ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಗ್ರಾ.ಪಂ, ಉಪಚುನಾವಣೆ ಬಹಿಷ್ಕಾರ

0
19
loading...

ಮುಂಡರಗಿ : ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮಕ್ಕೆ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನ ನೀಡದಿರುವುದನ್ನು ಖಂಡಿಸಿ ಗ್ರಾಮಸ್ಥರು ಭಾನುವಾರ ಜರುಗಿದ ಗ್ರಾ.ಪಂ, ಉಪಚುನಾವಣೆಯನ್ನು ಬಹಿಷ್ಕರಿಸಿದರು.
ಈ ವೇಳೆ ಗ್ರಾಮದ ಮುಖಂಡ ಮುದುಕೇಶ ಮಾದರ ಮಾತನಾಡಿ, ಕಳೆದ ಬಾರಿ ಗ್ರಾಮ ಪಂಚಾಯ್ತಿ ವಿಂಗಡಣೆ ಸಮಯದಲ್ಲಿ ತಾಲೂಕಿನಲ್ಲಿ ಮೂರು ಗ್ರಾಮ ಪಂಚಾಯ್ತಿಗಳನ್ನು ಹೆಚ್ಚಳ ಮಾಡಲಾಯಿತ್ತು. ಅದರಲ್ಲಿ ಚಿಕ್ಕವಡ್ಡಟ್ಟಿ ಗ್ರಾಮವನ್ನು ಸೇರಿಸಲಾಯಿತ್ತು. ಚಿಕ್ಕವಡ್ಡಟ್ಟಿ ಗ್ರಾಮವನ್ನು ಗ್ರಾಮ ಪಂಚಾಯ್ತಿ ಸ್ಥಾನ ನೀಡಲಾಗಿದೆ ಎಂದು ಘೋಷಣೆ ಮಾಡಲಾಗಿತ್ತು. ನಂತರ ಪುನಃ ಗ್ರಾಮಕ್ಕೆ ನೀಡಿದ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನವನ್ನು ರದ್ದು ಪಡಿಸಿ, ಮುರುಡಿ ವ ಮುರುಡಿತಾಂಡೆಗೆ ಗ್ರಾಮ ಪಂಚಾಯ್ತಿ ಸ್ಥಾನವನ್ನು ನೀಡಲಾಗಿತು. ಇದಕ್ಕೆ ಬೇಸತ್ತ ಗ್ರಾಮಸ್ಥರು ಈ ಹಿಂದೆ ನಡೆದಂತ ಗ್ರಾ.ಪಂ, ತಾ.ಪಂ, ಹಾಗೂ ಜಿ.ಪಂ, ಚುನಾವಣೆಯನ್ನು ಬಹಿಷ್ಕರಿಸಲಾಗಿತ್ತು. ಈಗ ಈ ಉಪಚುನಾವಣೆಯನ್ನು ಸಹ ಬಹಿಷ್ಕರಿಸಿದ್ದೇವೆ ಎಂದರು.
ಗ್ರಾಮಸ್ಥರಾದ ಭೀಮನಗೌಡ ಅಯ್ಯನಗೌಡ, ಈಶ್ವರಪ್ಪ ರಂಗಪ್ಪನವರ, ಬಸವರಾಜ ಸುಲ್ತಾನಪುರ, ಪರಸನಗೌಡ ಕೆಂಚನಗೌಡ, ವೀರಪ್ಪ ಮಂಜ್ಜಮಳ್ಳಿ, ಮಂಜುನಾಥ ಹಳೆಮನಿ, ನಾಗನಗೌಡ ಕೆಂಚನಗೌಡ, ಕಲ್ಲನಗೌಡ ಪರಂಗಿ, ಪಕೀರಸಾಬ ನದಾಫ್, ರಮೇಶ ಸೊಮಣ್ಣವರ, ಮುತ್ತಣ್ಣ ಬಿನ್ನಾಳ, ನಾಗಪ್ಪ ಲಾವಪುರ, ಯಲ್ಲಪ್ಪ ಸೊಮಣ್ಣವರ ಸೇರಿದಂತೆ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here