ಸಾಯಿ ಮಂದಿರ ನಿರ್ಮಾಣ ಕಾರ್ಯ ಶ್ಲಾಘನೀಯ: ಮಾರಿಹಾಳ

0
17
loading...

ಚೆನ್ನಮ್ಮ ಕಿತ್ತೂರು 23: ಕಿತ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಯಿ ಮಂದಿರ ಇರಲಿಲ್ಲ ಜಕಾತಿ ಕುಟುಂಬದವರು ತಮ್ಮದೆ ಜಮೀನಿನಲ್ಲಿ ಈಗ ಮಂದಿರ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವದು ಶ್ಲಾಘನೀಯ. ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಸಾಯಿ ಭಕ್ತರು ಸಹಕಾರ ನೀಡಬೇಕೆಂದು ಮಾಜಿ ಶಾಸಕ ಸುರೇಶ ಮಾರಿಹಾಳ ಹೇಳೀದರು.

ಇಲ್ಲಿಯ ಹೆದ್ದಾರಿ ಪಕ್ಕದ ತಿಮ್ಮಾಪೂರ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಸಾಯಿ ಮಂದಿರ ಛಾವಣಿ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಜಕಾತಿ ಕುಟುಂಬದವರು ಈಗಾಗಲೇ ಮಂದಿರ ನಿರ್ಮಾಣಕ್ಕೆ ರೂ 10 ಲಕ್ಷ ಖರ್ಚು ಮಾಡಿದ್ದು, ಮಂದಿರ ನಿರ್ಮಾಣಕ್ಕೆ ರೂ. 25 ಲಕ್ಷ ಅಂದಾಜು ಮಾಡಲಾಗಿದೆ. ಸಾರ್ವಜನಿಕವಾಗಲಿರುವ ಈ ಮಂದಿರ ನಿರ್ಮಾಣದ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.

ಶಿವಾನಂದ ಜಕಾತಿ ಮಾತನಾಡಿ ಮಂದಿರ ನಿರ್ಮಾಣಕ್ಕೆ ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ವಿಶ್ವನಾಥ ಶೆಟ್ಟರ, ಆನಂದ ಕತ್ತಿಶೆಟ್ಟಿ, ಯಲ್ಲಪ್ಪ ವಕ್ಕುಂದ, ಸುನೀಲ ಘೀವಾರಿ, ಬಸವರಾಜ ಕುಪ್ಪಸಗೌಡರ, ದಿನೇಶ ವಳಸಂಗ, ಗುರುಸಿದ್ದಯ್ಯ ಕಲ್ಮಠ, ಬಾಬಣ್ಣ ವಳಸಂಗ, ಸಂದೀಪ ದೇಶಪಾಂಡೆ, ಡಾ. ಸದಾನಂದ ಬೆಂಬಳಗಿ, ಸುರೇಶ ಸೂರ್ಯವಂಶಿ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here