ಮಳೆ-ಗಾಳಿ: ಅಪಾರ ಆಸ್ತಿಪಾಸ್ತಿ ಹಾನಿ

0
21
loading...

ಚೆನ್ನಮ್ಮ ಕಿತ್ತೂರು 15: ಬಿರುಗಾಳಿ ಮತ್ತು ಮಳೆಯಿಂದಾಗಿ ರವಿವಾರ ಮುಂಜಾನೆ ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಕೊಂಚ ಭಯಗೊಳ್ಳುವಂತಾಯಿತು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರಳಿದರೆ, ಮೇಲ್ಛಾವಣಿಗಳು ಗಾಳಿಗೆ ಹಾರಿ ಹೋಗಿದ್ದು, ಜೀವಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಪಟ್ಟಣದ ವಿದ್ಯಾಗಿರಿಯುಲ್ಲಿರುವ ಅಯ್ಯಪ್ಪ ಸ್ವಾಮೀಜಿ ದೇವಸ್ಥಾನದ 4 ಲಕ್ಷ ವೆಚ್ಚದ 30*60 ಸೈಜಿನ ಸಭಾಭವನದ ಮೇಲ್ಛಾವಣಿ ಬಿರುಗಾಳಿಗೆ (ಶೆಡ್) ಹಾರಿದ್ದು, ಅದೃಷ್ಟವಶಾತ್ ಅಲ್ಲಿ ಯಾರು ಇಲ್ಲದರಿಂದ ಜೀವ ಹಾನಿ ಸಂಭವಿಸಿಲ್ಲ. ಅದು ಸಮೀಪದ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಬಿದ್ದಿದೆ. ಗಾಳಿ ರಬಸಕ್ಕೆ ವಿದ್ಯುತ್ ಕಂಬ ಸಹ ಮುರಿದು ಹೋಗಿದೆ. ಕೋಟೆ ಆವರಣದಲ್ಲಿ ಮರಗಳ ರೆಂಬೆಗಳು ಮತ್ತು ಮರವೊಂದು ಬಿದ್ದಿವೆ ಅಲ್ಲದೆ ಗಾಳಿಯ ರಭಸಕ್ಕೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಸಾಮಗ್ರಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಕೋಟೆ ಆವರಣದ ಗಾಳಿಯಿಂದಾಗಿ ಸಾಕಷ್ಟು ಕಸ ತುಂಬಿತ್ತು ಪ್ರಾಚ್ಯ ವಸ್ತು ಇಲಾಖೆ ಕ್ಯುರೇಟರ ರಾಘವೇಂದ್ರ ಅವರು ಹಾಗೂ ಸಿಬ್ಬಂದಿಗಳು ಮರವನ್ನು ಹಾಗೂ ಕಸವನ್ನು ತೆರವುಗೊಳ್ಳಿಸುವ ಕಾರ್ಯದಲ್ಲಿ ತೊಡಗಿದ್ದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಇಲ್ಲಿಯ ಗೃಹ ಮಂಡಳಿ ಹತ್ತಿರ ಅಳವಡಿಸಿದ್ದ ಸ್ವಾಗತ ಫಲಕ ನೆಲಕುರಳಿದೆ. ರೈತರ ಓಣಿಯಲ್ಲಿ ಎರಡು ತೆಂಗಿನ ಮರಗಳು ನೆಲಕಚ್ಚಿವೆ.
ಹೆಸ್ಕಾಂಗೆ ಹಾನಿ
ಬಿರುಗಾಳಿ ಮಳೆಗೆ ಮರಗಳು ರೆಂಬೆಗಳು ಬಿದ್ದು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇಲ್ಲಿಯ 110 ಕೆ.ವ್ಹಿ. ಸ್ಟೇಶನಲ್ಲಿರುವ ಪರಿವರ್ತಕ (ಕರೆಂಟ್ ಟ್ರಾನ್ಸಪರಿಂಗಗೆ ) ಹಾನಿಯಾಗಿದೆ. ಕಿತ್ತೂರು ಅಂಬಡಗಟ್ಟಿ, ಕುಲವಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮರಗಳು ನೆಲಕುರಳಿ 8 ಕಂಬಗಳು ಮುರಿದಿವೆ. ಅಲ್ಲದೆ ಕೇಲವೊಂದು ಗ್ರಾಮಗಳಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಂಡಿದ್ದು, ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮರಗಳನ್ನು ತೆರವುಗೊಳ್ಳಿಸಿ ವಿದ್ಯುತ್ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಕಾರ್ಯನಿರತರಾಗಿದ್ದಾರೆ.
ಕೈಗೆ ಬಂದ ಮಾವಿನ ಫಸಲು ಹಾಳು
ತಾಲೂಕಿನ ಮಾವು ಬೆಳೆಗಾರರು ಆತಂಕದಲ್ಲಿದ್ದಾರೆ ರವಿವಾರ ಮುಂಜಾನೆ ಸುರಿದ ಮಳೆ ಹಾಗೂ ಬಿರುಗಾಳಿಗೆ ನೂರಾರು ಎಕರೆ ಮಾವು ನೆಲಕ್ಕೆ ಉರಳಿದೆ.
ನೆಲಕ್ಕೆ ಬಿದ್ದ ಸಾಕಷ್ಟು ಆಪುಸ ಮಾವಿನ ಕಾಯಿಗೆ ಬೆಲೆಯೇ ಇಲ್ಲದಂತಾಗಿದೆ. ರೈತರ ಅತಂತ್ರ ಸ್ಥಿತಿಯನ್ನು ಅರಿತ ವ್ಯಾಪಾರಿಗಳು ಇಷ್ಟ ಬಂದತ್ತೆ ಬೆಲೆ ನಿರ್ಧರಿಸುತ್ತಿದ್ದಾರೆ. ಈ ವರ್ಷ ಮಾವಿನ ಇಳುವರಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿತ್ತು ಅದುವರೆಗೂ ಇದ್ದ ಉಷ್ಠಾಂಶ ಕಡಿಮೆಯಾಗಿ ತೇವಾಂಶ ಮೂಡಿದ್ದರಿಂದ ಮಾವಿನ ಕಾಯಿ ಉದರುವ ಪ್ರಮಾಣ ಕಡಿಮೆಯಾಗಲಿದೆ ಎಂದು ಬಹುತೇಕ ರೈತರು ಭಾವಿಸಿದ್ದರು. ಮಾವಿನ ಕಾಯಿ ಬಲಿತು ಕೋಯುವ ಸ್ಥಿತಿಗೆ ಬಂದಿತ್ತು ಆದರೆ ಬಿರುಗಾಳಿ ಮಳೆಯಿಂದ ಮಾವಿನ ಕಾಯಿಗಳು ಉದುರಿ ಬಿದ್ದ ಪರಿಣಾಮ ಬೆಳೆಗಾರರು ಅಪಾರ ಪ್ರಮಾಣದ ಹಾನಿ ಅನುಭವಿಸಿದ್ದಾರೆ.

loading...

LEAVE A REPLY

Please enter your comment!
Please enter your name here