ಡಾ.ಪ್ರಭಾಕರ ಕೋರೆ ಅವರ ಕಾರ್ಯ ಶ್ಲಾಘನೀಯ: ಕಾಗೆ

0
23
loading...

ಮೋಳೆ 19: ಡಾ.ಪ್ರಭಾಕರ ಕೋರೆಯವರು ದೇಶ ಹಾಗೂ ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದರೇ, ಇಂದು ಸಹಕಾರ ಕ್ಷೇತ್ರದಲ್ಲಿ ಧಾಪುಗಾಲು ಇಟ್ಟಿದ್ದಾರೆ, ಅವರ ಕಾರ್ಯ ಶ್ಲಾಘನೀಯ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಬುಧವಾರ ಅಥಣಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ 26ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ನಾಗರಿಕರ, ಹಾಗೂ ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಡಾ.ಪ್ರಭಾಕರ ಕೋರೆಯವರು ಈ ಸಂಸ್ಥೆಯನ್ನು ತಮ್ಮ ಗ್ರಾಮದಲ್ಲಿ ಪ್ರಾರಂಭಿಸಿದ್ದು, ಗ್ರಾಹಕರು ಉದೇಶಿತ ಕೆಲಸಕ್ಕೆ ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ದೂದಗಂಗಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಮೀತ ಕೋರೆವಹಿಸಿ ಈ ಸಂಸ್ಥೆ 7633 ಸದಸ್ಯರನ್ನು ಹೊಂದಿದ್ದು, 1.77 ಕೋಟಿ ಶೇಅರ ಬಂಡವಾಳವಿದೆ. 348 ಕೋಟಿ ರೂ ಠೇವು ಸಂಗ್ರಹಿಸಲಾಗಿದ್ದು, 238 ಕೋಟಿ ಸಾಲ ವಿತರಿಸಲಾಗಿದೆ. 362 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದ್ದು,5220 ಕೋಟಿ ವಾರ್ವಿಕ ವಹಿವಾಟು ಹೊಂದೊದೆ ಎಂದರು.
26 ಶಾಖೆಗಳನ್ನು ಹೋದಿದ್ದು ಶೇ 96.36ರಷ್ಟು ವಸೂಲಾತಿ ಇದೆ. ನಿವ್ವಳ ಲಾಭ 1.86 ಕೋಟಿ ಆಗಿದೆ ಎಂದರು. ರೈತರಿಗೆ ಅನುಕುಲವಾಗಲಿ ಎಂಬ ದೃಷ್ಟಿಯಿಂದ 18 ಕೋಟಿಗೂ ಹೆಚ್ಚು ಸಾಲವನ್ನು ಪೈಪ್ ಲಾಯಿನಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಲಾಗಿದೆ ಎಂದರು. ಸಂಘದ ಸದಸ್ಯರಿಗೆ ನಾಗರಿಕ ವೀಮೆ ಯೋಜನೆ, ಈ ಸ್ಟಾಂಪಿಂಗ್, ಪ್ಯಾನ್ ಪಾರ್ಡ, ರೈಲು ಹಾಗೂ ವಿಮಾನ ಟಿಕೇಟ ಬುಕ್ಕಿಂಗ ಸಹ ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಶ್ರೀ ಬಸವೇಶ್ವರ ಸ್ವಾಮಿಗಳು ಸಾನಿದ್ಯ ವಹಿಸಿದ್ದರು. ಅತಿಥಿಗಳಾಗಿ ಪಟ್ಟಣ ಪಂಚಾಯತ್ ಸದಸ್ಯ ಶಿವಗೌಡ ಪಾರಶೆಟ್ಟಿ, ಭರತೇಶ ಬನವಣೆ, ಸುಭಾಷ ಕಾತ್ರಾಳೆ, ಅಣ್ಣಾಸಾಬ ಪಾಟೀಲ, ಗಜಾನನ ಯರಂಡೋಲಿ, ಮಹಾಂತೇಶ ಪಾಟೀಲ,ಶಾಖಾಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಉಪಾಧ್ಯಕ್ಷ ಸದಾಶಿವ ಕಮತೆ, ಸಂತೋಷ ಕಾರ್ಚಿ, ರಮೇಶ ರಡ್ಡಿ, ಸತೀಶ ಗಾಣಿಗೇರ, ತಾತ್ಯಾಸಾಬ ಹಕ್ಕಿ, ಅಶೋಕ ಪಾಟೀಲ, ಹೇಮಂತ ಶೇಡಶಾಳೆ, ಗಿರೀಶ ಡೂಗನವರ, ಸಿದ್ದಪ್ಪ ಕನಾಳೆ, ಮಲಕಪ್ಪ ಪಾಟೀಲ ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ಡಿ.ಎಸ್. ಕರೋಶಿ ಸ್ವಾಗತಿಸಿದರು. ಮಹೇಶ ಸೊಲ್ಲಾಪೂರೆ ವಂದಿಸಿದರು.

loading...

LEAVE A REPLY

Please enter your comment!
Please enter your name here