ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಸೂಕ್ತ ಕ್ರಮ ವಹಿಸದ ಪುರಸಭೆ

0
29
loading...


ಮುಂಡರಗಿ : ತಾಲೂಕಿನ ಕೆ.ಪಿ.ಟಿ.ಸಿ.ಎಲ್ ಕಛೇರಿ ಎದುರಿಗಿನ ಶುಧ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿ ಎಲ್ಲೆಂದರಲ್ಲೆ ನೀರು ನಿಂತು ಗಬ್ಬು ವಾಸನೆ ಬಿರುತ್ತಿದೆ. ಇಲ್ಲಿನ ಸುತ್ತ ಮುತ್ತ ಇರುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಈ ಕುರಿತು ಎಚ್ಚರಿಕೆ ವಹಿಸಬೇಕಾದ ಪುರಸಭೆ ಯಾವಕ್ರಮವನ್ನು ಕೈಗೊಳ್ಳುತ್ತಿಲ್ಲ ಜೊತೆಗೆ ಶುದ್ದ ಕುಡಿಯುವ ನೀರಿನ ಘಟಕದಿಂದ ಬರುವ ಆಶುದ್ದವಾದ ನೀರು ಸರಾಗವಾಗಿ ಚರಂಡಿಗೆ ಹರಿಯದೆ ಅಲ್ಲಿಯೇ ನೀತು ಗಬ್ಬು ವಾಸನೇ ಹರಡುವದರೊಂದಿಗೆ ಸೊಳ್ಳೆಯ ಉತ್ಪತ್ತಿಗೆ ಕಾರಣವಾಗುತ್ತಿದೆ.
ಸಾರ್ವಜನಿಕರು ದಿನ ನಿತ್ಯ ನೀರು ತೆಗೆದುಕೊಂಡು ಹೂಗಲು ಬರುತ್ತಾರೆ ಅವರೆಲ್ಲರು ಮೂಗು ಮುಚ್ಚಿಕೊಂಡು ನೀರು ಹಿಡಿಯುವ ಪರಸ್ಥಿತಿ ನೀರ್ಮಾಣವಾಗಿದೆ. ಇಲ್ಲಿನ ಪರಿಸರ ತುಂಬಾ ಹದಗೆಟ್ಟಿರುವದರಿಂದ ಆರೋಗ್ಯದ ಮೇಲೆ ದುಸ್ಪರಿಣಾಮ ಬೀರತೂಡಗಿವೆ.
ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಅಶುದ್ಧನೀರನ್ನು ಹೂರಗೆ ಬಿಡುವದರಿಂದ ಆ ನೀರು ಪಕ್ಕದಲ್ಲಿ ಇರುವಂತಹ ತಗ್ಗು ದಿನ್ನೆಗಳಲ್ಲಿ ನೀರು ತುಂಬಿಕೊಂಡು ಗಬ್ಬು ವಾಸನೆ ಹರಡುತ್ತಿದೆ. ಇದೇ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ತುಂಬಾ ತೂಂದರೆ ಅನುಬವಿಸುವಂತಾಗಿದೆ. ಹಾಗೆ ರಸ್ತೆಯುದ್ದಕ್ಕೂ ಗಲೀಜು ನೀರು ನಿಂತಿದೆ. ರಸ್ತೆ ದಾಟಲು ಸಾರ್ವಜನಿಕರು ಹರಸಾಹಸ ಪಡುವಂತಗಿದೆ. ಈ ಕೊಡಲೇ ಪುರಸಭೆಯವರು ಇತ್ತ ಗಮನ ಹರಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಆಶಯವಾಗಿದೆ.

loading...

LEAVE A REPLY

Please enter your comment!
Please enter your name here