ಮದ್ಯ ಮಾರಾಟ ಘಟಕಕ್ಕೆ ಪರವಾನಿಗೆ ಬೇಡ: ಜಿಲ್ಲಾಧಿಕಾರಿಗೆ ಮನವಿ

0
40
loading...

ಕಾರವಾರ : ಭಟ್ಕಳ ತಾಲೂಕಿನ ಮಣ್ಣಹೊಂಡ ಮಜರೆಯ ಜನವಸತಿ ಪ್ರದೇಶದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹೊಸದಾಗಿ ಎಂಎಸ್‍ಐಎಲ್ ರಿಟೇಲ್ ಮದ್ಯ ಮಾರಾಟ ಘಟಕ ತೆರೆಯಲು ಪ್ರಯತ್ನ ನಡೆಸಿದ್ದು ಇದಕ್ಕೆ ಯಾವುದೇ ಕಾರಣಕ್ಕೂ ಪರವಾನಿಗೆ ನೀಡದಂತೆ ಒತ್ತಾಯಿಸಿ ಇಲ್ಲಿನ ಗ್ರಾಮಸ್ಥರು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಶಿರಾಲಿ ಗ್ರಾಮ ಪಂಚಾಯತಿಯ ಪಳ್ಳಿ ಹೊಳೆಯಿಂದ ಕೆಲಸಿಕೇರಿಗೆ ಹೋಗುವ ನದಿ ದಂಡೆಯ ರಸ್ತೆ ಪಕ್ಕದಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿವೆ. ಇದು ಜನವಸತಿ ಪ್ರದೇಶವಾಗಿದ್ದು, ನಿತ್ಯ ಈ ಭಾಗದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸಂಚಾರ ಮಾಡುತ್ತಾರೆ. ಆದರೆ ಕೆಲವರು ನದಿ ದಂಡೆಯ ಪಕ್ಕದಲ್ಲಿ ಎಂಎಸ್‍ಐಎಲ್ ಮದ್ಯ ಮಳಿಗೆಯೊಂದನ್ನು ಪ್ರಾರಂಭಿಸಲು ಹುನ್ನಾರ ನಡೆಸಿದ್ದು ಇದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಭಾಗದ ಸುತ್ತಮುತ್ತಲಿನ ಜನರು ಬಹುತೇಕ ಕೂಲಿಕಾರ್ಮಿಕರಿದ್ದು, ನಿತ್ಯ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಚಿಕ್ಕ ಮಕ್ಕಳಿಂದ ಹಿಡಿದು ಹಲವರು ಕುಡಿತದ ಚಟಕ್ಕೆ ಬಲಿಯಾಗಿದ್ದು, ನಿತ್ಯ ಈ ಕುಟುಂಬ ಕಣ್ಣಿರಿನಲ್ಲಿ ಕೈತೊಳೆಯುವಂತಾಗಿದೆ. ಮದ್ಯದ ಅಂಗಡಿ ತೆರೆಯುವದರಿಂದ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವುದರಿಂದ ಶಿರಾಲಿ ಗ್ರಾಮ ಪಂಚಾಯ್ತಿಗೆ ಹಾಗೂ ಭಟ್ಕಳದ ಅಬಕಾರಿ ಇಲಾಖೆಗೂ ಕೂಡಾ ಮದ್ಯದ ಅಂಗಡಿ ಸ್ಥಾಪಿಸಲು ಅನುಮತಿ ನೀಡದಂತೆ ಹಲವು ಬಾರಿ ನೀಡಲಾಗಿದೆ. ಆದಾಗ್ಯೂ ಕೆಲವರು ತೆರೆಮರೆಯಲ್ಲಿ ಅಂಗಡಿ ಸ್ಥಾಪಿಸಲು ಕಸರತ್ತು ನಡೆಸಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ಮದ್ಯದಂಗಡಿ ತೆರೆಯಲು ಗೊತ್ತುಪಡಿಸಿದ ಸ್ಥಳ ಮುಖ್ಯ ರಸ್ತೆಯಲ್ಲಿದ್ದು, ಈ ಭಾಗದ ಕೆಲವು ದುಷ್ಕರ್ಮಿಗಳು ಕುಡಿದು ನಿತ್ಯ ಸಂಚರಿಸುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಇದೇ ಸ್ಥಳದಲ್ಲಿ ಸಂಚರಿಸಬೇಕಾಗಿರುವುದರಿಂದ ಅವರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಇಲ್ಲಿ ಮದ್ಯದಂಗಡಿ ಸ್ಥಾಪಿಸಲು ಅವಕಾಶ ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾದರು. ಒಂದೊಮ್ಮೆ ನೀಡಿದ್ದೇ ಹೌದಾದರೆ ಗ್ರಾಮಸ್ಥರಿಂದ ಉಗ್ರ ಹೋರಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂಧರ್ಭದಲ್ಲಿ ಲಕ್ಷ್ಮಣ, ಮಂಜುನಾಥ ನಾಯ್ಕ, ಮಹೇಶ ಮಡಿವಾಳ, ಶೇಖರ ಮಡಿವಾಳ. ಪಾರ್ವತಿ ಮಡಿವಾಳ, ಅರ್ಚನಾ ಕೋಡಿಯಾ ಸುಜಾತ ಕೋಡಿಯಾ ಸೇರಿದಂತೆ ವಿವಿಧ ಸ್ವ ಸಹಾಯ ಸಂಘಗಳ ಸದಸ್ಯರು ಇದ್ದರು.

loading...

LEAVE A REPLY

Please enter your comment!
Please enter your name here