ಜೂ1.ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವ

0
29
loading...

ಶಿಗ್ಗಾವಿ : ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎರಡನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಜೂನ್ 1 ರಂದು ಬುಧವಾರ ಬೆಳಗ್ಗೆ 11.30ಕ್ಕೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ‘ಹಿರೇತಿಟ್ಟು’ ಬಯಲು ರಂಗಮಂದಿರದಲ್ಲಿ ಜರುಗಲಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಡಿ.ಬಿ.ನಾಯ್ಕ ತಿಳಿಸಿದರು.
ಸೋಮವಾರ ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಎರಡನೇ ವಾರ್ಷಿಕ ಘಟಿಕೋತ್ಸವದ ಅಂಗವಾಗಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎರಡನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಘನತೆವೆತ್ತ ರಾಜ್ಯಪಾಲರು ಹಾಗೂ ಕುಲಾಧಿಪತಿಗಳೂ ಆದ ವಜುಭಾಯಿ ಆರ್. ವಾಲಾ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಸಮ ಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಟಿ.ಬಿ. ಜಯಚಂದ್ರ ಅವರು ಉಪಸ್ಥಿತರಿರುತ್ತಾರೆ.
ವಿಶ್ರಾಂತ ಕುಲಪತಿಗಳು, ಜ್ಞಾನಪೀಠ ಪುರಸ್ಕøತರು ಹಾಗೂ ಜಾನಪದ ವಿದ್ವಾಂಸರೂ ಆದ ನಾಡೋಜ ಪ್ರೊ.ಚಂದ್ರಶೇಖರ ಕಂಬಾರ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಯವರಾದ ಪ್ರೊ. ಕೆ. ಚಿನ್ನಪ್ಪ ಗೌಡ ಅವರು ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳ ಹಾಗೂ ಗಣ್ಯ ಅತಿಥಿಗಳ ಸ್ಥೂಲ ಪರಿಚಯದೊಂದಿಗೆ ಸ್ವಾಗತ ಭಾಷಣ ಮಾಡಲಿದ್ದಾರೆ.
ಜನಪದ ಸಾಹಿತ್ಯ ಶೈಕ್ಷಣಿಕ ಶಿಸ್ತಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಎಂ.ಫಿಲ್ ಪದವಿ ಪೂರೈಸಿದ್ದಾರೆ. ಜನಪದ ಸಾಹಿತ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಜಗದೀಶ ಗೌಡ ಅವರು ಪ್ರಥಮ ರ್ಯಾಂಕ್ ಗಳಿಸಿ ನಾಡೋಜ ಹೆಚ್.ಎಲ್.ನಾಗೇಗೌಡ ಪ್ರತಿಷ್ಠಾನ ಪ್ರಯೋಜಕತ್ವದ ಚಿನ್ನದ ಪದಕ ಪಡೆದಿರುತ್ತಾರೆ. ಜಾನಪದ ವಿಜ್ಞಾನ ಸ್ನಾತಕೋತ್ತರ ವಿಭಾಗದ ಪಕೀರಪ್ಪ ಕಡ್ಡಿ ಪ್ರಥಮ ರ್ಯಾಂಕ್, ಜನಪದ ಕಲೆ ಸ್ನಾತಕೋತ್ತರ ವಿಭಾಗದ ಹನುಮಂತಪ್ಪ ವೈ.ಬೆಂಗೇರಿ ಪ್ರಥಮ ರ್ಯಾಂಕ್, ಜನಪದ ಪ್ರವಾಸೋದ್ಯಮ ಸ್ನಾತಕೋತ್ತರ ವಿಭಾಗದ ಮಂಜಪ್ಪ ಲಮಾಣಿ ಪ್ರಥಮ ರ್ಯಾಂಕ್, ಜನಪದ ಮಾಧ್ಯಮ ಮತ್ತು ಸಂವಹನ ಸ್ನಾತಕೋತ್ತರ ವಿಭಾಗದ ಮಲ್ಲಿಕಾರ್ಜುನ ಕಾಳೆ ಪ್ರಥಮ ರ್ಯಾಂಕ್ ಹಾಗೂ ಎಂ.ಬಿ.ಎ ಗ್ರಾಮೀಣಾಭಿವೃದ್ಧಿ ಮತ್ತು ಬುಡಕಟ್ಟು ವ್ಯವಹಾರ ನಿರ್ವಹಣೆ ವಿಭಾಗದಲ್ಲಿ ಕುಮಾರಿ ಲಲಿತಾ ಹೊಸಮನಿ ಪ್ರಥಮ ರ್ಯಾಂಕ್ ಪಡೆದುಕೊಂಡಿರುತ್ತಾರೆ. ಇವರುಗಳಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎರಡನೇ ವಾರ್ಷಿಕ ಘಟಿಕೋತ್ಸವದ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಗುವುದು.
