ಕಾನೂನು ಬಾಹೀರವಾಗಿ ಆಸ್ತಿ ಕಬಳಿಕೆ: ಜಿಲ್ಲಾಡಳಿತಕ್ಕೆ ದೂರು

0
18
loading...

ಕಾರವಾರ : ಪಿತ್ರಾರ್ಜಿತ ಆಸ್ತಿಗೆ ನಕಲಿ ದಾಖಲೆ ಸೃಷ್ಠಿಸಿ ಕಾನೂನುಬಾಹಿರವಾಗಿ ವರ್ಗಾಯಿಸಿಕೊಂಡ ತಮ್ಮ ಆಸ್ತಿಯನ್ನು ಮರಳಿ ಕೊಡಿಸುವಂತೆ ಒತ್ತಾಯಿಸಿ ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದ ನಿವಾಸಿ ಉಲ್ಲಾಸ ಯಾನೆ ನರಸಿಂಹ ದಯಾಳು ಶಾನಭಾಗ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಭಟ್ಕಳ ತಾಲ್ಲೂಕಿನ ಶಿರಾಲಿ 2 ಗ್ರಾಮದ ಸ.ನಂ 813 ರಲ್ಲಿರುವ ಆಸ್ತಿಯು ಪಿತ್ರಾರ್ಜಿತ ಆಸ್ತಿಯಾಗಿದ್ದು, ಇಲ್ಲಿನ ಸ್ಥಳೀಯ ಕೆಲವರು ತಂದೆಯವರ ಅನಕ್ಷರತೆಯನ್ನು ದುರುಪಡಿಸಿಕೊಂಡು ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಸದ್ರಿ ಆಸ್ತಿಯೂ ಕೋಟ್ಯಾಂತರ ಬೆಲೆ ಬಾಳುವಂತದ್ದಾಗಿದೆ. ಆದರೆ ಈಗ ಇಲ್ಲಿ ಅನಧಿಕೃತವಾಗಿ ಬ್ಯಾಂಕ್, ನಾಲ್ಕು ವಾಣಿಜ್ಯ ಮಳಿಗೆ ಹಾಗೂ ಮೊಬೈಲ್ ಟವರ್ ನಿರ್ಮಿಸಿ ಬಾಡಿಗೆ ನೀಡಿದ್ದಾರೆ ಎಂದು ದೂರಿದ್ದಾರೆ.
ಸದ್ರಿ ಆಸ್ತಿಯೂ ಈವರಗೆ ಹಿಸ್ಸಾ ಆಗಿಲ್ಲ. ಆದಾಗ್ಯೂ ರೆಕಾರ್ಡ್‍ನಲ್ಲಿ ಅನಧಿಕೃತವಾಗಿ ವಿಭಾಗಿಸಲಾಗಿದೆ. ಇದರ ಜೊತೆಗೆ ಕಾನೂನುಗೆ ವಿರುದ್ಧವಾಗಿ ಇದನ್ನು ಬಿನ್‍ಸ್ಕೇತಿಯಾಗಿ ಪರಿವರ್ತಿಸಿಕೊಂಡಿದ್ದಾರೆ. ಆದರೆ ಇದೆಲ್ಲವೂ ಮೋಸದಿಂದ ಕೂಡಿದ್ದು, ನಮಗೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಕೇಳಲು ಹೊದರೆ ಪ್ರಾಣ ಬೇದರಿಕೆಯನ್ನು ಒಡ್ಡುತ್ತಿದ್ದಾರೆ. ಆದ್ದರಿಂದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಸನ್ನ ಭಟ್ಟ ಇದ್ದರು.

loading...

LEAVE A REPLY

Please enter your comment!
Please enter your name here