಯಾಣಿಕರು ತಡ ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಬರದೇ ಕಾಡುಪ್ರಾಣಿಗಳ ಸ್ವಚ್ಚಂದ ಬದುಕಿಗೆ ಸಹಕರಿಸಬೇಕೆಂಬುವುದೆ ವನ್ಯಪ್ರಿಯರ ಒತ್ತಾಸೆಯಾಗಿದೆ.

loading...

LEAVE A REPLY

Please enter your comment!
Please enter your name here