ಮೇ.3ರಂದು ಗುರುವಂದನೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ

0
17
loading...

ಭಟ್ಕಳ : ಮಾವಳ್ಳಿಯ ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಹಾಗೂ ಸಾರದೊಳೆಯ ನಾಮಧಾರಿ ಅಭಿವೃದ್ಧಿ ಸಂಘದಿಂದ ಮೇ. 3 ರಂದು ಶಿರಾಲಿಯ ಸಾರದೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಗುರು ವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕುರಿತು ರವಿವಾರ ಬೆಳಿಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಮಾವಳ್ಳಿಯ ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಈಶ್ವರ ಎನ್ ನಾಯ್ಕ ಉಜಿರೆಯ ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಧ್ಯಾತ್ಮಿಕ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಶ್ರೀ ಮಠದಲ್ಲಿ ಇಂದು ರಾಜ್ಯದ ವಿವಿಧ ಭಾಗದ ಅನೇಕ ವಿದ್ಯಾರ್ಥಿಗಳು ಉಚಿತವಾಗಿ ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀಗಳ ನೇತೃತ್ವದಲ್ಲಿ ಶ್ರೀ ಮಠದಲ್ಲಿ ಉತ್ತಮ ಕಾರ್ಯಗಳು ಜರುಗುತ್ತಿದ್ದು, ಇತ್ತೀಚೆಗೆ ಬ್ರಹ್ಮ ರಥೋತ್ಸವ, ರಾಮತಾರಕ ಮಂತ್ರ ಸಪ್ತಾಹ ಯಶಸ್ವಿಯಾಗಿ ನೆರವೇರಿದೆ ಎಂದ ಅವರು ಮೇ. 3 ರಂದು ಬೆಳಿಗ್ಗೆ ಹಳೇಕೋಟೆ ಹನುಮಂತ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ 12 ಗಂಟೆಯಿಂದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಗುರುವಂದನಾ ವiತ್ತು ಆಶೀರ್ವಚನ ನಡೆಯಲಿದೆ. ಇದಕ್ಕೂ ಪೂರ್ವದಲ್ಲಿ ಅಂದು ಬೆಳಿಗ್ಗೆ ಶ್ರೀಗಳನ್ನು ಬೆಳಕೆ ಗಡಿಯಿಂದ ಬೈಕ್ ರ್ಯಾಲಿಯ ಮೂಲಕ ಸಾರದೊಳೆ ದೇವಸ್ಥಾನಕ್ಕೆ ಕರೆತರಲಾಗುವುದು. ಎ. 30 ರಂದು ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲು ಜಾಗೃತಿ ರ್ಯಾಲಿ ಕೂಡ ನಡೆಸಲು ನಿರ್ಧರಿಸಲಾಗಿದೆ ಎಂದ ಅವರು ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇವಾ ಸಮಿತಿಯ ಮುಖಂಡ ರಾಮಾ ಎಂ. ಮೊಗೇರ, ಮುಖಂಡರಾದ ಜೆ ಜೆ ನಾಯ್ಕ, ಶಂಕರ ನಾಯ್ಕ, ಸಂತೋಷ ನಾಯ್ಕ, ಕಿಶೋರ ನಾಯ್ಕ, ರಾಮ ನಾಯ್ಕ, ವಾಸು ನಾಯ್ಕ, ಎಂ ಜಿ ನಾಯ್ಕ ಮತ್ತಿತರರಿದ್ದರು.

loading...

LEAVE A REPLY

Please enter your comment!
Please enter your name here