ಭೂಸ್ವಾಧಿನ ಪ್ರಕ್ರಿಯೇ ನಡೆಸಲು ಡಿಸಿ ಸೂಚನೆ

0
26
loading...

ಬೆಳಗಾವಿ 15: ರಾಯಬಾಗ ತಾಲೂಕಿನ ಗಿರಿನಾಕನವಾಡಿ ಗ್ರಾಮದಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸುತ್ತಿರುವ 220 ಕೆ.ವಿ ವಿದ್ಯುತ್ ಕೇಂದ್ರಕ್ಕೆ ಬೇರೆ ಭೂಮಿಯನ್ನು ಗುರುತಿಸಿ ಅಥವಾ ಭೂಸ್ವಾಧಿನ ಪ್ರಕ್ರಿಯೇ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾ ಭವನದಲ್ಲಿ ಖಾಸಗಿ ಜಮೀನನ್ನು ನೇರವಾಗಿ ಖರೀದಿ ಮಾಡುವ ನಿಟ್ಟಿನಲ್ಲಿ ಭೂ ಬೆಲೆ ನಿಗಧಿ ಕರಣ ಸಮಿತಿ ಸದಸ್ಯರ ಹಾಗೂ ಭೂ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗ ಮಾರುಕಟ್ಟೆಯ ಬೆಲೆ 85 ಸಾವಿರವಿದ್ದು, ಹೊಸ ಭೂಸ್ವಾಧಿನ ಕಾಯ್ದೆ ಪ್ರಕಾರ ಮಾರುಕಟ್ಟೆಯ ಬೆಲೆಯ ಅನುಗುಣವಾಗಿ ಅದರ 3 ಪಟ್ಟು ಹೆಚ್ಚಿಗೆ ನೀಡಬಹುದು ಆ ನಿಟ್ಟಿನಲ್ಲಿ ಪ್ರತಿ ಎಕರೆ ಭೂಮಿಗೆ 3 ಲಕ್ಷ 40 ಸಾವಿರ ಹಣ ನೀಡಲಾಗುತ್ತದೆ. ಜಮೀನು ಅಭಿವೃದ್ಧಿ ಪಡಿಸಿದರೆ ಅದರ ಹಣವನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.
ಇದಕ್ಕೆ ಭೂ ಮಾಲೀಕರಾದ ಮಹೇಂದ್ರ ತಮ್ಮಣ್ಣವರ ಹಾಗೂ ಮಾರುತಿ ತಮ್ಮಣ್ಣವರ 13 ಲಕ್ಷ ರೂ ವರೆಗೆ ಪ್ರತಿ ಎಕರೆ ಭೂಮಿ ಮಾರಾಟವಾಗುತ್ತಿದೆ. ಅದರಂತೆ ಹಣ ನೀಡಿದರೆ ತಾವು ಭೂಮಿಯನ್ನು ನೀಡುವುದಾಗಿ ಹೇಳಿ ಒಪ್ಪಿಗೆ ನೀಡÀಲಿಲ್ಲ.
ಭೂಸ್ವಾಧಿನ ಪಡಿಸಿಕೊಂಡರೆ ಮಾರುಕಟ್ಟೆಯ ಬೆಲೆ ಅನುಗುಣವಾಗಿ 3 ವರ್ಷಗಳ ನಂತರ ಹಣ ಬರುತ್ತದೆ. 2015 ರಲ್ಲಿ ಮಾರುಕಟ್ಟೆ ಬೆಲೆಯ ಅನುಗುಣವಾಗಿ 1ಲಕ್ಷ 89 ಸಾವಿರ ಎಕರೆ ಭೂಮಿ ಮಾರಟವಾಗಿದೆ. ಕಾರಣ ಪ್ರತಿ ಎಕರೆ ಭೂಮಿಗೆ 4 ಲಕ್ಷ ಹಣ ನೀಡಲು ಸಭೆಯಲ್ಲಿ ತಿರ್ಮಾನಿಸಲಾಯಿತ್ತು.
ಭೂ ಮಾಲೀಕರ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ನಡುವೇ ಜಮೀನು ನಿರ್ಧಿಷ್ಟ ಬೆಲೆಗೆ ನಿಗಧಿ ಪಡಿಸಲು ಸಾಧ್ಯವಾಗÀಲಿಲ್ಲ. ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಲು ಬೇಕಾಗಿರುವ 45 ಎಕರೆ ಅವಶ್ಯವಿರುವ ಭೂಮಿಗೆ ಭೂಸ್ವಾಧಿನ ಪ್ರಕ್ರಿಯೇ ನಡೆಸಲು ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದು ಶೇ 50ರಷ್ಟು ಹಣ ಕಟ್ಟುವಂತೆ ಕೆಪಿಟಿಸಿಎಲ್‍ನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ, ರಾಯಬಾಗ ತಹಶಿಲ್ದಾರ, ಬಾಗಲಕೋಟೆಯ ಕೆಪಿಟಿಸಿಎಲ್‍ನ ಇಇ ಸಿದ್ದರಾಜು ಸೇರಿದಂತೆ ಕಂದಾಯ, ಕೆಪಿಟಿಸಿಎಲ್, ಭೂ ಮಾಲೀಕರು ಸಭೆಯಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here