ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಬಿಎಸ್‍ವೈ

0
27
loading...

23blh4ಬೈಲಹೊಂಗಲ 23: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ಯಡಿಯೂರಪ್ಪ ಗಂಭೀರವಾಗಿ ಆಪಾದಿಸಿದರು.
ಅವರು ಸೋಮವಾರ ಪಟ್ಟಣದ ಬಾಯಪಾಸ್ ರಸ್ತೆಯಲ್ಲಿರುವ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಾಯುವ್ಯ ಪದವೀಧರ, ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿಗಳಾದ ಹಣಮಂತ ನಿರಾಣಿ, ಅರುಣ ಶಹಾಪೂರ ಚುನಾವಣಾ ಪ್ರಚಾರಾರ್ಥ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಬೀಕರ ಬರಗಾಲ ಛಾಯೆ ಆವರಿಸಿದ ಪ್ರದೇಶಗಳಿಗೆ ಕಾಟಾಚಾರಕ್ಕೆ ಭೇಟಿ ನೀಡಿ, ರೈತರು, ಜನತೆಯಿಂದ ಚೀಮಾರಿ ಹಾಕಿಸಿಕೊಳ್ಳುತ್ತಿರುವ ಮುಖ್ಯಮಂತ್ರಿಗಳಿಗೆ ನಾಚಿಕೆ ಆಗಬೇಕು. ಕೆಲವು ಪ್ರದೇಶಗಳಲ್ಲಿ ಮೇವಿನ ಕೊರತೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿರುವ ಘಟಣೆ ತೀವ್ರ ವಿಷಾಧನೀಯವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೇಸ ಸಕಾಋ ಜನರ ಪಾಲಿಗೆ ಬದಕಿದೆಯೋ ಸತ್ತಿದೆಯೋ ಎಂಬುವದು ಗೊತ್ತಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳ ಅಭಿವೃದ್ದಿಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದು ಮಂತ್ರಿ ಮಂಡಳದಲ್ಲಿ ಸಾಮರಸ್ಯದ ಕೊರತೆಯಿಂದ ವರ್ಗಾವಣೆ ದಂದೆಯಲ್ಲಿ ತೊಡಗಿದೆ. ಬರಗಾಲದಿಂದ ಕೆರೆಗಳು, ಜಲಾಶಯಗಳು ಬತ್ತಿ ಹೋಗಿದೆ. ಇದನ್ನು ಎಚ್ಚೆತ್ತುಕೊಂಡು ನಾನು 11 ತಂಡಗಳನ್ನು ರಚಿಸಿ ರಾಜ್ಯ ಪ್ರವಾಸ ಕೈಗೊಂಡಾಗ ಸಿದ್ದರಾಮಯ್ಯ ಎಚ್ಚೆತ್ತುಕೊಂಡು ಬರ ಅಧ್ಯಯನಕ್ಕೆ ತೆರಳಿದರು. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಮತ ಗಳಿಸಿದೆ ಆಸ್ಸಾಂನಲ್ಲಿ ಪ್ರಚಂಡ ಬಹುಮತ ಸರ್ಕಾರ ರಚನೆಗೊಂಡು ಇಡೀ ದೇಶದಲ್ಲಿ ಜನತೆÀ ಕಾಂಗ್ರೇಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ ಎಂದರು.
ಅಭ್ಯರ್ಥಿಗಳಾದ ಅರುಣ ಶಹಾಪೂರ, ಹಣುಮಂತ ನಿರಾಣಿ ಅವರನ್ನು ಪ್ರಥಮ ಪ್ರಾಶಸ್ತ್ಯ ಮತ ನೀಡಿ ಅತ್ಯಂತ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಂಸದ ಸುರೇಶ ಅಂಗಡಿ, ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಾದ ಹಣುಮಂತ ನಿರಾಣಿ ಹಾಗೂ ಅರುಣ ಶಹಾಪೂರ ಅವರನ್ನು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಆಯ್ಕೆರ ಮಾಡಬೇಕೆಂದು ಮನವಿ ಮಾಡಿದರು.
ವಾಯುವ್ಯ ಪದವೀಧರ ಕ್ಷೇತ್ರದ ಹಣುಮಂತ ನಿರಾಣಿ, ಶಿಕ್ಷಕರ ಕ್ಷೇತ್ರದ ಅರುಣ ಶಹಾಪೂರ ಮಾತನಾಡಿ, ತಮಗೆ ಪ್ರತಮ ಪ್ರಾಶಸ್ತ್ಯದ ಮತಗಳನ್ನು ನೀಡುವದರ ಮೂಲಕ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ವೇದಿಕೆ ಮೇಲೆ ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜಿಲ್ಲಾಧ್ಯಕ್ಷ ಈರಣ್ಣ ಕಡಾಡಿ, ಮಂಡಲ ಅಧ್ಯಕ್ಷ ಬಸನಗೌಡ ಚಿಕ್ಕನಗೌಡರ, ನಿಂಗಪ್ಪ ಚೌಡಣ್ಣವರ, ರಾಜು ಟೋಪಣ್ಣವರ, ಜಿಪಂ ಸದಸ್ಯ ಈರಣ್ಣ ಕರಿಕಟ್ಟಿ, ಬಸವರಾಜ ಬಂಡಿವಡ್ಡರ, ತಾಪಂ ಸದಸ್ಯ ಉಮೇಶಗೌಡ ಪಾಟೀಲ, ಸಿ.ಆರ್.ಪಾಟೀಲ, ಬಾಬುಸಾಬ ಸುತಗಟ್ಟಿ, ಎಂ.ಎಂ.ನೇಗಿನಹಾಳ ಮುಂತಾದವರು ಇದ್ದರು.
ಈ ಸಂದರ್ಭದಲ್ಲಿ ಪದವೀಧರ, ಬಿಜೆಪಿಯ ಸಾವಿರಾರು ಕಾರ್ಯಕರ್ತರು ಇದ್ದರು. ಶಾಸಕ ಡಾ. ವಿಶ್ವನಾಥ ಪಾಟೀಲ ಸ್ವಾಗತಿಸಿದರು. ಪುರಸಭೆ ವಿಪಕ್ಷ ನಾಯಕ ಮಹಾಂತೇಶ ತುರಮರಿ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here