ದುಷ್ಪರಿಣಾಮ ಬೀರುತ್ತಿರುವ ಅತೀಯಾದ ಮೊಬೈಲ್ ಬಳಕೆ

0
64
loading...

ಶಿರಸಿ : ಮೊಬೈಲ್ ಬಳಕೆ ಗೀಳಾಗಿ ವ್ಯಕ್ತಿಗಳ ದೈಹಿಕ, ಮಾನಸಿಕ ಮತ್ತು ಕೌಟುಂಬಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತ್ತಿದೆ. ಇಂತಹ ಅನಾರೋಗ್ಯಕರ ಬೆಳವಣಿಗೆ ನಿಯಂತ್ರಿಸುವಂತೆ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹುಬ್ಬಳ್ಳಿಯ ಪ್ರಸಿದ್ದ ಮಾನಸಿಕ ಆರೋಗ್ಯ ತಜ್ಞ ಶ್ರೀನಿವಾಸ ಕುಲಕರ್ಣಿ ಅಭಿಪ್ರಾಯಪಟ್ಟರು.
ಶಿರಸಿಯ ಅಜಿತಮನೋಚೇತನ ಸಂಸ್ಥೆ ಸಂಘಟಿಸಿದ್ದ ವಿದ್ಯುನ್ಮಾನ ಸಂಪರ್ಕ ಸಾಧನಗಳ ಬಳಕೆ ಹಾಗೂ ಆರೋಗ್ಯದ ಮೇಲೆ ಆಗುವ
ದುಷ್ಟರಿಣಾಮಗಳು’ ಕುರಿತ ಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುವ ಯುವಜನರಲ್ಲಿ ವಿಶೇಷವಾಗಿ ಮೊಬೈಲ್ ಗೀಳಾಗಿ ಪರಿಣಮಿಸುತ್ತಿದೆ. ಇದರಿಂದ ನಿದ್ರಾಹೀನತೆ, ನೆನಪಿನ ಶಕ್ತಿ ಕಡಿಮೆಯಾಗುವದು, ಖಿನ್ನತೆ ಹೆಚ್ಚುವದು, ವಿದ್ಯಾರ್ಥಿಗಳಲ್ಲಿ ಏಕಾಗೃತೆ ತೀರಾ ಕಡಿಮೆಯಾಗುವದು ಸೇರಿದಂತೆ ಅನೇಕ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಈ ಗೀಳು ತಡೆಯಲು ಪಂಚಸೂತ್ರ ಪಾಲಿಸಲು ಸಲಹೆ ನೀಡಿದರು. ಮುಂಜಾನೆ ಎದ್ದಕೂಡಲೇ ಮತ್ತು ರಾತ್ರಿ ಮಲಗುವ ಅರ್ಧತಾಸು ಮೊದಲು ಮೊಬೈಲ್ ಫೆÇೀನ್ ಬಳಸದಿರುವದು, ದಿನದಲ್ಲಿ ಕನಿಷ್ಟ 2-3 ತಾಸು ಅವಧಿಯಾದರೂ ಫೆÇೀನನ್ನು ಬಳಸದಿರಲು ರೂಢಿಸಿಕೊಳ್ಳುವದು, ಡಿಜಿಟಲ್ ಲೋಕದ ಗೆಳೆಯರಿಗಿಂತ ನೈಜ ಮಿತ್ರರೊಡನೆ ಹೆಚ್ಚು ವ್ಯವಹರಿಸುವದು, ರಾತ್ರಿ ಸಾಕಷ್ಟ್ಟು ನಿದ್ದೆ ಮಾಡುವದು ಹಾಗೂ ಕುಟುಂಬದ ಸದಸ್ಯರ ಜೊತೆಗೆ ಹೆಚ್ಚು ಸಮಯ ಕಳೆಯಲು ರೂಢಿಸಿಕೊಳ್ಳಬೇಕು. ಈ ಸೂತ್ರಗಳನ್ನು ಕುಟುಂಬದ ಪ್ರತಿ ವ್ಯಕ್ತಿಯೂ ಜಾರಿಗೆ ತರಲು ಪ್ರಯತ್ನಿಸಬೇಕೆಂದು ಹೇಳಿದರು.
ಮೊಬೈಲ್ ಬಳಕೆ ಕಡಿಮೆ ಮಾಡಿ…..
ನೇತ್ರತಜ್ಞ ಕೆ.ವಿ.ಶಿವರಾಮ ಅವರು ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಮೇಲಾಗುವ ಅನಾರೋಗ್ಯದ ಕುರಿತು ಸಚಿತ್ರ ವಿವರಣೆ ನೀಡಿದರು. ಕಣ್ಣಿನಲ್ಲಿ ದ್ರವದ ಕೊರತೆ, ಕಣ್ಣಿನ ಮಾಂಸಖಂಡಗಳು ಜಡ್ಡುಗಟ್ಟುವದು, ಕಣ್ಣ್ಣುರಿ, ಕಣ್ಣಿನರೆಪ್ಪೆ ಮುಚ್ಚುವ ಪ್ರಕ್ರಿಯೆ ತಡವಾಗುವದು, ದೃಷ್ಟಿ ಮಂದವಾಗುವದು, ಕಣ್ಣುನೋವು ಬರುವದು ಇತ್ಯಾದಿ ಎಲ್ಲ ಸಮಸ್ಯೆಗಳ ಪರಿಯನ್ನು