ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ: ಬೈಕ್ ರ್ಯಾಲಿ

0
21
loading...

ಬೈಲಹೊಂಗಲ 09: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಪಕ್ಷಕ್ಕೆ ಆನೆಬಲ ಬಂದತ್ತಾಗಿದೆ. ಅವರ ನೇತೃತ್ವದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತ್ಯಧಿಕ ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಡಾ.ವಿಶ್ವನಾಥ ಪಾಟೀಲ ವಿಶ್ವಾಸ ವ್ಯಕ್ತ ಪಡಿಸಿದರು.
ಅವರು ಶುಕ್ರವಾರ ತಮ್ಮ ಕಛೇರಿಯಲ್ಲಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವುದಕ್ಕೆ ಸಂಭ್ರಮಾಚರಿಸಿ ಮತನಾಡಿದರು.
ಬಿಜೆಪಿ ದುರೀಣರಾದ ಮಹಾಂತೇಶ ಬಾಳಿಕಾಯಿ, ಬಾಬಣ್ಣ ಸುತಗಟ್ಟಿ ಮಾತನಾಡಿದರು. ಬಿ.ಜೆ.ಪಿ ಪಕ್ಷದ ಕಾರ್ಯಕರ್ತರು ಬಿಜೆಪಿ ಕಛೇರಿಯಿಂದ ಬೈಕ್ ರ್ಯಾಲಿ ಮುಖಾಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಿತ್ತೂರ ಚನ್ನಮ್ಮಾಜಿ ಸಮಾಧಿಗೆ ತಲುಪಿ ವೀರರಾಣಿ ಚನ್ನಮ್ಮಾಜಿ, ಶೂರ ಸಂಗೋಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಜಿ.ಪಂ ಸದಸ್ಯ ಈರಣ್ಣ ಕರೀಕಟ್ಟಿ, ತಾ.ಪಂ ಸದಸ್ಯರಾದ ಬಸಪ್ಪ ಹರಿಜನ, ಬಸನಗೌಡ ಪಾಟೀಲ, ಬಿ.ಎಮ್ ಚಿಕ್ಕನಗೌಡರ, ಗುರುಪಾದ ಕಳ್ಳಿ, ಚಂದ್ರಶೇಖರ ಚಿನಿವಾಲರ, ನಿಂಗಪ್ಪ ಚೌವಡಣ್ಣವರ, ಸಿ.ಆರ್. ಪಾಟೀಲ, ರಾಜಶೇಖರ ಪಾಟೀಲ, ಮಲಸರ್ಜಗೌಡ ಪಾಟೀಲ, ಬಿ.ಆರ್ ಪಾಟೀಲ, ಆಯ್.ಎಲ್ ಪಾಟೀಲ, ಬಿ.ಡಿ ಬಣಶೆಟ್ಟಿ, ಉದಯ ಮೂಗಿ, ಉಮೇಶ ಹೊಸಟ್ಟಿ, ಶ್ರೀಶೈಲ ಯಡಳ್ಳಿ, ಉಮೇಶಗೌಡ ಪಾಟೀಲ ಉಪಸ್ಥಿತರಿದ್ದರು.
ಜಗದೀಶ ಬೂದಿಹಾಳ ಸ್ವಾಗತಿಸಿದರು. ಬಾಳನಗೌಡ ಪಾಟೀಲ ನಿರೂಪಿಸಿದರು. ಶ್ರೀಶೈಲ ಆಲದಕಟ್ಟಿ ವಂದಿಸಿದರು.

loading...

LEAVE A REPLY

Please enter your comment!
Please enter your name here