‘ಬೀಟ್ ಡಯಾಬಿಟೀಸ್’ ಜಾಗೃತಿ ನಡಿಗೆ

0
42
loading...

ಭಟ್ಕಳ : ಇಲ್ಲಿನ ಸುಲ್ತಾನ್‍ಯುತ್ ವೆಲ್ಫೆರ್ ಅಸೋಸಿಯೇಶನ್ ವತಿಯಿಂದ ಮಧುಮೇಹ ರೋಗದ ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ ಏರ್ಪಡಿಸಲಾದ ‘ಬೀಟ್ ಡಯಾಬಿಟೀಸ್’ ಜಾಗೃತಿ ನಡಿಗೆಗೆ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಸ್ಥಳೀಯ ತಂಝೀಂ ಅಧ್ಯಕ್ಷ ಮುಜಾಮಿಲ್ ಖಾಜೀಯಾ ಹಸಿರು ನಿಶಾನೆ ತೋರಿಸಿದರು.
ಜಾಥಾ ನವಾಯತ್ ಕಾಲೋನಿಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಿಂದ ಹೊರಟು ಹೆದ್ದಾರಿ ಮೂಲಕ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ಮೈದಾನದಲ್ಲಿ ಸಮಾವೇಶಗೊಂಡಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವರು ಮನುಷ್ಯರಿಗೆ ರೋಗಗಳನ್ನು ಕೊಟ್ಟಂತೆಯೇ ಅವುಗಳಿಗೆ ಪರಿಹಾರಗಳನ್ನು ಸಹ ನೀಡಿದ್ದಾನೆ. ಮನುಷ್ಯರಾದ ನಾವು ಕಾಯಿಲೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳದೇ ನಿರ್ಲಕ್ಷ ಮಾಡಿದ್ದರಿಂದ ಈ ಪರಿಸ್ಥಿತಿ ಬಂದಿದೆ ಎಂದರು. ನಮ್ಮ ಆಹಾರ ಪದಾರ್ಥಗಳಲ್ಲಿ ಹತೋಟಿಯನ್ನು ವಹಿಸಿ, ಮುಂಜಾನೆಯ ಸಮಯದಲ್ಲಿ ನಡಿಗೆಯನ್ನು ಮಾಡುವುದು, ದೇಹವನ್ನು ದಣಿಸುವುದರ ಮೂಲಕ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ತಾಲೂಕಾ ಆಸ್ಪತ್ರೆಯ ವೈದ್ಯ ಡಾ. ಹಿಪ್ಜುರ್ ರೆಹಮಾನ್ ಮಾತನಾಡಿ ಆಸ್ಪತ್ರೆಯಲ್ಲಿ ದಿನಕ್ಕೆ 200 ಜನರು ಬಂದರೆ ಅವರಲ್ಲಿ 100 ಜನರು ಸಕ್ಕರೆ ಕಾಯಿಲೆಯಿರುವವರಾಗಿರುತ್ತಾರೆ ಎಂದರು. ಇನ್ನು ಭಾರತದಲ್ಲಿ ಪ್ರತಿ ಸೆಕೆಂಡ್‍ಗೆ 8 ಜನರು ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದರೆ, ಅಮೇರಿಕಾದಲ್ಲಿ ಪ್ರತಿ ಸೆಕೆಂಡ್‍ಗೆ ಒಬ್ಬರಂತೆ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದರು. ನಮ್ಮ ಆಹಾರ ಪದಾರ್ಥದಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳದೇ ಸಿಕ್ಕಿದ್ದನ್ನು ತಿನ್ನುವುದರಿಂದಲೇ ಡಯಾಬೀಟೀಸ್ ಕಾಯಿಲೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದೂ ಕಿವಿ ಮಾತು ಹೇಳಿದರು.
ಇನ್ನೋರ್ವ ಗೌರವ ಅತಿಥಿ ಡಾ. ಸುರೇಶ ನಾಯಕ ಮಾತನಾಡಿ ನನ್ನ ವೈದ್ಯ ವೃತ್ತಿಯಲ್ಲಿ 15 ವರ್ಷದ ಬಾಲಕರು, ಬಾಲಕಿಯರು, ಯುವಕರು ಡಯಾಬೀಟಿಸ್ ಕಾಯಿಲೆ ಅನುಭವಿಸುತ್ತಿರುವವರು ಬರುತ್ತಾರೆ. ದೇಹಕ್ಕೆ ಸಕ್ಕರೆ ಅಂಶವಿರಬೇಕು ಆದರೆ ಸಕ್ಕರೆ ಅಂಶದ ಪದಾರ್ಥ ಸೇವನೆಯಲ್ಲಿ ಹೆಚ್ಚು ಆಗಬಾರದು ಕಡಿಮೆಯಾದರೆ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಎಂದ ಅವರು ದೇಹದಲ್ಲಿನ ಇನ್ಸುಲಿನ್ ಹಾರ್ಮೋನ್‍ಗಳು ವಯಸ್ಸಾದಂತೆ ಶಕ್ತಿ ಕುಂದುತ್ತಾ ಹೋಗುತ್ತದೆ ಎಂದರು. ಇರಾನಿಗಳು ಚಪ್ಪೆ ಪದಾರ್ಥದ ಸೇವನೆಯಿಂದ ದಷ್ಟಪುಷ್ಟವಾದ ದೇಹವನ್ನು ಹೊಂದಿರುತ್ತಾರೆ ಎಂದೂ ಹೇಳಿದ ಅವರು ಮಿತವಾದ ಆಹಾರ ಹಿತವಾದ ವ್ಯಾಯಾಮದಿಂದ ಡಯಾಬಿಟೀಸ್ ದೂರ ಇಡಬಹುದು ಎಂದರು.
ವೇದಿಕೆಯಲ್ಲಿ ಸುಲ್ತಾನ್ ಯೂಥ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಎಂ.ಎಂ.ಅಝೀಮ್ ಮಂಡೆ, ಪ್ರಧಾನ ಕಾರ್ಯದರ್ಶಿ ಸಮಿ ಮೆಡಿಕಲ್, ಎಸ್.ಎಮ್. ಫರವೇಜ್, ನಜೀರ್ ಕಾಜೀಮ್‍ಜೀ, ಅಬ್ದುಲ್ ಸಮದ್ ಜುಬಾಪು, ಅಲ್ತಾಫ್ ಕೋಲಾ, ವಸಾತುಲ್ಲಾ, ಸಿಪಿಐ ಪ್ರಶಾಂತ ನಾಯಕ, ನಗರ ಠಾಣೆಯ ಪಿಎಸೈ ರೇವತಿ, ಹೆಚ್. ಬಿ. ಕುಡಕುಂಟಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here