ಬಸವಾದಿ ಶಿವಶರಣ-ಶಿವಶರಣೆಯರಲ್ಲಿ ಬಸವಣ್ಣವವರು ಅಗ್ರಗಣ್ಯರು

0
47
loading...

ಮುಂಡರಗಿ : 12 ನೇ ಶತಮಾನದಲ್ಲಿ ಆಗಿಹೋದ ಬಸವಾದಿ ಶಿವಶರಣ-ಶಿವಶರಣೆಯರಲ್ಲಿ ಬಸವಣ್ಣವವರು ಅಗ್ರಗಣ್ಯರಾಗಿದ್ದರು. ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಮೂಲಕ ಎಲ್ಲರೂ ಸಮಾನರೆಂದು ಸಮಾನತೆಯ ಬೀಜ ಬಿತ್ತಿದವರು ಬಸಣ್ಣನವರು ಎಂದು ಯುವ ಮುಖಂಡ ಪಾಲಾಕ್ಷಿ ಗಣದಿನ್ನಿ ಹೇಳಿದರು.
ಅವರು ಬಸವ ಜಯಂತಿ ಅಂಗವಾಗಿ ಮುಂಡರಗಿ ತೋಂಟದಾರ್ಯ ಮಠದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಾನವ ಬಸವಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜನರಲ್ಲಿನ ಮೂಢನಂಬಿಕೆ ದೂರಮಾಡಿದ್ದರು. ಕಾಯಕ, ದಾಸೋಹ ಇವರ ಮೂಲ ಮಂತ್ರವಾಗಿತ್ತು. 12ನೇ ಶತಮಾನದಲ್ಲಿ ಜನಸಾಮಾನ್ಯರಿಗೆ ತಿದ್ದುವ ಭಾಷೆಯಲ್ಲಿ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುವಂತಹ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚನೆ ಮಾಡಿದ್ದರು. ಪ್ರತಿಯೂಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಲೇ ಬೇಕಾದ ಅನೇಕ ವಚನಗಳನ್ನು ಅವರು ಈ ನಾಡಿಗೆ ಕೊಡುಗೆಯಾಗಿ ನೀಡುವ ಮೂಲಕ ಮನುಕುಲವನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ.
12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅನ್ನ ಬಸವಣ್ಣನವರು, ಅಲ್ಲಮಪ್ರಭು, ಚೆನ್ನಬಸವಣ್ಣ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ಡೊಹರ ಕಕ್ಕಯ್ಯ, ಮೋಳಿಗೆಯ ಮಾರಯ್ಯ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸೋಳೆ ಸಂಕವ್ವೆ ಸೇರಿದಂತೆ ಅನೇಕ ಶರಣ-ಶರಣೆಯರನ್ನು ಸೇರಿಸಿ ಉತ್ತಮವಾದ ಆಡಳಿತ ನೀಡಿದ್ದರು. ಅವರ ಪ್ರಜಾಪ್ರಭುತ್ವ ನೀತಿ, ಸಮಾನತೆಯ ತತ್ವಾದರ್ಶಗಳು ಇಂದಿಗೂ ಅವಶ್ಯವಾಗಿವೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವಿಶ್ವನಾಥ ಉಳ್ಳಾಗಡ್ಡಿ ಮಾತನಾಡಿ ಇಂದು ಜಗತ್ತಿಗೆ ಬಸವಣ್ಣನವರ ತತ್ವಾದರ್ಶಗಳು ಅವಶ್ಯವಾಗಿ ಬೇಕಾಗಿವೆ. ಎಲ್ಲೆಂದರಲ್ಲಿ ಅಜ್ಞಾನ, ಅಂದಕಾರ, ಮೂಢ ನಂಬಿಕೆ ಹೆಚ್ಚಾಗುತ್ತಿದೆ. ಜಮರಲ್ಲಿ ಜಾಗ್ರತಿ ಮೂಡಿಸುವ ಮೂಲಕ ಅವರನ್ನು ಕತ್ತಲೆಯಿಂದ ಬೆಳಕಿನತ್ತ ಕರೆತರುವುದು ಅವಶ್ಯವಾಗಿದೆ. ಅಂದಾಗ ಬಸವಣ್ಣನವರ ತತ್ವಕ್ಕೆ ಬೆಲೆ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಈಶಪ್ಪ ಬೆಟಗೇರಿ, ಮುತ್ತು ಹಾಳಕೇರಿ, ಸದಾಶಿವಯ್ಯ ಕಬ್ಬೂರಮಠ, ಉಮೇಶ ಹಿರೇಮಠ, ಶಿವಯೋಗಿ ಕೊಪ್ಪಳ, ಮಂಜುನಾಥ ಮುಧೋಳ, ಶರಣು ಸೊಲಗಿ, ಶಾಂತಮ್ಮ ಹೊಂಬಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗಿರೀಶಗೌಡ ಪಾಟೀಲ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here