ಪೊಲೀಸ್ ಸಿಬ್ಬಂದಿಗಳ ಪ್ರತಿಭಟನೆಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಬೆಂಬಲ

0
14
loading...

ಯಲ್ಲಾಪುರ : ಪೊಲೀಸ್ ಸಿಬ್ಬಂದಿಗಳು ವೇತನ ಹೆಚ್ಚಳ ಹಾಗೂ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಬೆಂಬಲಿಸಿ ಸೋಮವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಸಲ್ಲಿಸಿದ ಮನವಿಯಲ್ಲಿ ರಾಜ್ಯಾದ್ಯಾಂತ ಪೊಲೀಸ್ ಸಿಬ್ಬಂದಿಗಳು ಜೂನ್ 4 ರಂದು ವೇತನ ಹೆಚ್ಚಳ ಹಾಗೂ ಇನ್ನಿತರ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟಿಸುತ್ತಿರುವುದು ಸ್ವಾಗತಾರ್ಹ. ಅವರ ಬೇಡಿಕೆ ಸಮಂಜಸವಾಗಿದೆ. ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು. ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸಿಬ್ಬಂದಿಗಳ ವೇತನ ಶ್ರೇಣಿ ಕಡಿಮೆಯಿದೆ. ಸರ್ಕಾರ ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಜೂನ್ 4 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ದಿಂದ ಮೆರವಣಿಗೆ ಹೊರಟು ಸಿಎಂ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚಿದಾನಂದ ಹರಿಜನ, ರಾಜ್ಯ ಸಂಘಟನಾ ಕಾರ್ಯದರ್ಶಿ ಚನ್ನಬಸಪ್ಪ ಹರಿಜನ, ತಾಲೂಕಾಧ್ಯಕ್ಷ ಅರ್ಜುನ ಬೆಂಗೇರಿ, ಪ್ರಮುಖರಾದ ಸೀತಾ ಸಿದ್ದಿ, ಸುಧಾ ಸಿದ್ದಿ, ನೂರ್‍ಅಹ್ಮದ್ ಮುಜಾವರ, ರಾಮತಬಿ ದೊಣಸೆ, ಅಣ್ಣಪ್ಪ ನಾಯ್ಕ, ಮಂಜುನಾಥ ವಾಲ್ಮಿಕೀ, ಸುಭಾಷ ಶೇಷಗಿರಿ, ಹನುಮಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here