ಹಿಂದೂ ಜನಜಾಗೃತಿ ಸಮಿತಿಯಯಿಂದ ಮನವಿ

0
23
loading...


ಶಿರಸಿ : ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆಗಾಗಿ ಜಾರಿಗೊಳಿಸಿದ ಯೋಜನೆಗಳ ಮೇಲೆ ನಿರ್ಬಂಧ ಹೇರಬೇಕು. ಹಸುಗಳ ಚರ್ಮ ಹಾಗೂ ಎಲುಬುಗಳಿಂದ ಕಂದಾಯ ವಸೂಲಿ ಮಾಡುವ ಯೋಜನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು 2016ರ ಮುಂಗಡಪತ್ರದಲ್ಲಿ ಹಿಂದೂಗಳನ್ನು ಹೊರತುಪಡಿಸಿ ಇತರ ಧರ್ಮೀಯರ ಕಲ್ಯಾಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿದೆ. ಹಿಂದೂಗಳ ವಿಕಾಸಕ್ಕಾಗಲೀ, ದೇವಸ್ಥಾನಗಳಿಗಾಗಲಿ ಒಂದು ರೂಪಾಯಿ ಹಣ ನೀಡಿಲ್ಲ. ಜಾತ್ಯಾತೀತ ಎಂದು ಹೇಳುವ ಸರ್ಕಾರ ಮುಸಲ್ಮಾನ ಮತ್ತು ಕ್ರೈಸ್ತರಿಗೆ ಬಜೆಟ್‍ನಲ್ಲಿ ಹೆಚ್ಚಿನ ಹಣ ನೀಡಿದೆ. ಇದು ಬಹುಸಂಖ್ಯಾತರಿಗೆ ಮಾಡಿದ ಅನ್ಯಾಯವಾಗಿದ್ದು ತಕ್ಷಣ ಅಲ್ಪಸಂಖ್ಯಾತರಿಗೆ ಬಜೆಟ್‍ನಲ್ಲಿ ನೀಡಿದ ಅನುದಾನ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಪಶು ಸಂಗೋಪನಾ ಇಲಾಖೆಯಡಿ 25 ಗೋಶಾಲೆಗಳನ್ನು ಆರಂಭಿಸಿ ಅವುಗಳ ಖರ್ಚನ್ನು ನೀಗಿಸಲು ಸಹಜವಾಗಿ ಸಾವನ್ನಪ್ಪಿದ ಹಸುಗಳ ಚರ್ಮ ಮತ್ತು ಎಲುಬುಗಳ ಮಾರಾಟ ಮಾಡುವ ಯೋಜನೆ ರೂಪಿಸಿದೆ. ಚರ್ಮ ಮತ್ತು ಎಲುಬು ಮಾರಾಟ ಮಾಡಿ ಅದರ ಮೇಲಿನ ಕಂದಾಯ ವಸೂಲಿ ಮಾಡುವ ಈ ನಿರ್ಣಯ ಹಿಂದೂಗಳ ಶ್ರದ್ಧೆಯ ಮೇಲೆ ಆಘಾತವಾಗಿದೆ. ಕೂಡಲೇ ಸರ್ಕಾರ ಈ ಯೋಜನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈ ವೇಳೆ ಪ್ರಸನ್ನ ಕಾಮತ್, ಸತೀಸ ಕುಮಟಾಕರ್, ಸುಮಂಗಲಾ ನಾಯ್ಕ, ಜಯಶ್ರೀ ಹೆಗಡೆ, ಭಾವನಾ ನೇತ್ರೇಕರ್, ಗಣೇಶ ಭಂಡಾರಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here