ಬ್ಯಾಂಕ್ ಶತಮಾನೋತ್ಸವ ವೇಳೆಗೆ ನೂರು ಶಾಖೆಗಳ ಸ್ಥಾಪನೆ ಗುರಿ : ಕತ್ತಿ

0
21
loading...

ಸಂಕೇಶ್ವರ 14: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಮುಂಬರುವ 2017-18 ಸಾಲಿನಲ್ಲಿ ಬ್ಯಾಂಕು ಸ್ಥಾಪನೆಗೊಂಡು 100 ವರ್ಷಗಳು ಪೂರ್ಣಗೊಳ್ಳಲಿವೆ. ಈಗ ಜಿಲ್ಲೆಯಾದ್ಯಂತ ಒಟ್ಟು 86 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಮುಂದಿನ ಎರಡು ವರ್ಷಗಳ ಕಾಲಾವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 14 ಹೊಸ ಶಾಖೆಗಳನ್ನು ಸ್ಥಾಪನೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಬ್ಯಾಂಕು ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿ ಒಟ್ಟಾರೆ ತನ್ನ 100 ಶಾಖೆಗಳ ಮೂಲಕ ಇನ್ನು ಹೆಚ್ಚಿನ ರೈತರಿಗೆ ಸೌಲಭ್ಯವನ್ನು ಒದಗಿಸಲು ಸನ್ನದ್ಧವಾಗಿದೆಯೆಂದು ಡಿ.ಸಿ.ಸಿ.ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಅವರು ಬುಧವಾರ ಸಂಕೇಶ್ವರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಮುಂದುವರೆದು, ಪ್ರಸಕ್ತ ವರ್ಷದಲ್ಲಿ 3200 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು ಮುಂಬರುವ ವರ್ಷಗಳಲ್ಲಿ 31-3-2017 ಕ್ಕೆ ಡಿ.ಸಿ.ಸಿ.ಬ್ಯಾಂಕು 4000 ಕೋಟಿ ರೂ. ದುಡಿಯುವ ಬಂಡವಾಳ ಹೊಂದಲಿದೆಯೆಂದು ತಿಳಿಸಿದರು. ಅಲ್ಲದೇ ಪ್ರಸಕ್ತ ಹಣಕಾಸಿನ ವರ್ಷದಲ್ಲಿ 2015-16 ಮಾರ್ಚ ಅಂತ್ಯದವರೆಗೆ 2,158 ಕೋಟಿ ರೂ. ಠೇವು ಹಣವಿದ್ದು ಒಟ್ಟಾರೆ 2198 ಕೋಟಿ ಹಣ ಸಾಲ ಜೊತೆಗೆ 853.02 ಕೋಟಿ ಕೃಷಿಯೇತರ ಸಾಲ ವಿತರಣೆ ಮಾಡಿಲಾಗಿದೆ.
ಜಿಲ್ಲೆಯ ಸಮಸ್ತ ರೈತ ಬಾಂಧವರಿಗೆ ಕೃಷಿ ಚಟುವಟಿಕೆಗಳಿಗಾಗಿ ನೀರಿನ ಸದುಪಯೋಗಕ್ಕಾಗಿ ಹನಿ ನೀರಾವರಿಗೆ ಪ್ರತಿ ಎಕರೆಗೆ 20,000/- ರೂ.ಗಳನ್ನು ಶೂನ್ಯ ಬಡ್ಡಿ ದರದಲ್ಲಿ ಕೊಡಲು ಉದ್ದೇಶಿಸಲಾಗಿದ್ದು ಟ್ರ್ಯಾಕ್ಟರ್ ಖರೀದಿಗಾಗಿ 10 ಲಕ್ಷ ರೂ.ವರೆಗೆ ಕೇವಲ 3 ರೂ.ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವ ಗುರಿ ಹೊಂದಿಲಾಗಿದೆ. ಬರುವ ಜೂನ್ ತಿಂಗಳಲ್ಲಿ ಪ್ರತಿಯೊಬ್ಬ ರೈತರಿಗೆ 2 ಆಕಳು ಅಥವಾ 2 ಎಮ್ಮೆಗಳನ್ನು ಶೂನ್ಯ ಬಡ್ಡಿಯಲ್ಲಿ ಸಾಲವನ್ನು ವಿತರಿಸಲಾಗುವದು. ನಮ್ಮ ಬ್ಯಾಂಕಿನ ಮೇಲೆ ಅಪಾರ ವಿಶ್ವಾಸವನ್ನಿಟ್ಟಂಥ 5,88,000 ಠೇವುದಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತ ಹಾಗೂ 3,94,810 ಸಾಲ ಪಡೆದ ಸದಸ್ಯರಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆಂದರು.

loading...

LEAVE A REPLY

Please enter your comment!
Please enter your name here