ಸರಕಾರಿ ಶಾಲೆ ಕಟ್ಟಡಕ್ಕೆ ಖಾಸಗಿ ನಿವೇಶನ ಅತಿಕ್ರಮಣ : ಆರೋಪ

0
30
loading...

ಕುಷ್ಟಗಿ 14: ಇಲ್ಲಿನ 3ನೇ ವಾರ್ಡನ ಅನ್ನದಾನೇಶ್ವರ ನಗರದಲ್ಲಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಹಾಗೂ ಶಾಲಾ ಕಟ್ಟಡಕ್ಕಾಗಿ ಖಾಸಗಿ ವ್ಯಕ್ತಿ ಹನಮಂತಪ್ಪ ನಿಲೋಗಲ್ ಇವರಿಗೆ ಸೇರಿದ ಐದಾರು ವಸತಿ ನಿವೇಶನದಲ್ಲಿನ ಸುಮಾರು 100 ಚದರ ಅಡಿಗಳನ್ನು ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ್ದೂ ಅಲ್ಲದೇ ಅದಕ್ಕೆ ಕಂಪೌಂಡ ಸಹ ನಿರ್ಮಾಣ ಮಾಡಲಾಗಿದೆ ಎಂದು ವಕೀಲರಾದ ಹನಮಂತಪ್ಪ ನಿಲೋಗಲ್ಲ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರ್ವೇ ನಂಬರ 102 ವಿಸ್ತಿರ್ಣ 7 ಎಕರೆ 32 ಗುಮಟೆ ಜಮೀನನ್ನು ನಾವೇ ಸವತಿ ನಿವೇಶನಕ್ಕಾಗಿ ಎನ್.ಎ. ಮಾಡಿಸಿ ಅದರಲ್ಲಿ ಸರಕಾರದ ನಿಯಮದಂತೆ ಸಾರ್ವಜನಿಕ ಉದ್ಯಾನವನ, ಕಟ್ಟಡಗಳಿಗಾಗಿ ಸಿ.ಎ. ಸೈಟುಗಳನ್ನು ಮಾಡಿಸಿ ಅದರಂತೆ ನೀಡಿರುತ್ತೇವೆ. ನಾನು ಬೆಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಿರುವದಿರಂದ ನನ್ನ ಗಮನಕ್ಕೆ ತಾರದೇ ಇದೇ ಪ್ಲಾಟಿನಲ್ಲಿ ಸರಕಾರಿ ಶಾಲೆಯನ್ನು ನಿರ್ಮಿಸಲಾಗಿದೆ. ಈ ಶಾಲಾ ಕಟ್ಟಡಕ್ಕೆ ಪುರಸಭೆಯಿಂದ ಯಾವುದೇ ಕಟ್ಟಡ ಪರವಾನಿಗೆ ಪಡೆದಿಲ್ಲ. ನಮ್ಮ ಪ್ಲಾಟ್ ನಂಬರಿನ 170 ರಿಂದ 176ರ ವರೆಗಿನ ಪ್ಲಾಟುಗಳ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ನಾನು ಸಂಬಂದಿಸಿದ ಬಿಇಓ ಹಾಗೂ ಪುರಸಭೆಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದು ಜಾಗ ಅತಿಕ್ರಮಣ ಮಾಡಿರುವುದು ದೃಢಪಟ್ಟಿರುವುದರಿಂದ ಕೂಡಲೇ ಕಂಪೌಂಡ್‍ನ್ನು ತೆರವುಗೊಳಿಸಿ ನಮ್ಮ ಜಾಗವನ್ನು ನಾನು ಹದ್ದುಬಸ್ತ್ ಮಾಡಿಕೊಳ್ಳುತ್ತೇನೆ. ಇದಕ್ಕೆ ತಕರಾರು ತೆಗೆದರೆ ಕಾನೂನು ರೀತ್ಯ ಹೋರಾಟ ಮಾಡಿ ನನ್ನ ಆಸ್ತಿಯನ್ನು ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದರು.

“ಸದರಿ ಶಾಲಾ ಕಟ್ಟಡ ಹಾಗೂ ಕಂಪೌಂಡನ್ನು ಮೇಲಾಧಿಕಾರಿಗಳ ಸೂಚನೆಯಂತೆ ಪುರಸಭೆಯವರು ನೀಡಿದ ಜಾಗದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ಒಂದು ವೇಳೆ ಜಾಗ ಅತಿಕ್ರಮಣ ಆಗಿದ್ದರೆ ಕಂಪೌಂಡನ್ನು ಒಡೆದು ಹಾಕಿ ಜಾಗವನ್ನು ಬಿಟ್ಟು ಕೊಡಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇನೆ.”
………..ಎಂ.ಬಿ. ಮೊರುಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ.

loading...

LEAVE A REPLY

Please enter your comment!
Please enter your name here