ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ : ಶಾಸಕ ಪಿ.ರಾಜೀವ್ ಭರವಸೆ

0
24
loading...

ಹಾರೂಗೇರಿ 04: ರಸ್ತೆಗಳು ಅಭಿವೃದ್ಧಿಯಾದರೆ ಜನತೆ ಸಂಚರಿಸಲು ಹಾಗೂ ರೈತರಿಗೆ ಅನೂಕೂಲವಾಗಬೇಕು, ಆದ್ದರಿಂದ ಕ್ಷೇತ್ರದ ಪ್ರತಿಯೊಂದು ರಸ್ತೆ ಸುಧಾರಣೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು.
ಪಟ್ಟಣದ ಸಮೀಪದ ಅಳಗವಾಡಿ ಗ್ರಾಮದಲ್ಲಿ ನೀರಾವರಿ ಇಲಾಖೆ ಕುಡಚಿ ಇವರ ವತಿಯಿಂದ 3054ರ ಯೋಜನೆಯಡಿ ಅಂದಾಜು ಮೊತ್ತ 50ಲಕ್ಷ ರೂದಡಿ ಹುಣಸಿಕೋಡಿಯಿಂದ ಸಪ್ತಸಾಗರೆ ತೋಟದ ಕೆನಾಲವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿ ಅವರು ಮಾತನಾಡಿದರು.
ಭೀಕರ ಬರಗಾಲದಿಂದ ಭೂಮಿಯಲ್ಲಿ ಅಂತರ್ಜಲ ಕುಸಿತವಾಗಿ ಕೊಳವೆ ಬಾವಿಗಳು ಬತ್ತಿವೆ, ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಬೇಸಿಗೆ ಒಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸುವುದಾಗಿ ಶಾಸಕ ಪಿ.ರಾಜೀವ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸಹಾಯಕ ಇಂಜೀನಿಯರ ಎಸ್.ಎಸ್ ಪತ್ತಾರ, ಪಿ.ಎಸ್ ಮಾಲಗಾರ, ಗುತ್ತಿಗೆದಾರ, ಬಿ,ಎಸ್ ಪವಾರ, ತಾಪಂ ಸದಸ್ಯ ಯಲ್ಲಪ್ಪ ಶಿರಗೂರೆ, ಪ್ರಭು ಹನಜೆ, ಗೋಪಾಲ ಸಪ್ತಸಾಗರ, ಮುತ್ತಪ್ಪ ಬನಶಂಕರಿ, ಗೋಪಾಲ ಶಿರಗೂರ, ಸಿದ್ದಪ್ಪ ಸಪ್ತಸಾಗರ, ರಾಮಾ ಕೂಗೆ, ಸದಾಶಿವ ಶಿರಗೂರೆ, ಭೀಮಣ್ಣ ಆಲಗೂಣೆ, ಕುಮಾರ ಬಮ್ಮನ್ನವರ, ಮಹಾದೇವ ಬನಶಂಕರಿ, ಶ್ಯಾಮರಾವ ಬನಶಂಕರಿ, ವಸಂತ ಕೂಗೆ, ಮಹಾದೇವ ಶಿರಗೂರೆ, ಮಾರುತಿ ಪಡಚೆ, ಮುತ್ತಪ್ಪ ಹಾಳಾಣೆ, ಮಲಕಾರಿ ಸಪ್ತಸಾಗರೆ ಹಣಮಂತ ಗದಗ, ಬಾಳು ತಳವಾರ, ದತ್ತ ಸಣ್ಣಕ್ಕಿ, ದೇವಪ್ಪ ಚೌಗಲಾ, ಮಹಾದೇವ ಗಾಣಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here