ಬರಗಾಲದಲ್ಲಿ ನೇರಗಾ ಯೋಜನೆ ನೆರವು: ದಾಶ್ಯಾಳ

0
51
loading...

ಅರಟಾಳ 26: ಸರ್ಕಾರದ ಯೋಜನೆಯಾದ ನರೇಗಾ ಗ್ರಾಮದಲ್ಲಿ 26 ವರ್ಕದಲ್ಲಿ ಒಟ್ಟು 643 ಜನರು ಕೂಲಿ ಮಾಡುತ್ತಿರುವುದು ಗ್ರಾಮದ ಅಭಿವೃದ್ದಿ ಜೊತೆಗೆ ಜೀವನಸಾಗಿಸಲು ಅನೂಕೂಲವಾಗುವಲ್ಲದೆ. ಬರಗಾಲ ಬಿದ್ದು ಸಂಕಷ್ಟದಲ್ಲಿರುವ ಜನರಿಗೆ ನರೇಗಾದಿಂದ ಅನುಕೂಲವೆಂದು ತೆಲಸಂಗ ಜಿಪಂ ಸದಸ್ಯ ಗುರು ದಾಶ್ಯಾಳ ಹೇಳಿದರು.
ಅವರು ಗ್ರಾಮದಲ್ಲಿ ನಡೆದ ನರೇಗಾದ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ತಾಲೂಕಿನಲ್ಲಿ ಅತಿ ಹೆಚ್ಚು ಜನರು ಅರಟಾಳದಲ್ಲಿ ಕೂಲಿ ಕೆಲಸ ಬಯಸಿ ಬರುತ್ತಾರೆ. ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಜೊತೆಗೆ ರೈತರ ಹೊಲಗಳಲ್ಲಿ ಬದು ನಿರ್ಮಾಣವಾಗುವುದರಿಂದ ಉತ್ತಮ ಪಸಲು ಬೆಳೆಯಬಹುದು. ಗ್ರಾಮದ ಅಭಿವೃದ್ದಿಯು ಆಯಾ ಗ್ರಾಮದ ಸದಸ್ಯರ ಮೇಲೆ ನಿಂತಿದೆ. ಸರ್ಕಾರದ ವಿವಿಧ ಕೆಲಸಗಳನ್ನು ಜನರಿಗೆ ಒದಗಿಸುವ ಕೆಲಸ ಮಾಡಬೇಕು. ನರೇಗಾದಲ್ಲಿ ವಯಕ್ತಿಕ ಶೌಚಾಲಯ, ದನಗಳ ಶೆಡ್ಡು ಮಾಡಿಕೊಳ್ಳಬಹುದು. ಪ್ರತಿ ಕುಟುಂಬವು ಶೌಚಾಲಯ ನಿರ್ಮಾಣ ಮಾಡಿಕೊಡು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕೆಂದರು. ನಂತರ ಹಾಲಳ್ಳಿ ಗ್ರಾಮದಲ್ಲಿ ನಡೆದ ನರೇಗಾ ಯೋಜನೆಯ ಕಾಮಗಾರಿ ಪರಿಶಿಲಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಶಿವಪ್ಪ ಹಟ್ಟಿ, ಹಣಮಂತ ಪೂಜಾರಿ, ಮಾಳಪ್ಪ ಕಾಂಬಳೆ, ಎಮ್ ಕೆ ಜಂಬಗಿ, ಸತ್ಯಪ್ಪ ಪೂಜಾರಿ, ಮಲ್ಲಿಕಾರ್ಜುನ ತೆಲಸಂಗ, ವಿಠ್ಠಲ ಹಟ್ಟಿ, ಹಣಮಂತ ಹಟ್ಟಿ, ಕಾಶಪ್ಪ ಹೌನಗೌಡ, ಶ್ರೀಶೈಲ ಪೂಜಾರಿ, ಗುಲಾಬರಾವ ನಿಂಬಳಕರ,ಹಣಮಂತ ಸುರಪಾಲಿ ಸೇರಿದಂತೆ ಅನೇಕರು ಉಪಸ್ಥಿತರಿದರು.

loading...

LEAVE A REPLY

Please enter your comment!
Please enter your name here