ಶಿರಗುಪ್ಪಿ ಗ್ರಾಮಕ್ಕೆ ಕೇಂದ್ರದ ಪ್ರಶಸ್ತಿ ಗರಿ

0
36
loading...

ಕಾಗವಾಡ 25: ರಾಜ್ಯ ಮತ್ತು ಜಿಲ್ಲೆಯ ಗಡಿಗ್ರಾಮವಾಗಿರುವ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮಕ್ಕೆ ಕೇಂದ್ರ ಸರಕಾರದ 2014-15 ನೇ ಸಾಲಿನ ಪಂಚಾಯತ ಶಶಕ್ತಿಕರಣ ಪ್ರಶಸ್ತಿಯನ್ನು ರವಿವಾರ ದಿ. 24 ರಂದು ಜಾರ್ಖಂಡ ರಾಜ್ಯದ ಜೇಮಶೇಠಪೂರದಲ್ಲಿ ಜರುಗಿರುವ ‘ಪಂಚಾಯತ ರಾಜ ದಿನ’ ನಿಮಿತ್ಯವಾಗಿ ಕೆಂದ್ರದ ಪಂಚಾಯತ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಚೌಧರಿ ಬಿರೇಂದರ ಸಿಂಗ ಇವರು ನೀಡಿ ಸನ್ಮಾನಿಸಿದ್ದಾರೆ.
ಜೇಮಶೇಠಪೂರದಲ್ಲಿ ಜರುಗಿರುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಪಂಚಾಯತಿ ರಾಜ್ಯ ಸಚಿವರಿಂದ ಶಿರಗುಪ್ಪಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಮ್ಮದ ಬಾಳಾ ಗೌಂಡಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರಶ್ಮೀ ರಾಜೇಂದ್ರ ಅಕಿವಾಟೆ, ಸದಸ್ಯರಾದ ರಾಮಗೌಡಾ ಪಾಟೀಲ, ವಿನೇಶ ಪಾಟೀಲ, ಬಾಹುಸಾಹೇಬ ಕಾಗವಾಡೆ, ರಾಮು ಕಾಂಬಳೆ, ಸುಭಾಷ ವಡ್ಡರ, ಸುನಂದಾ ನಾಂದಣಿ, ಸುಷ್ಮಾ ಸುತಾರ, ಪಿ.ಡಿ.ಒ ಗೋಪಾಲ ಮಾಳಿ ಉಪಸ್ಥಿತರಿದ್ದರು.
ಗ್ರಾಮದ ಒಟ್ಟು ಜನಸಂಖ್ಯೆ 9683 ಇದ್ದು, ಗ್ರಾಮದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಸುವರ್ಣಗ್ರಾಮ ಯೋಜನೆ 1.14 ಕೋಟಿ, ಜಲನಿರ್ಮಲ ಯೋಜನೆ 3 ಕೋಟಿ ರೂ ಅನುದಾನ ತೆಗೆದುಕೊಂಡು ಗ್ರಾಮದಲ್ಲಿ ಸಂಪೂರ್ಣ ರಸ್ತೆಗಳು, ಸಿಮೆಂಟ್ ರಸ್ತೆ, ಡಾಂಬರಿ ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದಾರೆ. ಗ್ರಾಮದ 8 ವಾರ್ಡಗಳಲ್ಲಿ ಈ ಯೋಜನೆ ಪೂರ್ಣಗೊಳಿಸಿದ್ದಾರೆ.
24 ಘಂಟೆ ಶುದ್ಧ ಕುಡಿಯುವ ನೀರು: ಜಲನಿರ್ಮಲ ಯೋಜನೆ ಯಶಸ್ವಿಗೋಳಿಸಿ ಈ ಯೋಜನೆ ಮುಖಾಂತರ ಬೆಸಿಗೆ ಕಾಲದಲ್ಲಿಯು 24 ಘಂಟೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಜಲಧೂತ ನೀರಿನ ವಾಹನದ ಮೂಲಕ ಮನೆ-ಮನೆಗೆ ಹೋಗಿ ಸಂಪೂರ್ಣ ಶುದ್ಧೀಕರಣಗೊಳಿಸಿರುವ ಆರ್‍ಒ ನೀರು ಪೂರೈಸುತ್ತಿದ್ದಾರೆ. ಇಲ್ಲಿಗೆ ಶುದ್ಧೀಕರಣಗೊಳಿಸಿದ ನೀರು ಗ್ರಾಮ ಪರಿಸರದಲ್ಲಿರುವ ಜುಗೂಳ, ಮಂಗಾವತಿ, ಶಾಹಪೂರ, ಇಂಗಳಿ ಗ್ರಾಮಗಳಿಂದ ಇಲ್ಲಿಗೆ ಬಂದು ನೀರು ಸಾಗಿಸುತ್ತಿದ್ದಾರೆ.
ಮಾದರಿ ಗ್ರಾಮ ಪಂಚಾಯತಿ ಎಲ್ಲ ಕಾರ್ಯ ಕಲಾಪ ವಿಕ್ಷೀಸಲು ರಾಜ್ಯದ ಅನೇಕ ಗ್ರಾಮಗಳಿಂದಾ ಗ್ರಾಮಪಂಚಾಯತಿ ಸದಸ್ಯರು ಅಧಿಕಾರಿಗಳು ಭೆಟ್ಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಗ್ರಾಮಕ್ಕೆ 7ನೇ ಪ್ರಶಸ್ತಿ ಲಬ್ಬಿಸಿದ್ದರಿಂದಾ ಗ್ರಾಮದ ಹೆಸರು ರಾಷ್ಟ್ರ ಮಟ್ಟಕ್ಕೆ ಮಿಂಚಿದೆ. ಇದರಿಂದಾ ಗ್ರಾಮದ ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.

loading...

LEAVE A REPLY

Please enter your comment!
Please enter your name here