ಭೀಕರ ರಸ್ತೆ ಅಪಘಾತ: ಇಬ್ಬರ ಸಾವು

0
17
loading...

ಚೆನ್ನಮ್ಮ ಕಿತ್ತೂರು 15: ಸಮೀಪದ ಡೊಂಬರಕೊಪ್ಪ ಪ್ರವಾಸಿ ಮಂದಿರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೆ ಹಿಂಬದಿಯಿಂದ (ಜೈಲೋ) ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವಿಗೀಡಾಗಿ 6 ಜನರಿಗೆ ಗಾಯಗಳಾದ ಘಟನೆ ರವಿವಾರ ಮುಂಜಾನೆ 5 ಗಂಟೆಗೆ ಜರುಗಿದೆ.

ಹುಕ್ಕೇರಿ ತಾಲೂಕಿನ ಕಬ್ಬೂರ ಗ್ರಾಮದ ರಾಜೀವ ಭೂತಪ್ಪ ಒಡೆಯರ (31) ಬಾಲಕಿ ಪೂರ್ವಿ ನವೀನ ಬಾಯಿನಾಯಕ (11) ಮೃತ ದುರ್ದೈವಿಗಳಾಗಿದ್ದಾರೆ. ಕಬ್ಬೂರ ಗ್ರಾಮದಿಂದ ಮೈಸೂರು ನಗರಕ್ಕೆ ಪ್ರವಾಸಕ್ಕೆ ತೆರಳಿ ಮರಳಿ ಬರುತ್ತಿದ್ದಾಗ ಮುಂಜಾನೆ 5 ಗಂಟೆಗೆ ಚಾಲಕ ಸುಧಾಕರ ಭಜಂತ್ರಿ ಅತೀ ವೇಗವಾಗಿ ನಿರ್ಲಕ್ಷತೆಯಿಂದ ಕಾರು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನ ಜಖಂಗೊಂಡು ಸ್ಥಳದಲ್ಲಿಯೇ ಇಬ್ಬರು ಅಸುನಿಗಿದ್ದಾರೆ. ರಾಘವೇಂದ್ರ ಸಾಹುಕಾರ, ಜಯಶ್ರೀ ಸಾಹುಕಾರ, ನವೀನ ಬಾಯಿನಾಯಕ, ಜ್ಯೋತಿ ಬಾಯಿನಾಯಕ, ಭಾಗ್ಯಶ್ರೀ ಕೊಂ ಸೋಮಲಿಂಗ, ಸುಧಾಕರ ಭಜಂತ್ರಿ ಇವರಿಗೆ ಗಾಯಗಳಾಗಿದ್ದು ಅವರನ್ನು ಬೆಳಗಾವಿ ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ವಿರುದ್ದ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವೀಂದ್ರ ಗಡಾದೆ, ಬೈಲಹೊಂಗಲ ಡಿ.ವೈಎಸ್‍ಪಿ ಶೇಖರ ಅಗಡಿ, ಸಿಪಿಐ ಸಂಗನಗೌಡ, ಪಿಎಸ್‍ಐ ನಿಂಗನಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

loading...

LEAVE A REPLY

Please enter your comment!
Please enter your name here