ಡಾ.ಮಲಶೆಟ್ಟಿ ನಮ್ಮ ಭಾಗದ ಶಿವರಾಂ ಕಾರಂತ: ಡಾ. ಸೀಗಿಹಳ್ಳಿ

0
31
loading...

ಚನ್ನಮ್ಮ ಕಿತ್ತೂರು 01: ಜಾನಪದ ಪ್ರದರ್ಶನ ಕಲೆಗಳ ಸಂಶೋದನೆ ಮಾಡುವ ಮೂಲಕ ಅನೇಕ ಮಹತ್ವದ ವಿಷಯಗಳನ್ನು ಬೆಳಕಿಗೆ ತಂದಿರುವ ಜಾನಪದ ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ ನಮ್ಮ ಭಾಗದ ಶಿವರಾಂ ಕಾರಂತರಾಗಿದ್ದರೆಂದು ಸಾಹಿತಿ ಡಾ. ಬಾಳಣ್ಣ ಸೀಗಿಹಳ್ಳಿ ಅಭಿಪ್ರಾಯ ಪಟ್ಟರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಸರ್ವ ಕಲಾವಿದರ ಹಿತ ರಕ್ಷಣಾ ಸಂಘದ ಸಹಯೋಗದಲ್ಲಿ ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಜಾನಪದ ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ ಸಂಸ್ಮರಣೆ ಹಾಗೂ ಜಾನಪದ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡಾಟ ಬಯಲಾಟ, ಸಣ್ಣಾಟ ಸೇರಿದಂತೆ ವಿವಿಧ ಜಾನಪದ ಕಲಾ ಪ್ರದರ್ಶನಗಳ ಪರಂಪರೆಯ ತಪ್ಪುಗಳನ್ನು ತಿದ್ದಿ ಸಂಗೀತದ ವರ್ಗಿಕರಣ ಮತ್ತು ಎಲ್ಲ ಪ್ರಕಾರಗಳ ತಲಸ್ಪರ್ಶಿ ಅಧ್ಯಯನ ಮಾಡಿ ಜಾನಪದ ಜಗತ್ತನ್ನು ಆವಾಹನೆ ಮಾಡಿಕೊಂಡಿದ್ದ ಮಲಶೆಟ್ಟಿ ಸತ್ಯವನ್ನು ಹೊರತಂದು ಆ ಕಲೆಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿ ಇಡೀ ಬದುಕನ್ನು ಜಾನಪದ ಸಂಶೋಧನೆಗಾಗಿ ಅರ್ಪಿಸಿಕೊಂಡಿರುವದು ಮಾದರಿಯಾಗಿದೆ. ಅವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಹಾಗೂ ಅವರ ಸಂಶೋಧನೆಗಳ ಅಧ್ಯಯನ ಮುಂದುವರೆಯಬೇಕೆಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕಸಾಪ ನಿಕಟಪೂರ್ವ ಅಧ್ಯಕ್ಷ ಬಸವರಾಜ ಕುಪ್ಪಸಗೌಡರ ಜಾನಪದ ಸಾಹಿತ್ಯದ ಬಹುದೊಡ್ಡ ಆಸ್ತಿಯಾಗಿದ್ದ ಮಲಶೆಟ್ಟಿಯವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಅವರ ಒಡನಾಡಿಗಳ ಮಾರ್ಗದರ್ಶನ ಪಡೆದು ಪ್ರತಿಷ್ಠಾನವನ್ನು ಸ್ಥಾಪಿಸಲು ಪ್ರಯತ್ನಿಸಲಾಗುವೆಂದು ಹೇಳಿದರು.
ಕರ್ನಾಟಕ ಸರ್ವ ಕಲಾವಿದರ ಹಿತ ರಕ್ಷಣಾ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಸಂದೀಪ ದೇಶಪಾಂಡೆ, ಡಾ.ಶ್ರೀಕಾಂತ ದಳವಾಯಿ, ಗಂಗಣ್ಣ ಕರಿಕಟ್ಟಿ, ಎಂ.ಎಸ್,ಕಲ್ಮಠ ಮಾತನಾಡಿದರು. ವಿರೂಪಾಕ್ಷಪ್ಪ ಕಂಬಿ, ಶ್ರೀಮತಿ ಶಾರದಾ ಬಸವರಾಜ ಮಲಶೆಟ್ಟಿ ಇದ್ದರು. ಮಲಶೆಟ್ಟಿಯವರ ತಾಯಿ ನಾಗೇಂದ್ರವ್ವ ಮರಿಕಲ್ಲಪ್ಪ ಮಲಶೆಟ್ಟಿ, ಸಾಹಿತಿ ಡಾ.ಬಾಳಣ್ಣ ಸೀಗಿಹಳ್ಳಿ, ಸಿರಿಗನ್ನಡ ರಾಷ್ಟ್ರೀಯ ರತ್ನ ಪ್ರಶಸ್ತಿ ಪುರಸ್ಕøತ ಬಸವರಾಜ ಕುಪ್ಪಸಗೌಡರ, ಶಿಕ್ಷಕ ಮಂಜುನಾಥ ಕಳಸಣ್ಣವರ ಹಾಗೂ ಜಾನಪದ ಕಲಾವಿದರನ್ನು ಅಧ್ಯಕ್ಷ ಮಲ್ಲನಗೌಡ ಪಾಟೀಲ ಸನ್ಮಾನಿಸಿದರು. ಶಿಕ್ಷಕ ಬಿ.ಸಿ ಬಿದರಿ ಸ್ವಾಗತಿಸಿದರು ಶಿಕ್ಷಕ ಮಂಜುನಾಥ ಕಳಸಣ್ಣವರ ನಿರೂಪಿಸಿದರು. ಶಿಕ್ಷಕ ರಾಜಶೇಖರ ರಗಟಿ ವಂದಿಸಿದರು. ನಂತರ ಜಾನಪದ ಕಲಾ ಪ್ರದರ್ಶನಗಳು ನಡೆದವು.,

loading...

LEAVE A REPLY

Please enter your comment!
Please enter your name here