ಕಟ್ಟಡ ತೆರುವು ಕಾರ್ಯಾಚರಣೆ ಸಂದರ್ಭದಲ್ಲಿ ಮಾತಿನ ಚಕಮಕಿ

0
21
loading...

ಕಾರವಾರ : ಕಾರವಾರ-ಕೋಡಿಬಾಗ ರಸ್ತೆ 18 ಮೀಟರ್ ಅಗಲೀಕರಣಕ್ಕಾಗಿ ಕಟ್ಟಡ ತೆರುವು ಕಾರ್ಯಾಚರಣೆ ಸಂದರ್ಭದಲ್ಲಿ ನಗರಸಭೆ ಸದಸ್ಯ ರತ್ನಾಕರ ನಾಯ್ಕ ಹಾಗೂ ನಗರೋತ್ಥಾನ ಯೋಜನೆಯ ಅಧಿಕಾರಿ ಆರ್.ಪಿ.ನಾಯ್ಕ ನಡುವೆ ಮಾತಿನ ಚಕಮಕಿ ಘರ್ಷಣೆ ನಡೆಯಿತು.
ಇಲ್ಲಿನ ಕಾಜುಬಾಗದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಮೀಪದ ರೇಣುಕಾ ಸುರೇಶ ನಾಯ್ಕ ಮಾಲೀಕತ್ವದ ಕಟ್ಟಡ ತೆರುವು ಕಾರ್ಯಾಚರಣೆಗೆ ನಗರಸಭೆ ಅಧಿಕಾರಿಗಳು ಚಾಲನೆ ನೀಡಿದ್ದರು. ಕಟ್ಟಡವು 18 ಮೀಟರ್ ವ್ಯಾಪ್ತಿಯೊಳಗೆ ಬರುತ್ತಿರುವುದರಿಂದ ಸಂಪೂರ್ಣವಾಗಿ ನೆಲಸಮಗೊಳಿಸಲು ಜೆಸಿಬಿ ಮತ್ತು ನಗರಸಭೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.
ನಗರಸಭೆ ಸದಸ್ಯ ರತ್ನಾಕರ ನಾಯ್ಕ ಅವರ ಇಸ್ತ್ರಿ ಅಂಗಡಿಯೂ ರೇಣುಕಾ ನಾಯ್ಕ ಅವರ ಮನೆಗೆ ತಾಗಿಯೇ ಇದೆ. ಹೀಗಾಗಿಯೇ ಅವರ ಅಂಗಡಿಯ ಮುಂಭಾಗದ ಮೆಟ್ಟಿಲುಗಳು ಹಾಗೂ ಅಂಗಡಿಯ ಶೀಟುಗಳನ್ನು ತೆರುವುಗೊಳಿಸಲು ಅಧಿಕಾರಿಗಳು ಮುಂದಾದರು. ಈ ಸಂದರ್ಭದಲ್ಲಿ ತೀವೃವಾಗಿ ಆಕ್ಷೇಪ ವ್ಯಕ್ತಪಡಿಸಿದ ರತ್ನಾಕರ ನಾಯ್ಕ, ತೆರುವುಗೊಳಿಸಲು ಸಮಯಾವಕಾಶ ಕೊಡಿ ಎಂದು ಆರ್. ಪಿ. ನಾಯ್ಕ ಅವರ ಹತ್ತಿರ ಕೋರಿದರು.ಇದುವರೆಗೂ ತಮಗೆ ಸಾಕಷ್ಟು ಬಾರಿ ಸಮಯಾವಕಾಶ ನೀಡಲಾಗಿದೆ.ಇನ್ನೆಷ್ಟು ದಿನ ಸಮಯಾವಕಾಶ ನೀಡಬೇಕು? ಇಲ್ಲ ಮತ್ತೆ ಕಾಲಾವಕಾಶ ನೀಡಲಾಗುವುದಿಲ್ಲ.
