ಸತ್ಯ ಮತ್ತು ಸೌಂದರ್ಯದ ಹುಡುಕಾಟವೇ ನನ್ನ ನಾಟಕ: ಎಸ್.ಮಾಲತಿ

0
33
loading...


ಧಾರವಾಡ : ಸತ್ಯ ಮತ್ತು ಸೌಂದರ್ಯದ ಹುಡುಕಾಟವೇ ನನ್ನ ನಾಟಕ, ರಂಗಭೂಮಿಯ ಆಧ್ಯತೆ ಎಂದು ಹಿರಿಯ ರಂಗ ನಿರ್ದೇಶಕಿ ಎಸ್.ಮಾಲತಿ ಹೇಳಿದರು.
ರಂಗಾಯಣ ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ಮಾತನಾಡಿ, ಆರಂಭದಲ್ಲಿ ಮಕ್ಕಳ ನಾಟಕಗಳತ್ತ ಒಲವು ಬೆಳೆಸಿಕೊಂಡಿದ್ದ ನಾನು ನಂತರ ಸ್ತ್ರೀ ವಾದಿ ನೆಲೆಯ ನಾಟಕಗಳತ್ತ ಮುಖ ಮಾಡಿದೆ. ಹೆಣ್ಣು ಮಕ್ಕಳು ಅನುಭವಿಸುವ ನೋವು, ಶೋಷಣೆ, ಕೌಟುಂಬಿಕ ದೌರ್ಜನ್ಯಗಳು ಅಂಥ ನಾಟಕಗಳನ್ನು ರೂಪಿಸಲು ಪ್ರೇರಣೆಯಾದವು ಎಂದರು.
ಪ್ರತಿಯೊಬ್ಬ ನಿರ್ದೇಶಕ ನಾಟಕವೊಂದನ್ನು ಸಿದ್ಧಪಡಿಸಲು ಕಥೆಯೊಂದನ್ನು ಆಯ್ಕೆ ಮಾಡಿಕೊಳ್ಳುವಾಗಲೇ ಆತನ ಹುಡುಕಾಟ ಆರಂಭಗೊಳ್ಳುತ್ತದೆ. ಅದು ದಕ್ಕಿದ ಮೇಲೆ ಅದಕ್ಕೆ ಭಿನ್ನ ಅರ್ಥಗಳನ್ನು ನೀಡಲು ಪ್ರಯತ್ನಿಸುತ್ತಾನೆ. ಆತನ ಕಸುಬುದಾರಿಕೆ ಕಾಣವುದೇ ಆಗ. ನನ್ನ ನಾಟಕಗಳಲ್ಲಿ ಕಥೆ, ಅಭಿನಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತೇನೆ ಹೊರತು ತಂತ್ರಗಾರಿಕೆಗಳಿಗೆ ಅಲ್ಲ. ಕಥೆಯನ್ನು ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ನನ್ನ ಆದ್ಯತೆ ಎಂದರು. ಸಂವಾದದಲ್ಲಿ ಶರಣ್ಯ ಮತ್ತು ಮಂಜು ಬಡಿಗೇರ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here