ಟ್ರಾಕ್ಟರ್-ದ್ವಿಚಕ್ರ ವಾಹನ ಡಿಕ್ಕಿ- ಒರ್ವ ಸ್ಥಳದಲ್ಲೆ ಸಾವು

0
23
loading...

ದಾಂಡೇಲಿ : ನಗರದ ಸಮೀಪವಿರುವ ಬರ್ಚಿಯಿಮದ ಹಳಿಯಾಳ ಹೋಗುವ ರಸ್ತೆಯಲ್ಲಿ ಬೇಡರಶಿರಗೂರು ಸಮೀಪದಲ್ಲಿ ಹಳಿಯಾಳ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ (ಕೆ.ಎ-32- ಟಿ5826, ಟ್ರಾಲಿ ಸಂಖ್ಯೆ: ಕೆ.ಎ-32. ಓ-5225) ಮತ್ತು ಬರ್ಚಿಯಿಂದ ಹಳಿಯಾಳ ಕಡೆಗೆ ಹೋಗುವ ಟಿವಿಎಸ್ ಮೊಪೆಡ್ (ಕೆಎ-31, ಎಸ್:8005) ಪರಸ್ಪರ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳೀಯ ವಿಟ್ಲಾಳ ನಿವಾಸಿ, ಗೌಳಿ ಸಮುದಾಯದ ಬಾಲು ಗಾವಡೆ (ವ: 50) ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ದ್ವಿಚಕ್ರ ವಾಹನದಲ್ಲಿದ್ದ ಹಿಂಬದಿ ಸವಾರ ಮೃತ ಬಾಲು ಗಾವಡೆಯವರ ಅಳಿಯ ಜಿತೋಬೊ ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಕ್ಟರ್ ಚಾಲಕನ ಅತಿಯಾದ ವೇಗದ ಚಾಲನೆ ಮತ್ತು ಆತನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂದು ಪ್ರಾರಂಭದ ತನಿಖೆಯಿಂದ ತಿಳಿದುಬಂದಿದ್ದು, ಟ್ರಾಕ್ಟರ್ ಚಾಲಕ ಅಪಘಾತ ನಡೆದ ತಕ್ಷಣವೆ ಪರಾರಿಯಾಗಿದ್ದಾನೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಪರಮಾನಂದ ಕೊಣ್ಣೂರು ಅವರು ತಮ್ಮ ತಂಡದ ಜೊತೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here