ಈಗಲೇ ತೆಗೆಯಿರಿ ಎಂದು ನಗರಸಭೆ ಸಿಬ್ಬಂದಿಗಳೊಂದಿಗೆ ನಗರೋತ್ಥಾನ ಯೋಜನಾಕಾರಿ ಆರ್.ಪಿ.ನಾಯ್ಕ ಅಂಗಡಿಯ ಮೆಟ್ಟಿಲು ಹಾಗೂ ಶೀಟ್‍ಗಳನ್ನು ತೆರುವುಗೊಳಿಸಲು ಮುಂದಾದರು. ಇದಕ್ಕೆ ತಡೆವೊಡ್ಡಿದ ರತ್ನಾಕರ ನಾಯ್ಕ, ಅಧಿಕಾರಿಗಳ ದಾದಾಗಿರಿ ಜಾಸ್ತಿಯಾಗುತ್ತಿದೆ. ಬಡವರಿಗೆ ಒಂದು ನ್ಯಾಯ! ಶ್ರೀಮಂತರಿಗೆ ಒಂದು ನ್ಯಾಯ ನೀಡಿ, ತಾರತಮ್ಯ ಮಾಡುತ್ತಿದ್ದಾರೆ. ಶ್ರೀಮಂತರ ಮನೆ ಮುಂದೆ 14 ಮೀಟರ್ ಹಾಗೂ ಬಡವರ ಮನೆಗಳನ್ನು ಬಲವಂತದಿಂದ ಉರುಳಿಸಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಒಬ್ಬ ಜನಪ್ರತಿನಿಯಾಗಿರುವ ತನಗೆ ಕಾಲಾವಕಾಶ ನೀಡಲು ತಯಾರಿಲ್ಲದ ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ನಗರಸಭೆ ಸದಸ್ಯರೇ 18 ಮೀಟರ್ ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಒಪ್ಪಿಗೆ ಸೂಚಿಸಿರುವುದರಿಂದ ಈ ಸಮಸ್ಯೆ ಈ ಮಟ್ಟಕ್ಕೆ ಬಂದಿದೆ. ನಮ್ಮಂತಹ ಅನೇಕ ಬಡವರ ಮನೆ ಹಾಗೂ ಜಮೀನಿಗೆ ಚಿಕ್ಕಾಸು ಪರಿಹಾರ ಇಲ್ಲದೇ ಪುಕ್ಕಟೆಯಾಗಿ ಮನೆ, ಜಮೀನು ಬಿಟ್ಟುಕೊಡಬೇಕಾಗಿದೆ. ಮೇಲಾಗಿ ಅಕಾರಿಗಳು ನಮ್ಮ ಮೇಲೆಯೇ ದರ್ಪ ತೋರುತ್ತಿದ್ದಾರೆ ಎಂದು ನಗರಸಭೆ ಸದಸ್ಯರ ಮೇಲಿನ ಕೋಪವನ್ನು ರತ್ನಾಕರ ನಾಯ್ಕ ಮೇಲೆ ವ್ಯಕ್ತಪಡಿಸಿ ಕಟ್ಟಡದ ಒಡತಿ ರೇಣುಕಾ ನಾಯ್ಕ ಹರಿಹಾಯ್ದರು.
ಕಾನೂನು ಬಾಹೀರ ಕಟ್ಟಡ:
ಇದಕ್ಕೆ ಮೇಲಂತಸ್ತು ಕಟ್ಟಲು ನಗರಸಭೆ ಹಾಗೂ ಸಂಬಂಧಪಟ್ಟ ಸಂಸ್ಥೆಗಳ ಪರವಾನಗಿ ಪಡೆಯದೇ ಕಟ್ಟಡವನ್ನು ಕಾನೂನು ಬಾಹೀರವಾಗಿ ಕಟ್ಟಲಾಗಿದೆ. ಇದಲ್ಲದೇ ರಸ್ತೆಗಾಗಿ ಮೀಸಲಿಟ್ಟ ಜಾಗವನ್ನು ಅತಿಕ್ರಮಿಸಿಕೊಂಡು ಕಟ್ಟಡ ಕಟ್ಟಲಾಗಿದೆ. ಇದಕ್ಕೆ ನಮ್ಮ ಬಳಿ ಪೂರಕ ದಾಖಲೆಗಳಿವೆ ಎಂದು ಆರ್. ಪಿ. ನಾಯ್ಕ ಕಟ್ಟಡದ ಮಾಲೀಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಆದರೆ ಸದ್ಯ ನನ್ನ ಕಟ್ಟಡವನ್ನು ಯಾವುದೇ ಪರಿಸ್ಥಿತಿಯಲ್ಲಿ ಜೆಸಿಬಿ ಮೂಲಕ ತೆರುವುಗೊಳಿಸಲು ಅವಕಾಶ ನೀಡುವುದಿಲ್ಲ. ನನಗೆ ಸ್ವಲ್ಪ ದಿನದ ಮಟ್ಟಿಗೆ ಕಾಲಾವಕಾಶ ನೀಡಬೇಕು. ಕಟ್ಟಡದ ಸುರಕ್ಷತೆ ದೃಷ್ಠಿಯಿಂದ ನಾನೇ ಕಟರ್ ತರಿಸಿ ಕಟ್ಟಡದ ಅರ್ಧಭಾಗವನ್ನು ತೆರುವುಗೊಳಿಸಿ ಕೊಡುವುದಾಗಿ ರೇಣುಕಾ ನಾಯ್ಕ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂಧಿಸಿದ ನಗರೋತ್ಥಾನ ಯೋಜನಾಧಿಕಾರಿ ಐದು ತಾಸು ಸಮಯಾವಕಾಶ ನೀಡುತ್ತೇನೆ. ಅಷ್ಟರೊಳಗೆ ಕಟರ್ ತಂದು ಮಾರ್ಕ್ ಮಾಡಿದ ಭಾಗವನ್ನು ತೆರುವುಗೊಳಿಸಿ ಕೊಡಬೇಕು. ಇಲ್ಲದಿದ್ದರೆ 7 ಗಂಟೆ ನಂತರ ಜೆಸಿಬಿ ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು. ಇದಕ್ಕೆ ನಗರಸಭೆ ಸದಸ್ಯ ರತ್ನಾಕರ ನಾಯ್ಕ ಹಾಗೂ ರೇಣುಕಾ ಸುರೇಶ ನಾಯ್ಕ ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಆರ್. ವಿ.ಜತ್ತನ್ನ, ಸಹಾಯಕ ಎಂಜಿನೀಯರ್ ಮೋಹನರಾಜ್, ಮಲ್ಲಿಕಾರ್ಜುನ್, ಪ್ರಸನ್ನ ಹಾಗೂ ನಗರಸಭೆ ಪೌರ ಕಾರ್ಮಿಕರು ಇದ್ದರು.

-ನಗರದ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಕ್ಕೋಸ್ಕರ ರಸ್ತೆ 18 ಮೀಟರ್‍ಗೆ ಅಗಲೀಕರಣಗೊಳಿಸಲಾಗಿದೆ. ಇದಕ್ಕೆ ಎಲ್ಲರೂ ಬೆಂಬಲಿಸಬೇಕೇ, ವಿನಃ ಆಕ್ಷೇಪ ವ್ಯಕ್ತಪಡಿಸುವುದು ಸೂಕ್ತವಲ್ಲ. ರಸ್ತೆ ಅಗಲೀಕರಣಕ್ಕಾಗಿ ಎಲ್ಲವನ್ನೂ ಪ್ರಾಮಾಣಿಕವಾಗಿಯೂ ಕಾನೂನು ಬದ್ಧವಾಗಿ ಮಾಡಲಾಗುತ್ತಿದೆ.
ಆರ್.ಪಿ.ನಾಯ್ಕ ,ನಗರೋತ್ಥಾನ ಯೋಜನಾಕಾರಿ,ಕಾರವಾರ.

loading...

LEAVE A REPLY

Please enter your comment!
Please enter your name here