ಮಕ್ಕಳ ಶಾಲಾ ದಾಖಲಾತಿ ಆಂದೋಲನ ಅವಶ್ಯ: ಬಮ್ಮಕ್ಕನವರ

0
44
loading...

ಧಾರವಾಡ : ಕಲಂ 3ರ ಅನ್ವಯ 6 ರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವು ತನ್ನ ಹತ್ತಿರದ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿ ಮಾಡುವವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿದೆ ಎಂದು ಹುಬ್ಬಳ್ಳಿ ಶಹರ ವಲಯ ಬಿಇಒ ಉಮೇಶ ಬಮ್ಮಕ್ಕನವರ ಹೇಳಿದರು.
ಹೊಸೂರಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ‘ತಾಲೂಕು ಮಕ್ಕಳ ಶಿಕ್ಷಣ ಹಕ್ಕು ರಕ್ಷಣೆಗಾಗಿ “ಶಾಲೆ ಕಡೆಗೆ ನಮ್ಮ ನಡಿಗೆ” ಮತ್ತು “ದಾಖಲಾತಿ ಆಂದೊಲನ” ಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲಾ ಮಕ್ಕಳು ಉಚಿತ ಕಡ್ಡಾಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಒಂದು ಮೂಲಭೂತ ಹಕ್ಕನ್ನಾಗಿ ಸರ್ವೋಚ್ಛ ನ್ಯಾಯಾಲಯವು 1993ರಲ್ಲಿ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಎತ್ತಿಹಿಡಿದಿದೆ. ಈ ದಿಶೆಯಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ-2009 ಅತ್ಯಂತ ಮಹತ್ವದ ಕಾಯಿದೆಯಾಗಿದ್ದು, ಈ ಕಾಯಿದೆ ಜಾರಿಯಾಗಿ 6 ವರ್ಷ ಮುಗಿಯುತ್ತಾ ಬಂದಿದೆ ಎಂದರು.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲೆಗೆ ಹೋಗದ ಮತ್ತು ಶಾಲೆಯಿಂದ ಹೊರಗುಳಿದಿರುವ ಎಲ್ಲಾ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ “ಶಾಲೆ ಕಡೆ ನನ್ನ ನಡೆ” ಶಿಕ್ಷಣ ನನ್ನ ಮೂಲಭೂತ ಹಕ್ಕು ಎಂಬ ವಿನೂತನ ಜನಾಂದೋಲನವನ್ನು ರೂಪಿಸಿದೆ. ಇದರೊಟ್ಟಿಗೆ “ಮಕ್ಕಳ ಶಾಲಾ ದಾಖಲಾತಿ ಆಂದೋಲನ” ಕೂಡ ಈಗಾಗಲೇ ಪ್ರಾರಂಭವಾಗಿದ್ದು, ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಏಕೆಂದರೆ ‘ಶಿಕ್ಷಣ ಮಕ್ಕಳ ಬದುಕು ರೂಪಿಸುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ ಕುಂಬಾರ ಅಧ್ಯಕ್ಷತೆವಹಿಸಿದ್ದರು. ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಪಿ.ಎಮ್.ತಟ್ಟಿಮನಿ, ಗೌರಮ್ಮ ಕೋಲಕಾರ, ಸಂಜೀವಕುಮಾರ ಭೂಶೆಟ್ಟಿ, ಗೀತಾ ಚುಳಕಿ, ಡಿ.ಎಫ್.ಬಿಜಾಪೂರ,ಸುನಂದಾ ಪವಾರ, ಸರೊಜಾ ಪಾಟೀಲ, ಎನ್.ಎಲ್.ಪಾಟೀಲ, ಡಿ.ಎಫ್.ಈರಗಾರ ಉಪಸ್ಥಿತರಿದ್ದರು.ರಾಜೇಸಾಬ ಬಡಗಿ ಸ್ವಾಗತಿಸಿದರು, ಕೆ.ಎನ.ಕೊಟಗಾರ ವಂದಿಸಿದರು ಲಿಂಗರಾಜ ರಾಮಾಪೂರ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here