ಮಳೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ಮತ್ತು ಭಜನೆ ಕಾರ್ಯಕ್ರಮ

0
58
loading...

ಯಲ್ಲಾಪುರ : ತಾಲೂಕಿನಲ್ಲಿ ನಲವತ್ತು ನಲವತ್ತೈದು ವರ್ಷಗಳ ಅವಧಿಯಲ್ಲಿ ಕಂಡು ಕೇಳರಿಯದ ಭೀಕರ ಬರಗಾಲದಿಂದ ಜನ-ಜಾನುವಾರುಗಳು ತತ್ತರಿಸುವಂತಾಗಿದೆ. ಸಮರೋಪಾದಿಯಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮನುಷ್ಯ ಪ್ರಯತ್ನದೊಂದಿಗೆ ದೈವಿ ಬಲವೂ ಮುಖ್ಯ .ನಿಸರ್ಗದ ಮುನಿಸಿಗೆ ವಿಶೇಷ ಪೂಜೆ, ಪ್ರಾರ್ಥನೆ, ಭಜನೆ ಮೂಲಕ ಶ್ರೀದೇವಿಯ ಮೊರೆ ಹೋಗಿ ವರುಣನ ಕೃಪೆಗಾಗಿ ಪ್ರಾರ್ಥಿಸೋಣ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನ ಜಾಗೃತಿ ವೇದಿಕೆ ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಯಲ್ಲಾಪುರ ವಲಯ ಇವುಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಸುಭೀಕ್ಷೆ ಕಾರ್ಯಕ್ರಮದಡಿಯಲ್ಲಿ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ಮತ್ತು ಭಜನೆ ಕಾರ್ಯಕ್ರಮಗಳನ್ನುಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಸದಸ್ಯ ಡಾ.ರವಿ ಭಟ್ಟ ಬರಗದ್ದೆ ಕೆ.ಎಮ್.ಎಪ್ ನಿರ್ದೇಶಕ ಪ್ರಶಾಂತ ಸಭಾಹಿತ ,ಪಾಲ್ಗೋಂಡಿದ್ದರು.ಧ.ಗ್ರಾ.ಯೋ ಯೋಜನಾಧಿಕಾರಿ ಕೇಶವ ದೇವಾಂಗ ಸ್ವಾಗತಿಸಿದರು.ಡಿ.ಎನ್.ಗಾಂವ್ಕರ್ ವಂದಿಸಿದರು.ನಂತರ ಸ್ವ ಸಹಾಯ ಸಂಘದ ಸದಸ್ಯರು ಒಕ್ಕೂಟದ ಪದಾಧಿಕಾರಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

loading...

LEAVE A REPLY

Please enter your comment!
Please enter your name here