ಅವರಾದಿ ವೀರಪ್ಪನವರ ಅವಹೇಳನ: ಕೃತಿ ಮುಟ್ಟುಗೋಲಿಗೆ ಒತ್ತಾಯ

0
33
loading...

ಚನ್ನಮ್ಮ ಕಿತ್ತೂರು 13: ಕಿತ್ತೂರು ರಾಣಿ ಚನ್ನಮ್ಮನ ಸಂಸ್ಥಾನದಲ್ಲಿ ಸರ್ದಾರರಾಗಿದ್ದ ಅವರಾದಿ ವೀರಪ್ಪನ ಕುರಿತು ಅವಮಾಸಿದ ವಿಷಯವಿರುವ ಪುಸ್ತಕವನ್ನು ಮುಟ್ಟುಗೋಲು ಹಾಕುವ ಮತ್ತು ಹೇಳಿಕೆ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶೇಷ ತಹಶೀಲ್ದಾರ ಯ.ರು.ಪಾಟೀಲ ಅವರಿಗೆ ಅವರಾದಿ ಗ್ರಾಮಸ್ಥರು ಹಾಗೂ ಸಂಬಂಧಿಗಳು ಮನವಿ ಪತ್ರ ಸಲ್ಲಿಸಿದರು.

ಸ್ವಾತಂತ್ರ್ಯದ ಬೇಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಾಜೀಯ ಸಂಸ್ಥಾನದಲ್ಲಿ ಸರ್ದಾರರಾಗಿದ್ದ ಅವರಾದಿ ಗ್ರಾಮದ ಅಪ್ರತಿಮ ಹೋರಾಟಗಾರ ವೀರಪ್ಪ, ರಾಣಿ ಚನ್ನಮ್ಮಾಜಿಯ ಬಲಗೈಯ ಬಂಟನಾಗಿ ಬ್ರಿಟಿಷರೊಂದಿಗೆ ನಡೆದ 1824ರ ಹೋರಾಟದಲ್ಲಿ ಬಾಗಿಯಾಗಿ ಸಂಸ್ಥಾನದ ಉಳವಿಗಾಗಿ ಹಗಲಿರಳು ಶ್ರಮಿಸಿದ್ದಾರೆ ಕಿತ್ತೂರು ನಾಡಿಗಾಗಿ ತ್ಯಾಗ ಬಲಿದಾನ ಮಾಡಿ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಹಿಂತಹ ನಾಯಕನ ವಿರುದ್ದ ಇತ್ತೀಚೆಗೆ ಎಂ.ಎಂ. ಕಲಬುರ್ಗಿಯವರು ಬರೆದಿರುವ ‘ಖರೆ ಖರೆ ಕಿತ್ತೂರು’ ಪುಸ್ತಕದಲ್ಲಿ ಅವರಾದಿ ವೀರಪ್ಪನ ಕುರಿತು ಅವಹೇಳನಕಾರಿಯಾಗಿ ವಿಷಯವನ್ನು ಬರೆದು ಕಿತ್ತೂರು ಸಂಸ್ಥಾನಕ್ಕೆ ದ್ರೋಹ ಬಗೆದಿದ್ದ ದೇಶದ್ರೋಹಿ ಕಾರಬಾರಿ ಮಲ್ಲಪ್ಪಶೆಟ್ಟಿಯ ಒಳ್ಳೆಯವನ್ನು ವೀರಪನ್ನು ಅವನಿಗೆ ವಂಚನೆ ಮಾಡಿದ್ದ ಎಂಬ ಇತ್ಯಾದಿ ಇತಿಹಾಸ ತಿರುಚುವ ವಿಷಯಗಳನ್ನು ಪುಸ್ತಕದಲ್ಲಿ ಇರುವದು ಇದು ವೀರನಾದ ಅವರಾದಿ ವೀರಪ್ಪನ ಕುರಿತು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ ಆದ್ದರಿಂದ ಪುಸ್ತಕವನ್ನು ಬಿಡುಗಡೆ ಮಾಡಲು ಅವಕಾಶ ನೀಡಬಾರದು ಮತ್ತು ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ದಿ. ಮೇ 05 ರಂದು ಕಿತ್ತೂರು ಕಲ್ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಸಾಹಿತಿ ಡಾ. ಬಾಳಣ್ಣ ಸೀಗಿಹಳ್ಳಿಯವರು ತಮ್ಮ ಭಾಷಣದಲ್ಲಿ ಇನ್ನೂ ಬಿಡುಗಡೆಯಾಗದಿರುವ ಖರೆ ಖರೆ ಕಿತ್ತೂರು ಪುಸ್ತಕದಲ್ಲಿರುವ ವಿಷಯವನ್ನು ಪ್ರಸ್ತಾಪಿಸಿ ಸರ್ದಾರ ಅವರಾದಿ ವೀರಪ್ಪನ ಕುರಿತು ಅವಮಾನಕ ವಿಚಾರಗಳನನು ಮಂಡಿಸಿದ್ದಾರೆ ಇಂಥ ತಪ್ಪು ಸಂದೇಶ ನೀಡುತ್ತಿರುವ ಡಾ. ಸೀಗಿಹಳ್ಳಿಯವರು ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅವರು ನಾಡಿನ ಜನತೆಯ ಕ್ಷಮೆ ಕೋರಬೇಕು ಇಂತಹ ಇತಿಹಾಸ ತಿರುಚುವ ಕೃತ್ಯದಿಂದ ಅವರಾದಿ ಸೇರಿದಂತೆ ಕಿತ್ತೂರು ನಾಡಿನ ಜನತೆಯ ಮನಸ್ಸಿಗೆ ತುಂಬಾ ನೋವು ಉಂಟಾಗಿದ್ದು ಇಂಥ ಕೃತ್ಯವನ್ನು ನಾವು ತೀವೃವಾಗಿ ಖಂಡಿಸುತ್ತೇನೆ. ಇವರ ಮೇಲೆ ಶೀಘ್ರ ಕೈಗೊಳ್ಳಬೇಕು ಪುಸ್ತಕ ಬಿಡುಗಡೆ ಮಾಡಬಾರದು ಎಂದು ಅವರಾದಿ ಹಾಗೂ ಕಿತ್ತೂರು ನಾಡಿನ ಜನತೆಯ ಆಗ್ರಹವಾಗಿದೆ ಮನವಿಗೆ ಸರಕಾರ ಸ್ಪಂಧಿಸದಿದ್ದರೆ ಉಘ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮವಿ ಪತ್ರದಲ್ಲಿ ತಿಳಿಸಿದ್ದಾರೆ

ಕೆ.ಎಂ.ಎಫ್ ನಿರ್ದೇಶಕ ಬಸವರಾಜ ಪರವಣ್ಣವರ, ನಾಗಪ್ಪ ಸರದಾರ, ಸೋಮಪ್ಪ ಪುರದ, ನಿಂಗಪ್ಪ ಹಿತ್ತಲಮನಿ, ಅರುಣ ಮಡಿವಾಳರ, ಸಾಗರ ದೇಸಾಯಿ, ಬಸವರಾಜ ಸರದಾರ, ಮಂಜುನಾಥ ಅಳ್ನಾವರ, ಸಂಕರ ಪರವಣ್ಣವರ, ಗಂಗಪ್ಪ ಅಳ್ನಾವರ, ಮಾಲೇಶ ಸರದಾರ, ಬಾಬು ಪವಾರ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here