ದ್ವಿತಿಯ ಪಿಯುಸಿ ಪ್ರಶ್ನೇ ಪತ್ರಿಕೆ ಬಿಗಿ ಭದ್ರತೆ ಮಧ್ಯೆ ವಿವಿಧಪರೀಕ್ಷಾ ಕೇಂದ್ರಗಳಿಗೆ ರವಾನೆ

0
59
loading...

ಯಲ್ಲಾಪುರ : ಅತ್ಯಂತ ಭದ್ರತೆಯ ಮಧ್ಯೆ ಮಂಗಳವಾರ ಯಲ್ಲಾಪುರ ಉಪ ಖಜಾನೆಯಿಂದ ಘಟ್ಟದ ಮೇಲಿನ ಐದು ತಾಲೂಕು ಹಾಗೂ ಜೊಯಿಡಾ ರಾಮನಗರ ಪರೀಕ್ಷಾ ಕೇಂದ್ರಕ್ಕೆ ಪಿಯುಸಿ ದ್ವಿತೀಯ ಕೆಮೆಸ್ಟ್ರಿ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲಾಯಿತು.
ಯಲ್ಲಾಪುರದಿಂದ ಅತೀ ದೂರದ ತಾಲೂಕು ಪರೀಕ್ಷಾ ಕೇಂದ್ರಗಳಾದ ಜೊಯಿಡಾ ರಾಮನಗರ, ದಾಂಡೇಲಿ ಹಾಗೂ ಸಿದ್ದಾಪುರ ಪರೀಕ್ಷಾ ಕೇಂದ್ರಗಳಿಗೆ ನಸೂಕಿನ ಐದು ಘಂಟೆಗೆ ಪ್ರಶ್ನೆ ಪತ್ರಿಕೆ ಕಳಿಸಲಾಗಿದ್ದರೇ, ಹಳಿಯಾಳ, ಶಿರಸಿ, ಮುಂಡಗೋಡ, ಪರೀಕ್ಷಾ ಕೇಂದ್ರಗಳಿಗೆ ಹಂತ ಹಂತವಾಗಿ ಪ್ರಶ್ನೆ ಪತ್ರಿಕೆಗಳನ್ನು ಕಳಿಸಲಾಯಿತು. ಯಲ್ಲಾಪುರ ಪಿ ಯು ಸಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಪ್ರಾರಂಭವಾಗುವ ಅರ್ದ ಘಂಟೆ ಮೊದಲು ಪ್ರಶ್ನೆ ಪತ್ರಿಕೆ ಕಳಿಸಲಾಗಿದ್ದು, ಶಿರಸಿ ಉಪ ವಿಭಾಗಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ಉಸ್ತುವಾರಿಯಲ್ಲಿ, ಸಂಬಂಧಿಸಿದ ತಾಲೂಕುಗಳ ಗೆಜೆಟೆಡ್ ಅಧಿಕಾರಿಗಳ ಜವಾಬ್ದಾರಿಯಲ್ಲಿ ರವಾನಿಸಲಾಯಿತು,
ಯಲ್ಲಾಪುರ ಪೊಲೀಸ್ ನಿರೀಕ್ಷಕ ವಿಜಯ ಬೀರಾದಾರ ನೇತ್ರತ್ವದಲ್ಲಿ ಪ್ರಶ್ನೆ ಪತ್ರಿಕೆ ಸಂಗ್ರಹಿಸಿಡಲಾದ ಉಪ ಖಜಾನೆಗೆ ಭದ್ರತೆ ನೀಡಲಾಗಿದ್ದುಮ ಪ್ರಶ್ನೆ ಪತ್ರಿಕೆ ರವಾನೆ ಸಂದರ್ಭದಲ್ಲಿ ತಹಶೀಲ್ದಾರ ರಾಜಶೇಖರ ಡಂಬಳ,ಪಿ ಐ ವಿಜಯ ಬೀರಾದಾರ ಬೇರೆ ಬೇರೆ ತಾಲೂಕಿನಿಂದ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

loading...

LEAVE A REPLY

Please enter your comment!
Please enter your name here