ಹನುಮರಹಳ್ಳಿ ಗ್ರಾಪಂ ಬಿ.ಜೆ.ಪಿ ಬೆಂಬಲಿತರ ಜಯಭೇರಿ

0
21
loading...

ಶಿಗ್ಗಾವಿ : ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯ 9 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಬ್ಯರ್ಥಿಗಳು 8 ಸ್ಥಾನUಳಲ್ಲಿ ಜಯಗಳಿಸಿ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.
ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನ ಮರದ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಾವು ಜಯಗಳಿಸಿದ್ದೇವೆ ಹಾಗೂ ಅವರ ಅಭಿವೃದ್ದಿಕಾರ್ಯಗಳನ್ನು ಜನರಿಗೆ ತಲುಪಿಸಿ, ಉತ್ತಮ ಕಾರ್ಯಮಾಡುವದಾಗಿ ನೂತನ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಹೇಳಿದರು.
ನೂತನ ಬಿಜೆಪಿ ಬೆಂಬಲಿತ ಗ್ರಾಪಂ ಚುನಾಯಿತ ಪ್ರತಿನಿಧಿಗಳಾದ ಕಸ್ತೂರೆವ್ವ.ಸಿ.ಪಾಟೀಲ, ಮಲ್ಲವ್ವ ಹೈಬತ್ತಿ, ಮಾರುತಿ ಹ ವೆಂಕಣ್ಣವರ, ನಿಂಗನಗೌಡ್ರ ಮೇಲಿನಮನಿ, ಲಕ್ಷ್ಮಿ ಮಾ ಕಬ್ಬೇರ, ನೀಲವ್ವ ವಾಲೀಕಾರ, ಶಿವಾನಂದ ಚ ಜೋಳದ, ಮಾದೇವಿ ಬಿ ಪಾಟೀಲ ಇವರಿಗೆ ಜಿಪಂ ಸದಸ್ಯಿಣಿ ಶೋಭಾ ಚ ಗಂಜೀಗಟ್ಟಿ ಹಾಗೂ ಮಾಜಿ ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಬಗಾಡೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಅಭಿನಂದಿಸಿದರು.
ಎಸ್ ಬಿ ಪಾಟೀಲ, ನಿಂಗಪ್ಪ ಕಳ್ಳಿಮನಿ, ಎನ್ ಎಸ್ ಗುಡ್ಡನಗೌಡ್ರ, ಸೋಮಪ್ಪ ಗಂಜೀಗಟ್ಟಿ, ಚಂದ್ರಶೇಖರ ಗಂಜೀಗಟ್ಟಿ, ವಿಠ್ಠಲ ಮೋತೆನವರ, ರೇಣುಕಾ ಪಾಟಿಲ, ವೀರಬದ್ರಗೌಡ ಪಾಟೀಲ, ಬಾಬುಸಾಬ ನದಾಫ, ಬಸನಗೌಡ ಮೇಲಿನಮನಿ, ಶಿದ್ದಪ್ಪ ವಾಲ್ಮೀಕಿ, ಮಾರುತಿ ಹಡಪದ ಸೇರಿದಂತೆ ನೂರಾರು ಗ್ರಾಮಸ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ದೂರವಾಣಿ ಮುಖಾಂತರ ಚುನಾಯಿತರಿಗೆ ಅಭಿನಂದನೆ ತಿಳಿಸಿದ್ದಾರೆ ಹಾಗೂ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳು ಹಾಗೂ ತಾಲೂಕಿನಲ್ಲಿ ಆದ ಅಭಿವೃದ್ದಿ ಕಾರ್ಯಗಳಿಗೆ ಗ್ರಾಮಗಳ ಜನತೆ ಬೆಂಬಲ ಸೂಚಿಸಿ ಮತ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here