ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ: ಹೆಬ್ಬಾಳಕರ

0
32
loading...

ಮೋಳೆ 22: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡಿದ್ದು, ಯಾವುದೇ ಆಸೆಗಾಗಿ, ಸ್ವಾರ್ಥಕ್ಕಾಗಿ ಹುಟ್ಟಿಕೊಂಡಿರುವ ಪಕ್ಷವಲ್ಲ. ದೇಶದ ಸ್ವಾತಂತ್ರ ಹೋರಾಟದ ಉದ್ದೇಶದಿಂದ, ಸ್ಥಾಪನೆಯಾಗಿದ್ದು, ದೇಶದಿಂದ ಬ್ರೀಟಿಷರನ್ನು ಓಡಿಸಲು ಹುಟ್ಟಿದ ಪಕ್ಷವಾಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಗುರುವಾರ ಸಾಯಂಕಾಲ ಐನಾಪೂರ ಪಟ್ಟಣ ಪಂಚಾಯತ ಚುನಾವಣೆಯ ಪ್ರಚಾರಾರ್ಥವಾಗಿ ಆಗಮಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಶಿಕ್ಷಣ, ಆರೋಗ್ಯ, ಆರ್ಥಿಕ ವಿಷಯದಲ್ಲಿ ಭಾರತ ಅಭಿವೃದ್ಧಿ ಹೊಂದುವಲ್ಲಿ ಕಾಂಗ್ರೆಸ್ ಪಕ್ಷದ ಹೋರಾಟವೇ ಮುಖ್ಯ ಕಾರಣವಾಗಿದೆ. ರಾಷ್ಟ್ರೀಯ ಪಕ್ಷವಾಗಿ ತನ್ನದೇ ಆದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ನಾರಾರು ವರ್ಷಗಳ ಹಿನ್ನೆಲೆ ಇದೆ. ನೆಹರು ಅವರು ಪಂಚವಾರ್ಷಿಕ ಯೋಜನೆ ಜಾರಿಗೆ ತರದಿದ್ದರೆ, ಲಾಲ ಬಹಾದ್ದೂರ ಶಾಸ್ತ್ರೀಯವರು ಜೈ ಜವಾನ, ಜೈ ಕಿಸಾನ ಅನ್ನದಿದ್ದರೆ ಇಂದಿರಾಗಾಂಧಿ 20 ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತರದಿದ್ದರೆ, ರಾಜೀವಗಾಂಧಿ ಭಾರತಕ್ಕೆ ತಂತ್ರಜ್ಞಾನವನ್ನು ಪರಿಚಯಿಸದಿದ್ದರೆ ಈ ದೇಶ ಇಷ್ಟು ಮುಂದೆ ಹೋಗುತ್ತಿತ್ತಾ ಎಂದು ಪರೋಕ್ಷವಾಗಿ ಬಿಜೆಪಿಯವರನ್ನು ಪ್ರಶ್ನಿಸಿದರು.
ಬಾಯಲ್ಲಿ ರಾಮ್,ರಾಮ್ ಎಂದು ಜಪಿಸುವುದು, ಮಾಡುವುದೆಲ್ಲ ರಾವಣನ ಕೆಲಸ ಎಂದ ಅವರು ಆಶ್ರಯ ಮನೆ, ನೀರಿನಲ್ಲಿ ರಾಜಕಾರಣ ಮಾಡುತ್ತಿರುವ ತಾಲೂಕಿನ ಬಿಜೆಪಿ ಮುಖಂಡರೇ ಇನ್ನು ನಿಮ್ಮ ಬಣ್ಣದ ಮಾತಿಗೆ ಪ್ರಜ್ಞಾವಂತ ಜನ ಮರಳಾಗುವುದಿಲ್ಲ, ಬರುವ ದಿ.24 ರಂದು ಉಗಾರ ಪುರಸಭೆ, ಐನಾಪೂರ ಹಾಗೂ ಶೇಡಬಾಳ ಪಟ್ಟಣ ಪಂಚಾಯತಿಗಳು ಕಾಂಗ್ರೆಸ್ ಪಾಲಾಗಲಿವೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರವೀಂದ್ರ ಗಾಣಿಗೇರ ಮಾತನಾಡಿ ಬಿಜೆಪಿಯವರು ವಾಕ್ ಚಾತುರ್ಯ ಹೊಂದಿದ್ದಾರೆ, ಕೇವಲ ಬಣ್ಣದ ಮಾತುಗಳನ್ನು ಹೇಳಿ ಜನರನ್ನು ಮರಳು ಮಾಡುತ್ತಿದ್ದಾರೆ. ಅಂಥ ಬಣ್ಣದ ಮಾತಿಗೆ ಐನಾಪೂರದ ಜನತೆ ಮರಳಾಗುವುದಿಲ್ಲ ಎಂದ ಅವರು ಶಾಸಕರಿಂದ ಯಾವುದೇ ಗುಡಿ ಗುಂಡಾರಗಳಿಗೆ ಅನುದಾನ ಬಂದಿಲ್ಲ, ಅದು ಕೇವಲ ಒಂದೇ ಒಂದಕ್ಕೆ ಮಾತ್ರ ಸರಕಾರದ ಅನುದಾನ ಬಂದಿದೆ, ಅದು ಯಾವುದಕ್ಕೆ ಬಂದಿದೆ ಎಂದು ಬಾಯಿಬಿಟ್ಟು ಹೇಳಬೇಕಾಗಿಲ್ಲ ಎಂದರು.
ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ ಮಾತನಾಡಿ ದಿ.24 ರಂದು ಜರುಗಲಿರುವ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 17 ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದ ಅವರು ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಸಚಿವ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಐನಾಪೂರಕ್ಕೆ ವಿಶೇಷ ಪ್ಯಾಕೇಜ ನೀಡುವುದಾಗಿ ಹೇಳಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ಅಥಣಿ ಬ್ಲಾಕ್ ಅಧ್ಯಕ್ಷ ಹರ್ಷದ ಗದ್ಯಾಳ, ರಾಜೇಂದ್ರ ಪೋತದಾರ, ಎನ್.ಪ್ರಶಾಂತರಾವ್, ಸಂಜಯ ಕುಚನೂರ(ವಕೀಲರು) ಸಂಜಯ ತಳವಲಕರ, ಅರುಣ ಗಾಣಿಗೇರ, ಸಂಜಯ ಭೀರಡಿ, ಮಾನಸಾ ಪೋತದಾರ, ಪಾಯಪ್ಪ ಕುಡವಕ್ಕಲಗಿ, ಯಶವಂತ ಪಾಟೀಲ, ಸಂಜು ಭಿರಡಿ,ಅಪ್ಪಾಸಾಬ ಚೌಗಲಾ, ಬಾಳಾಸಾಬ ದಾನೋಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಿಖೀಲ ಮಹಾಜನ ಕಾರ್ಯಕ್ರಮ ನಿರ್ವಹಿಸಿದರು ರಾಜೇಂದ್ರ ಪೋತದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಗಾರ,ಶೇಡಬಾಳದಲ್ಲಿ ಪ್ರಚಾರ:
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ಅಥಣಿ ಬ್ಲಾಕ್ ಅಧ್ಯಕ್ಷ ಹರ್ಷದ ಗದ್ಯಾಳ ಸೇರಿದಂತೆ ನೂರಾರು ಮುಖಂಡರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
=>
ನೆಹರು ಅವರು ಪಂಚವಾರ್ಷಿಕ ಯೋಜನೆ ಜಾರಿಗೆ ತರದಿದ್ದರೆ, ಲಾಲ ಬಹಾದ್ದೂರ ಶಾಸ್ತ್ರೀಯವರು ಜೈ ಜವಾನ, ಜೈ ಕಿಸಾನ ಅನ್ನದಿದ್ದರೆ, ಇಂದಿರಾಗಾಂಧಿ 20 ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತರದಿದ್ದರೆ, ರಾಜೀವಗಾಂಧಿ ಭಾರತಕ್ಕೆ ತಂತ್ರಜ್ಞಾನವನ್ನು ಪರಿಚಯಿಸದಿದ್ದರೆ ಈ ದೇಶ ಇಷ್ಟು ಮುಂದೆ ಹೋಗುತ್ತಿರಲಿಲ್ಲ. ದೇಶಕ್ಕೆ ಕಾಂಗ್ರೆಸ್ ಪಕ್ಷದ ಅಪಾರ ಕೊಡುಗೆ ನೀಡಿದೆ.
ಲಕ್ಷ್ಮೀ ಹೆಬ್ಬಾಳಕರ
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

loading...

LEAVE A REPLY

Please enter your comment!
Please enter your name here