ಪ್ರಸ್ತುತ ನಡೆಯುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎರಡನೇ ವಾರ್ಷಿಕ ಘಟಿಕೋತ್ಸವ-2016ರಲ್ಲಿ ಇಬ್ಬರಿಗೆ ಎಂ.ಫಿಲ್, ಆರು ಮಂದಿ ರ್ಯಾಂಕ್ ವಿಜೇತರಿಗೆ ಸೇರಿದಂತೆÉ ಒಟ್ಟು 26 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಪದವಿ ಪಡೆಯುತ್ತಿರುವವರಲ್ಲಿ 07 ವಿದ್ಯಾರ್ಥಿನಿಯರು ಹಾಗೂ 19 ವಿದ್ಯಾರ್ಥಿಗಳಿದ್ದು, ಇವರಲ್ಲಿ ಒರ್ವ ವಿದ್ಯಾರ್ಥಿನಿ ಪ್ರಥಮ ರ್ಯಾಂಕ್ ಪಡೆದಿದ್ದು, ಇನ್ನು ಐದು ರ್ಯಾಂಕ್‍ಗಳನ್ನು ಪುರುಷ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ರಾಜ್ಯಾದ್ಯಂತ ಹೊಂದಿರುವ ಪ್ರಾದೇಶಿಕ ಕಲಿಕಾ ಕೇಂದ್ರ ಮತ್ತು ವಿ.ವಿ. ಮಾನ್ಯತಾ ಸಂಸ್ಥೆಗಳಲ್ಲಿನ ವಿವಿಧ ಅಲ್ಪಾವಧಿಯ ಸರ್ಟಿಫಿಕೇಟ್ ಕೋರ್ಸ್‍ಗಳಾದ ಜನಪದ ವೈದ್ಯದಲ್ಲಿ 329 ವಿದ್ಯಾರ್ಥಿಗಳು, ಜನಪದ ಗೀತ ಸಂಪ್ರದಾಯದ 11 ವಿದ್ಯಾರ್ಥಿಗಳು, ಜನಪದ ಕಸೂತಿ ಕಲೆಯ 29 ವಿದ್ಯಾರ್ಥಿಗಳು, ಬಿದರಿ ಕಲೆಯ 07 ವಿದ್ಯಾರ್ಥಿಗಳು, ಸಮರ ಕಲೆಯ 05 ವಿದ್ಯಾರ್ಥಿಗಳು, ದೊಡ್ಡಾಟದ 10 ವಿದ್ಯಾರ್ಥಿಗಳು, ಡೊಳ್ಳು ಕುಣಿತದ ಇಬ್ಬರು ವಿದ್ಯಾರ್ಥಿಗಳು, ಬೀಸುಕಂಸಾಳೆ 03 ವಿದ್ಯಾರ್ಥಿಗಳು ಹಾಗೂ ಪಾರಂಪರಿಕ ಹೈನುಗಾರಿಕೆ ಡಿಪ್ಲೊಮಾ ಕೋರ್ಸ್‍ನ 16 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 412 ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ 2014-15ರಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರುಗಳಿಗೆ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ನೀಡಲಾಗುವುದು. ಮತ್ತು ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಮುರಹರಿನಾಯ್ಕ, ವಿಶ್ವವಿದ್ಯಾಲಯದ ಡೀನರು, ಸಿಂಡಿಕೇಟ್ ಸದಸ್ಯರು ಹಾಗೂ ಶೈಕ್ಷಣಿಕ ಪರಿಷತ್ತಿನ ಸದಸ್ಯರುಗಳು ಘಟಿಕೋತ್ಸವದಲ್ಲಿ ಉಪಸ್ಥಿತರಿರುವರು. ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಮುರಹರಿನಾಯ್ಕ, ಕುಲಸಚಿವ ಪ್ರೋ ಡಿ.ಬಿ.ನಾಯಕ್ ಹಾಜರಿದ್ದರು.

loading...

LEAVE A REPLY

Please enter your comment!
Please enter your name here