ಮಕ್ಕಳಲ್ಲಿ ಹಲವು ಸೃಜನಾತ್ಮಕ ಚಟುವಟಿಕೆಗಳು ಅಡಕವಾಗಿರುತ್ತವೆ

0
30
loading...

ಮುಂಡರಗಿ : ಮಕ್ಕಳಲ್ಲಿ ಹಲವು ಸೃಜನಾತ್ಮಕ ಚಟುವಟಿಕೆಗಳು ಅಡಕವಾಗಿರುತ್ತವೆ, ಕೆಲವು ಮಕ್ಕಳ ಮನಸ್ಸುಗಳು ನಿರಾಶೆ ಹೊಂದಿರುತ್ತವೆ, ಹೀಗಾಗದಂತೆ ಸೃಜನಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ರಂಗಕಲೆ, ಕರಕುಶಲ, ಸಂಗೀತ, ಯೋಗ ಕಲೆಗಳು ಸಹಾಯವಾಗುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಹೇಳಿದರು.
ಮುಂಡರಗಿ ಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಡಿಪಿಒ, ಶಿಕ್ಷಣ ಇಲಾಖೆ, ಯಶಸ್ವಿನಿ ವಿವಿದೋದ್ದೇಶಗಳ ಸಂಘದ ಆಶ್ರಯದಲ್ಲಿ 9ರಿಂದ 19 ವರ್ಷದ ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ ಬೇಸಿಗೆ ಶಿಬಿರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಚಿತ್ರಕಲೆ ಬಿಡಿಸುವದರ ಮೂಲಕ ಉದ್ಘಾಟಿಸಿದರು.
ಶಿಬಿರಗಳು ಕೇವಲ ಒಂದೇ ವಿಷಯಕ್ಕೆ ಸೀಮಿತವಾಗದೆ ಅವರ ಆಸಕ್ತಿಗೆ ಅನುಗುಣವಾಗಿ ಇಲ್ಲಿ ನಡೆಯುವ ಶಿಬಿರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಬೆಲೆ ಸಿಗಲು ಸಂಘ ಸಂಸ್ಥೆಗಳು, ಇಲಾಖೆಗಳು, ಸಂಪನ್ಮೂಲ ವ್ಯಕ್ತಿಗಳು ಪ್ರೋತ್ಸಾಹ ನೀಡಲು ಸಾಮೂಹಿಕ ಜವಾಬ್ದಾರಿ ಹೊತ್ತರೆ ಅವರನ್ನು ಕೂಡಾ ಕೀಳರಿಮೆಯಿಂದ ಹೊರತಂದು ಸಾಧನೆ ಮಾಡಲು ಸಹಾಯವಾದಂತಾಗುತ್ತದೆ, ಮಕ್ಕಳು, ಶಿಕ್ಷಕರ ಮತ್ತು ಪಾಲಕರ ಜತೆಗೆ ಮುಕ್ತವಾಗಿ ಮಾತನಾಡುವದನ್ನು ಚರ್ಚಿಸುವದನ್ನು ರೂಢಿಮಾಡಿಕೊಳ್ಳಬೇಕು, ಸಂದೇಹ ಪಟ್ಟು ಹಾಗೆ ಉಳಿದುಕೊಂಡರೆ ಅವರ ಅನುಮಾನಗಳು ಹಾಗೆ ಉಳಿದು ಹೊಸ ವಿಷಯಗಳಲ್ಲಿ ಅಸಕ್ತಿ ಕಳೆದುಕೊಳ್ಳುವಂತಾಗುತ್ತದೆ ಇದಕ್ಕೆ ಅವಕಾಶ ನೀಡದೆ ತಮಗೆ ಗೊತ್ತಿರುವ ವಿಷಯಗಳನ್ನು ನೇರವಾಗಿ ಹೇಳುವ ಮತ್ತು ಕೇಳುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ, ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಮಾತನಾಡಿ ಮಕ್ಕಳು ಕೇವಲ ಜ್ಞಾನ ಬುದ್ದಿ ಬೆಳೆಸಿಕೊಳ್ಳುವತ್ತ ಗಮನ ಹರಿಸದೆ ಭಾವನೆಗಳನ್ನು ಕೂಡಾ ವಿಸ್ತರಿಸಿಕೊಳ್ಳುವ ಬೆಳೆಸಿಕೊಳ್ಳುವ ಪ್ರವೃತಿ ಬಂದರೆ ಅವರಲ್ಲಿರುವ ಸುಪ್ತವಾಗಿರುವ ಪ್ರತಿಭೆ ಹೊರಹೊಮ್ಮಲು ಮತ್ತು ತಮ್ಮ ಗುರಿ ಸಾಧಿಸಲು ನೆರವಾಗುತ್ತದೆ ಎಂದರು.
ಎ.ಎಸ್.ಗೋಟಖಿಂಡಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಿಡಿಪಿಒ ಎಸ್.ಎಸ್.ವಾರದ, ಉಪತಹಸೀಲ್ದಾರ ಕೆ.ಬಿ.ಕೋರಿಶೆಟ್ಟರ, ಪ್ರಗು ಎಸ್.ಎಸ್.ನಂಜನಗೂಡ, ವಿಷಯ ಪರಿವೀಕ್ಷಕ ಜೆ.ಡಿ.ದಾಸರ, ಜ್ಯೋತಿ ಕುರಿಯವರ, ಪತ್ರಕರ್ತ ಸಿ.ಕೆ.ಗಣಪ್ಪನವರ ವಿಶ್ವನಾಥ ಉಳ್ಳಾಗಡ್ಡಿ ಸಂಪನ್ಮೂಲ ವ್ಯಕ್ತಿಗಳಾದ ಜೆ.ಕೆ.ಬಾಗವಾನÉ, ಡಾ.ನಿಂಗು ಸೊಲಗಿ, ಎಂ.ಎಚ್.ಬೆಟಗೇರಿ , ಗಿರಿಜಾ ಹಸಬಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here