ಮಹಾರಾಷ್ಟ್ರದಿಂದ ನದಿಗೆ ನೀರು ಬಿಡುಗಡೆ

0
18
loading...

ಚಿಕ್ಕೋಡಿ 15: ಮಹಾರಾಷ್ಟ್ರದ ಸೂಳಕೂಡ ಬ್ಯಾರೇಜ್‍ನಿಂದ ದೂಧಗಂಗಾ ನದಿಗೆ ಬಿಟ್ಟಿರುವ ನೀರು ಶುಕ್ರವಾರ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿಗೆ ನೀರು ತಲುಪಿದೆ. ಕೃಷ್ಣಾ ನದಿ ತೀರದಲ್ಲಿರುವ ಯಡೂರ, ಮಾಂಜರಿ, ಅಂಕಲಿ, ಸೌಂದತ್ತಿ ಗ್ರಾಮಕ್ಕೆ ಶನಿವಾರ ಸಂಜೆಯ ವರೆಗೆ ತಲುಪುವ ಸಾಧ್ಯವಿದೆ ಎಂದು ನಿರಿಕ್ಷಿಸಲಾಗಿದೆ.
ದೂಧಗಂಗಾ ಅಂತರರಾಜ್ಯ ಜಲ ಒಪ್ಪಂದದ ಅನ್ಯಯ ಮಹಾರಾಷ್ಟ್ರ ಸರ್ಕಾರ ಇದೇ 5 ರಿಂದ ಸೂಳಕೂಡ ಬ್ಯಾರೇಜ್‍ನಿಂದ ನೀರು ಬಿಟ್ಟಿದೆ ಆ ನೀರು ರಾಜ್ಯದ ಮಾಂಗೂರ, ಕಾರದಗಾ, ಸದಲಗಾ, ಬೋರಗಾಂವ, ಮಲಿಕವಾಡ ಮೂಲಕ ಕಲ್ಲೋಳ ಗ್ರಾಮ ತಲುಪಿದೆ ಎಂದು ಕರ್ನಾಟಕ ನೀರಾವರಿ ಮೂಲಗಳು ತಿಳಿಸಿವೆ
ಬೆಳೆಗೆ ನದಿ ನೀರು ಎತ್ತುವುದನ್ನು ತಡೆಯಲು ತಾಲೂಕು ಆಡಳಿತವು ನದಿ ದಂಡೆಯಲ್ಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಆದರೆ, ಮಹಾರಾಷ್ಟ್ರದ ಘೋಸರವಾಡ, ದತ್ತ ದೂಧಗಂಗಾ ನದಿ ದಂಡೆಯ ಗ್ರಾಮಗಳ ರೈತರು ನಿರಂತರವಾಗಿ ನದಿಯಿಂದ ನೀರು ಎತ್ತುವಳಿ ಮಾಡುತ್ತಿದ್ದಾರೆ ಇದರಿಂದ ರಾಜ್ಯದ ಜನರಿಗೆ ದೊರಕಬೇಕಾದ ನೀರಿನ ಪಾಲು ಸರಿಯಾದ ಪ್ರಮಾಣದಲ್ಲಿ ದೊರಕುತ್ತಿಲ್ಲ ರಾಜ್ಯ ಸರಕಾರ ಮಹಾರಾಷ್ಟ್ರದ ನದಿ ದಂಡೆಯ ಗ್ರಾಮಗಳಲ್ಲೂ ವಿದ್ಯುತ್ ಕಡಿತಗೊಳಿಸುವಂತೆ ಒತ್ತಡ ಹೇರಬೇಕು ಎಂದು ಚಿಕ್ಕೋಡಿ ತಾಲೂಕಿನ ದೂಧಗಂಗಾ ಪಾತ್ರದ ಕೃಷಿಕರು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಕಾಳಮ್ಮವಾಡಿ ಜಲಾಶಯದ ಮೂಲಕ ಹಂತಹಂತವಾಗಿ ನೀರು ಬಿಡುಗಡೆ ಮಾಡುತ್ತಿರುವುದರಿಂದ ದೂಧಗಂಗಾ ನದಿ ಪಾತ್ರದ ಗ್ರಾಮಗಳಿಗೆ ಮಾತ್ರ ನೀರಿನ ಸೌಲಭ್ಯ ದೋರಕುತ್ತಿದೆ.

loading...

LEAVE A REPLY

Please enter your comment!
Please enter your name here