ಡಾ.ಕಮತರಿಗೆ ‘ಪಶು ವೈದ್ಯಸಿರಿ’-‘ನಕುಲ’ ಪ್ರಶಸ್ತಿ

0
29
loading...

ಗೋಕಾಕ 23: ಇಲ್ಲಿಯ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಅವರಿಗೆ ಪಶು ವೈದ್ಯಕೀಯ ಸೇವೆಯನ್ನು ಗುರುತಿಸಿ 2016ನೇ ಸಾಲಿನ ರಾಜ್ಯಮಟ್ಟದ ‘ಪಶು ವೈದ್ಯಸಿರಿ’ ಹಾಗೂ ‘ನಕುಲ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಪಶು ವೈದ್ಯರ ಸಂಘದ ಆಶ್ರಯದಲ್ಲಿ ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ದಿನಾಚರಣೆ ಹಾಗೂ ಡಾ. ಆರ್. ಡಿ. ನಂಜಯ್ಯ ಜನ್ಮ ಶತಮಾನೋತ್ಸವ ಸ್ಮಾರಕ ತಾಂತ್ರಿಕ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆಯ ಸಚಿವ ಎ. ಮಂಜು, ಭಾರತ ಸರ್ಕಾರದ ಪಶು ಸಂಗೋಪನೆ ಆಯುಕ್ತ ಡಾ. ಎಸ್.ಎಸ್.ಹೊನ್ನಪ್ಪಗೋಳ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಪಂಡಿತರಾವ ಚಿದ್ರಿ ಅವರು ಡಾ. ಕಮತ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಸಮಾರಂಭದಲ್ಲಿ ಕರ್ನಾಟಕ ಪಶು ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಟಿ. ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಡಾ. ಎಸ್.ಜಿ.ಯಲಗೌಡ ಸೇರಿದಂತೆ ಹಲವರು ಇದ್ದರು.
ರಾಜ್ಯ ಮಟ್ಟದ ಪ್ರಶಸ್ತಿ ದೊರಕಿದ್ದಕ್ಕಾಗಿ ತಾಲೂಕಿನ ಜನತೆ, ರಾಜಕೀಯ ಮುಖಂಡರು, ರೈತರು ಡಾ. ಕಮತ ಅವರನ್ನು ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here