ವಿವರಿಸಿದರು. ಕತ್ತುನೋವು, ತಲೆನೋವು ಇತ್ಯಾದಿ ಹೆಚ್ಚುವದರಿಂದ ಹೇಗೆ ಕಣ್ಣಿನ ಆರೋಗ್ಯ ಹಾಳಾಗಿ, ವ್ಯಕ್ತಿಯ ಒಟ್ಟೂ ಆರೋಗ್ಯ ಕುಸಿಯುತ್ತದೆ ಎಂದು ವ್ಶೆಜ್ಞಾನಿಕ ಅಧ್ಯಯನಗಳ ಆಧಾರದೊಂದಿಗೆ ವಿವರಿಸಿದರು. ವಿದ್ಯಾರ್ಥಿಗಳು ಈ-ಪುಸ್ತಕಗಳ ಬದಲು ನೈಜಪುಸ್ತಕಗಳನ್ನು ಬಳಸಲು ಹಾಗು ಅತಿಕಡಿಮೆ ಫೆÇೀನ್‍ಬಳಸುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐ.ಎಂ.ಎ. ಶಿರಸಿ ತಾಲೂಕಾ ಘಟಕದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ರಾಯ್ಸದ್ ಮಾತನಾಡಿ, ಜಗತ್ತು ಬದಲಾದಂತೆ ತಂತ್ರಜ್ಞಾಗಳ ಬಳಕೆ ಅನಿವಾರ್ಯ. ಆದರೆ ಮೊಬೈಲ್ ಗೀಳನ್ನು ನಿಯಂತ್ರಿಸಲು ಪಾಲಕರಾದವರು ಮೊದಲು ಶಿಸ್ತನ್ನು ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಮಾದರಿಯಾಗಬೇಕು ಎಂದರು.
ಶೈಕ್ಷಣಿಕ ಆಪ್ತಸಲಹಾಕೇಂದ್ರ ಆರಂಭ….
ಸುಜ್ಞಾನ ಶಿಕ್ಷಣ ಕೇಂದ್ರದ ಸಹಯೋಗದೊಂದಿಗೆ ಉಚಿತವಾಗಿ ನಡೆಸಲು ಉದ್ದೇಶಿಸಿರುವ ಶೈಕ್ಷಣಿಕ ಆಪ್ತಸಲಹಾ ಕೇಂದ್ರ್ರಕ್ಕೆ ಚಾಲನೆ ನೀಡಲಾಯಿತು. ಸುಜ್ಞಾನ ಶಿಕ್ಷಣ ಕೇಂದ್ರದ ನಿರ್ದೇಶಕ ಡಾ.ಕೇಶವ ಕೊರ್ಸೆ ಈ ವೇಳೆ ಮಾತನಾಡಿ, ಸಾರ್ವಜನಿಕ ಶಿಕ್ಷಣ ಕ್ಷೇತ್ರದ ಅಭ್ಯುದಯದ ಉದ್ದೇಶದಿಂದ ಶೈಕ್ಷಣಿಕ ಮನಶಾಸ್ತ್ರದ ತತ್ವಗಳ ಆಧಾರದಲ್ಲಿ ಕೈಗೊಳ್ಳಲಾಗಿದೆ ಎಂದರು. ಸ್ವಭಾವ ಪರಿವರ್ತನೆ, ಕಲಿಕಾ ನೂನ್ಯತೆಗಳನ್ನು ಸರಿಪಡಿಸುವದು, ಕಲಿಕೆಯ ತಂತ್ರಗಳು, ಉನ್ನತ ಶಿಕ್ಷಣದಲ್ಲಿನ ಅವಕಾಶಗಳು ಇತ್ಯಾದಿ ಕುರಿತಂತೆ ಇಲ್ಲಿ ನೀಡುವ ಉಚಿತ ಆಪ್ತಸಲಹೆ ನೀಡಲಾಗುತ್ತದೆ ಎಂದರು.
ಅಜಿತಮನೋಚೇತನ ಕಟ್ಟಡದಲ್ಲಿ ಶೈಕ್ಞಣಿಕ ಸಲಹಾ ಕೇಂದ್ರದ ಸೇವೆ ತಿಂಗಳಿಗೆ ಎರಡು ದಿನ (ಎರಡನೇ ಮತ್ತು ನಾಲ್ಕನೇ ಶನಿವಾರ, ಸಂಜೆ 4ರಿಂದ 7 ಗಂಟೆಯವರೆಗೆ) ಲಭ್ಯವಿರಲಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರಿಗೆ ಸುಜ್ಞಾನ ಶಿಕ್ಷಣ ಕೇಂದ್ರದ ತಜ್ಞರು ವೈಯಕ್ತಿಕ ಆಪ್ತಸಲಹೆ ನೀಡಲಿದ್ದಾರೆ ಎಂದು ಅಜಿತಮನೋಚೇತನದ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಅಜಿತಮನೋಚೇತನಾದ ಮುಖ್ಯಸ್ಥ ಸುಧೀರ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

loading...

LEAVE A REPLY

Please enter your comment!
Please enter your name here