ಕರ್ನಾಟಕ ಅಭಿವೃದ್ಧಿ ಜಾಗೃತ ವೇದಿಕೆ ಸಭೆ

0
21
loading...

ಶಿಗ್ಗಾವಿ : ಪ್ರಕೃತಿಯ ಭೂಮಿ, ನೀರು, ಗಾಳಿ, ಬಡ ಜನತೆಯ ಶ್ರೇಯೋಭಿವೃದ್ಧಿಗಾಗಿ ಆರಂಭಗೊಂಡ ರಾಜ್ಯ ಮಟ್ಟದ ಸಂಘಟನೆ ಕರ್ನಾಟಕ ಅಭಿವೃದ್ಧಿ ಜಾಗೃತ ವೇದಿಕೆ ಗ್ರಾಮ ಮಟ್ಟದಿಂದ ಬೆಂಗಳೂರವರೆಗೂ ವ್ಯಾಪ್ತಿಯನ್ನು ಹೊಂದಿದೆ. ಹಾವೇರಿ ಜಿಲ್ಲೆಯಲ್ಲಿ ಸಂಘಟನೆಯನ್ನು ಪ್ರಭಲವಾಗಿ ಆರಂಭಿಸಿದ್ದು ಎಲ್ಲರೂ ಸಹಕರಿಸಬೇಕು ಎಂದು ರಾಜ್ಯಾಧ್ಯಕ್ಷ ಎನ್.ಎಸ್.ಪಡೆಪ್ಪನವರ ಹೇಳಿದರು.
ಪಟ್ಟಣದ ಸಾಯಿ ಮಂದಿರದಲ್ಲಿ ಕರ್ನಾಟಕ ಅಭಿವೃದ್ಧಿ ಜಾಗೃತ ವೇದಿಕೆ ಜಿಲ್ಲಾ ಅಧ್ಯಕ್ಷ ಶಿದ್ಲಿಂಗಪ್ಪ ಕಾರಡಗಿ ಅಧ್ಯಕ್ಷತೆಯಲ್ಲಿ ತಾಲೂಕ ಮಟ್ಟದ ಪದಾಧಿಕಾರಿಗಳü ಆಯ್ಕೆ ಹಾಗೂ ಮಳೆಗಾಗಿ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡಜನತೆಯ ಶ್ರೇಯೋಭಿವೃದ್ಧಿಯ ಮುಖ್ಯ ಉದ್ದೇಶದೊಂದಿಗೆ ಪದಾಧಿಕಾರಿಗಳು ಕಾರ್ಯ ಮಾಡುವಂತೆ ಸಲಹೆ ನೀಡಿದರು.
ಕರ್ನಾಟಕ ಅಭಿವೃದ್ಧಿ ಜಾಗೃತ ವೇದಿಕೆ ಶಿಗ್ಗಾಂವ ತಾಲೂಕ ಅಧ್ಯಕ್ಷರಾಗಿ ಮಾದೇವಪ್ಪ ಮಾಸನಕಟ್ಟಿ, ಸವಣೂರ ತಾಲೂಕ ಅಧ್ಯಕ್ಷರಾಗಿ ಹನಮಂತಪ್ಪ ಕಲಘಟಗಿ ಇವರನ್ನು ಆಯ್ಕೆಮಾಡಿ ಆದೇಶಿಸಲಾಯಿತು.
ರಾಜ್ಯ ನಿರ್ದೇಶಕ ಶಿವಾನಂದಪ್ಪ ಕರಿಗಾರ, ಜಿಲ್ಲಾ ಕಾರ್ಯದರ್ಶಿ ದೇವೇಂದ್ರಪ್ಪ ಕೋಟಿ, ಶಿವಮೂರ್ತಯ್ಯ ಹಿರೇಮಠ, ಅರ್ಜಪ್ಪ ಲಮಾಣಿ, ಬಿ.ಆರ್.ಹಿರೇಮಠ, ಸಂಗಮೇಶ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here