ಧರ್ಮ ಗ್ರಂಥಗಳಲ್ಲಿಸಂವಿಧಾನದ ಆಶಯಗಳಿವೆ: ನ್ಯಾಯಾಧೀಶ ಯಶವಂತ ಕುಮಾರ

0
21
loading...

ಹೊನ್ನಾವರ : ವ್ಯವಸ್ಥಿತ ಬದುಕನ್ನು ರೂಪಿಸಲು ಸಂವಿಧಾನದಲ್ಲಿ ಅಳವಡಿಸಲಾದ ಕಾನೂನು ಕಟ್ಟಳೆಗಳ ಆಶಯಗಳನ್ನು ಧರ್ಮಗ್ರಂಥಗಳಲ್ಲಿ ಕಾಣಬಹುದಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಯಶವಂತ ಕುಮಾರ ಅಭಿಪ್ರಾಯಪಟ್ಟರು.
ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ನಡೆಯುತ್ತಿರುವ ಶತಚಂಡಿ ಮಹಾಯಾಗ,ಕಾಮಕೋಡ ಹಬ್ಬ ಹಾಗೂ ಕಾಡುಬೆಳದಿಂಗಳಲ್ಲಿ ಭಾವಲಹರಿ ಕಾರ್ಯಕ್ರಮದ ಪ್ರಯುಕ್ತ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,ಕಾನೂನನ್ನು ಗೌರವಿಸುವವರನ್ನು ಕಾನೂನು ಗೌರವಿಸುತ್ತದೆ ಎಂದು ಹೇಳಿದರು.
1995ರಿಂದ ಕಾನೂನು ನೆರವು ಶಿಬಿರಗಳನ್ನು ಆಯೋಜಿಸುತ್ತ ಬಂದಿದ್ದು ಧಾರ್ಮಿಕ ಕಾರ್ಯಕ್ರಮಗಳ ಮಧ್ಯದಲ್ಲಿ ಇಂಥದ್ದೊಂದು ಶಿಬಿರ ನಡೆಸುತ್ತಿರುವುದು ಇದೇ ಪ್ರಥಮ ಬಾರಿ ಎಂದು ಹೇಳಿದ ಅವರು ಪರಿಸರ,ಜನನ-ಮರಣ,ನೋಂದಣಿ ಕಾನೂನುಗಳ ಕುರಿತು ವಿವರ ನೀಡಿದರು.
“ಜೀವರಾಶಿಯ ಉಳಿವಿಗೆ ಪರಿಸರಕ್ಕೆ ಸಂಬಂಧಿಸಿದ ಕಾನೂನು ಪರಿಪಾಲನೆ ಅತ್ಯಂತ ಅವಶ್ಯಕ’ ಎಂದು ಉಪನ್ಯಾಸ ನೀಡಿದ ವಕೀಲ ಜಿ.ಎಸ್.ಹೆಗಡೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ನಾಯ್ಕ ಮಾತನಾಡಿ,ಕಾನೂನಿನ ಜ್ಞಾನ ಸಾಗರಷ್ಟು ವಿಸ್ತಾರವಾಗಿದ್ದು ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು’ ಎಂದು ಹೇಳಿದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ.ಉಪಸ್ಥಿತರಿದ್ದರು.
ಕುಮಾರ ಪರಮೇಶ್ವರ ಭಟ್ಟ ಮಂತ್ರಘೋಷದೊಂದಿಗೆ ಪ್ರಾರ್ಥಿಸಿದರು.

loading...

LEAVE A REPLY

Please enter your comment!
Please enter your name here