ಕೊಡಚವಾಡ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಲೋಕಾರ್ಪಣೆ

0
38
loading...

ಖಾನಾಪುರ 09: ತಾಲೂಕಿನ ಕೊಡಚವಾಡ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ನೂತನ ದೇವಸ್ಥಾನದ ಉದ್ಘಾಟನೆಯನ್ನು ವಿಧಾನಸಭೆಯ ವಿರೋಧಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನೆರವೇರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದಾನಿಗಳು ಮತ್ತು ಭಕ್ತರು ಮನಸ್ಸು ಮಾಡಿದರೆ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯವಿರುವಷ್ಟು ನಿಧಿಯನ್ನು ಕ್ರೋಢಿಕರಿಸಿ ಕೆಲವೇ ತಿಂಗಳುಗಳಲ್ಲಿ ಸುಸಜ್ಜಿತ ದೇವಸ್ಥಾನ ನಿರ್ಮಾಣಮಾಡಲು ಸಾಧ್ಯ ಎಂಬುದನ್ನು ಕೊಡಚವಾಡ ಗ್ರಾಮಸ್ಥರು ಸಿದ್ಧಮಾಡಿ ತೋರಿಸಿದ್ದಾರೆ ಎಂದು ಶ್ಲಾಘಿಸಿದರು.
ಮಾಜಿ ಶಾಸಕ ಪ್ರಹ್ಲಾದ ರೇಮಾಣಿ ಗರ್ಭಗುಡಿಯನ್ನು ಉದ್ಘಾಟಿಸಿದರು. ಹಂಡಿಭಡಂಗನಾಥ ಮಠದ ಪೀರಯೋಗಿ ಪ್ರಖರನಾಥಜೀ ಮಹಾರಾಜರು ದೇವಸ್ಥಾನದ ಕಳಸಾರೋಹಣ ನೆರವೇರಿಸಿದರು. ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದ ಸುಪ್ರಸಿದ್ಧ ಚಂಡೆವಾದ್ಯದ ಮೂಲಕ ದೇವಸ್ಥಾನದಲ್ಲಿ ಅರ್ಚಕ ನರಸಿಂಹ ಭಟ್ಟ ಜೋಶಿ ಅವರ ವೈದಿಕತ್ವದಲ್ಲಿ ನವಚಂಡಿಕಾ ಹೋಮ, ಪ್ರಾಣ ಪ್ರತಿಷ್ಠಾಪನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ದೇವಸ್ಥಾನ ಸಮೀತಿಯ ಅಧ್ಯಕ್ಷ ರಾಜಕುಮಾರ ಕೊಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಅರವಿಂದ ಪಾಟೀಲ, ಸಂಜಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಈರಣ್ಣ ಕಡಾಡಿ, ಕಾಂಗ್ರೆಸ್ ಮುಖಂಡ ನಾಸೀರ ಬಾಗವಾನ, ಬಿಜೆಪಿ ಕಾರವಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಧುಳಿ, ಪಕ್ಷದ ಸ್ಥಳೀಯ ಮುಖಂಡರಾದ ಬಾಬುರಾವ ದೇಸಾಯಿ, ನಂದಕುಮಾರ ಬಾಳೇಕುಂದ್ರಿ, ಸುಭಾಸ ಕುರೆಣ್ಣವರ, ಸುರೇಶ ದೇಸಾಯಿ, ಜಿತೇಂದ್ರ ಮಾದರ, ಅಶೋಕ ಪಾಟೀಲ, ಸಂಜಯ ಕಂಚಿ, ಶೀತಲ ಬಂಬಾರ್ಡಿ, ಸುರೇಶ ತಳವಾರ, ಕೊಡಚವಾಡ ಗ್ರಾಪಂ ಸದಸ್ಯ ರಾಜಗೌಡ ಪಾಟೀಲ, ಪಿಡಿಒ ಎಂ.ಎ ಮದರಿ ಮತ್ತಿತರರು ಆಗಮಿಸಿದ್ದರು.
ದೇವಸ್ಥಾನ ಸಮೀತಿಯ ಕಾರ್ಯಾಧ್ಯಕ್ಷ ಪ್ರಮೋದ ಕೊಚೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹನ ಕೊಚೇರಿ ಸ್ವಾಗತಿಸಿದರು. ವಿವೇಕ ಕುರಗುಂದ ನಿರೂಪಿಸಿದರು. ಶ್ರವಣಕುಮಾರ ಹುಡೇದ ವಂದಿಸಿದರು.

loading...

LEAVE A REPLY

Please enter your comment!
Please enter your name here