ಜನಮನ ರಂಜಿಸಿದ ಮೂಲ ಜನಪದ ಕಲಾ ಪ್ರಕಾರಗಳು

0
44
loading...

ಕುಷ್ಟಗಿ 25: ಭಾರತೀಯ ಸಂಸ್ಕøತಿಯ ಮೂಲ ತಾಯಿ ಬೇರು ನಮ್ಮ ಜನಪದವಾಗಿದೆ. ಅದೆಂದಿಗೂ ಅಳಿಯಲು ಸಾಧ್ಯವಿಲ್ಲ. ಆದರೆ ತಾಂತ್ರಿಕ ಯುಗದ ಬದಲಾವಣೆಗೆ ನಮ್ಮ ಜನಪದ ಕಲಾವಿದರು ರೂಪಾಂತರ ಮಾಡಿಕೊಂಡು ಬೆಳೆಯಬೇಕಾದ ಅನಿವಾರ್ಯತೆ ಇವತ್ತಿನ ಸವಾಲು ಕೂಡಾ ಆಗಿದೆ ಎಂದು ಬೆಂಗಳೂರಿನ ಚಿಂತಕ ಪುರುಷೋತ್ತಮ ಕಲಾಲಬಂಡಿ ಹೇಳಿದರು.
ಜನಜಾಗೃತಿ ಕಲಾರಂಗ ಸಂಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ 2015-16ನೇ ಸಾಲಿನ ನೋಂದಾಯಿತ ಸಂಘ ಸಂಸ್ಥೆಗಳ ಧನಸಹಾಯ ಯೋಜನೆಯ ಅಡಿಯಲ್ಲಿ ಸ್ಥಳೀಯ ಕುಮಾರೇಶ್ವರ ನಾಟ್ಯ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡ ಯುಗಾದಿಯ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಂತ್ರಜ್ಞಾನ ಬೆಳೆದಂತೆ ನಮ್ಮ ಜೀವನದ ಶೈಲಿಯು ಬದಲಾಗುತ್ತಿದ್ದು ನಮ್ಮ ಮೂಲ ಕಲೆಗಳನ್ನು ನಾವು ಮರೆಯುವ ಹಾಗಾಗಿದೆ. ಆದರೆ ಈ ಕಲೆಗಳನ್ನು ಆಧುನಿಕತೆಗೆ ತಕ್ಕಂತೆ ಬದಲಿಸಿಕೊಂಡು ನಮ್ಮ ಹಳೆಯ ಕಲೆಗಳಾದ ಸಂಪ್ರದಾಯ ಪದ, ಸುಗ್ಗಿ ಪದ, ಡೊಳ್ಳಿನ ಪದ, ಗೀಗೀ ಪದ, ಲಾವಣಿ ಪದ ಸೇರಿದಂತೆ ಅನೇಕ ಮೂಲ ಕಲಾ ಪ್ರಕಾರಗಳನ್ನು ವಾಟ್ಸ್‍ಅಪ್ ಮತ್ತು ಫೇಸ್‍ಬುಕ್‍ಗಳಿಗೆ ಕಳುಹಿಸುವ ಮೂಲಕ ನಮ್ಮ ಕಲೆಗಳನ್ನು ನಾವೇ ಪ್ರಚಾಗೊಳಿಸುವ ತಂತ್ರಕ್ಕೆ ಬದಲಾವಣೆಯಾಗಬೇಕಿದೆ ಎಂದರು.
ಪುರಸಭೆ ಅಧ್ಯಕ್ಷ ಕಲ್ಲೇಶ ತಾಳದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಜನಪದ ಕಾರ್ಯಕ್ರಮಗಳು ನಡೆದಂತೆ ಪಟ್ಟಣದಲ್ಲೂ ನಡೆಯಬೇಕು. ಇದರ ಮೂಲಪ್ರಕಾರಗಳನ್ನು ನಗರದ ಜನತೆಗೂ ತಿಳಿಸುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ ಶರಣಪ್ಪ ವಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಉತ್ತರ ಕರ್ನಾಟಕದ ಸಮನ್ವಯಕಾರ ನಬಿಸಾಬ ಕುಷ್ಟಗಿ, ತಾ.ಕಸಾಪ ಅಧ್ಯಕ್ಷ ನಟರಾಜ ಸೋನಾರ, ಹೆಚ್.ವೈ ಈಟಿ, ಅಡಿವೆಪ ಕುಷ್ಟಗಿ ಮಾತನಾಡಿದರು. ಪುರಸಭೆ ಸದಸ್ಯ ಅಮೀನುದ್ದೀನ ಮುಲ್ಲಾ, ಉಪನ್ಯಾಸಕ ದೊಡ್ಡಪ್ಪ ಕೈಲವಾಡಗಿ, ಸುಖಮುನಿ ಗುಮಗೇರಿ, ಬಸವರಾಜ ಉಪ್ಪಲದಿನ್ನಿ ಭಾಗವಹಿಸಿದ್ದರು. ಶರಣಪ್ಪ ತೆಮ್ಮಿನಾಳ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ನಿನ್ನೆ ನಿಧನರಾದ ಪುಂಡಲೀಕ ಹಾಲಂಬಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಮೌನಾಚರಣೆ ಮಾಡಲಾಯಿತು. ನಂತರ ನಡೆದ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಭಜನಾ ಪದ, ಗೀಗೀಪದ, ಕೋಲಾಟ, ಕಣಿಹಲಗೆ ವಾದನ, ದೊಡ್ಡಾಟದ ಪದಗಳು, ಸಂಪ್ರದಾಯ ಪದಗಳು ಸೇರಿದಂತೆ ಅನೇಕ ಕಲಾಪ್ರಕಾರಗಳನ್ನು ವಿವಿಧ ಕಲಾ ತಂಡದವರಿಂದ ಪ್ರದರ್ಶನ ಮಾಡಲಾಯಿತು. ಎಲ್ಲಾ ಕಾರ್ಯಕ್ರಮಗಳು ಜನಮನ ರಂಜಿಸಿದವು.

loading...

LEAVE A REPLY

Please enter your comment!
Please enter your name here