ಹಿರೇನಂದಿಹಳ್ಳಿ : ನೂತನ ರೈತ ಸಂತೆ ಉದ್ಘಾಟನೆ

0
20
loading...

ಚನ್ನಮ್ಮ ಕಿತ್ತೂರು 02: ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಲಾಭಾಂಶ ಸಿಗುತ್ತಿರಲಿಲ್ಲ ಇದನ್ನು ಅರಿತು ರೈತ ಸಂತೆ ಪ್ರಾರಂಭಿಸಲಾಗಿದೆ ಎಂದು ಬೈಲಹೊಂಗಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಅಧ್ಯಕ್ಷ ಉಮೇಶ ಹೊಸೆಟ್ಟಿ ಹೇಳಿದರು.
ಗ್ರಾಮ ಪಂಚಾಯತಿ ಹಿರೇನಂದಿಹಳ್ಳಿ ಹಾಗೂ ಬೈಲಹೊಂಗಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಸಹೋಗದಲ್ಲಿ ನೂತನವಾಗಿ ರೈತ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶ ಜನರು ಬೆಳೆಯುವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಎಪಿಎಂಸಿಯಿಂದ ಗ್ರಾಮೀಣ ಸಂತೆಗಳನ್ನು ಪ್ರಾರಂಭಿಸಲಾಗುತ್ತಿದೆ ಗ್ರಾಮೀಣ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಾಜಿ ಅಧ್ಯಕ್ಷ ವಿರೂಪಾಕ್ಷ ಮಾರಿಹಾಳ, ಸಹಕಾರಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ನೀಲ್ಲಪ್ಪ ನೇಗಿನಾಳ, ರಾಜೇಶ ಹೊಸೆಟ್ಟಿ, ಮಂಜುನಾಥ ದಾಸನಕೊಪ್ಪ, ಬಸನಗೌಡ ಪಾಟೀಲ, ಗಂಗಪ್ಪ ಹೊಸಮನಿ, ಸುರೇಶ ಮುತ್ಯೆನ್ನವರ, ಮಹಾರುದ್ರ ಜೊಡಂಗಿ, ಸಂಗಪ್ಪ ಗುರಬಸನವರ, ಮಲ್ಲನಗೌಡ ಪಾಟೀಲ, ನಿಂಗಪ್ಪ ಅಂಗಡಿ, ಈರಪ್ಪ ಗಾಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

loading...

LEAVE A REPLY

Please enter your comment!
Please enter your name here