ಮಾರಿಕಾಂಬಾ ಜಾತ್ರಾ ಉತ್ಸವದಲ್ಲಿ ಸೇವೆ ಸಲ್ಲಿಸಿದವರಿಗೆ ಅಭಿನಂದನೆ

0
21
loading...

ಶಿರಸಿ : ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ಜಾತ್ರಾ ಉತ್ಸವದಲ್ಲಿ ಸೇವೆ ಸಲ್ಲಿಸಿದವರಿಗೆ ದೇವಾಲಯದ ವತಿಯಿಂದ ಅಭಿನಂದಿಸಲಾಯಿತು.
ಮಂಗಳವಾರ ದೇವಾಲಯದ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಜಾತ್ರಾ ಉತ್ಸವದಲ್ಲಿ ವಿವಿಧ ಸೇವೆ ಸಲ್ಲಿಸಿದ ಹಾಗೂ ಕಾರ್ಯ ನಿರ್ವಹಿಸದವರನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕರು, ಹೋಂ ಗಾಡ್ರ್ಸ್, ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿ, ಮಾರಿಕಾಂಬಾ ದೇವಿಯೆದುರು ಎಲ್ಲರೂ ಸಮಾನರು. ದೇವಿಯ ಉತ್ಸವ ಸಂದರ್ಭದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ದೇವಾಲಯದ ಅಭಿವೃದ್ಧಿಯ ಜೊತೆಗೆ ಭಕ್ತರಿಗೆ ಅನುಕೂಲ ಆಗುವಂತಹ ಕಾರ್ಯ ಅನುಷ್ಠಾನವಾಗಬೇಕು. ವರ್ಷದಿಂದ ವರ್ಷಕ್ಕೆ ಸುಧಾರಣೆ ಆಗುವ ಜೊತೆಗೆ ಭಕ್ತಸ್ನೇಹಿ ದೇವಾಲಯ ರೂಪುಗೊಳ್ಳಬೇಕು. ಕಳೆದ ಜಾತ್ರೆಗಿಂದ ಮುಂದಿನ ಜಾತ್ರಾ ಮಹೋತ್ಸವ ಉತ್ತಮವಾಗಿ ನಡೆಯಬೇಕು. ಸಮಾಜದ ಪ್ರತೀ ಕ್ಷೇತ್ರದವರನ್ನೂ ಉತ್ಸವ ಹಾಗೂ ದೇವಾಲಯದ ಕಾರ್ಯಚಟುವಟಿಕೆಯಲ್ಲಿ ವಿಶ್ವಾಸದ ಮೂಲಕ ಸಹಾಯ ಪಡೆಯಬೇಕು. ಧಾರ್ಮಿಕ ಕ್ಷೇತ್ರವಾಗಿದ್ದರೂ ಕೂಡ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಇಡೀ ನಾಡಿಗೆ ಮಾದರಿಯಾಗುವ ಕಾರ್ಯ ಆಗಬೇಕು ಎಂದು ನೂತನವಾಗಿ ದೇವಾಲಯದ ಆಡಳಿತ ಮಂಡಳಿಗೆ ಆಯ್ಕೆಗೊಂಡ ಧರ್ಮದರ್ಶಿಗಳಿಗೆ ಕಿವಿಮಾತನ್ನು ಹೇಳಿದರು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಪಟ್ಟಣ, ರಾಮಚಂದ್ರ ಭಟ್ಟ, ಬಾಬುದಾರ ಮುಖಂಡ ಜಗದೀಶ ಗೌಡ, ಮಾಜಿ ಧರ್ಮದರ್ಶಿಗಳಾದ ರಾಜಾರಾಮ ಹೆಗಡೆ, ಜ್ಯೋತಿ ಭಟ್ಟ, ಮಂಜುನಾಥ ಸಾಗರಕರ, ರಮೇಶ ದಬ್ಬೆ, ಪಿ.ಎಸ್.ಐ. ಸತ್ಯಪ್ಪ ಹುಕ್ಕೇರಿ, ಗೃಹ ರಕ್ಷಕ ದಳದ ಮಂಜುನಾಥ ಶೇಟ್ ಹಾಗೂ ಇತರರು ಇದ್ದರು.

loading...

LEAVE A REPLY

Please enter your comment!
Please enter your name here