ಮಹಾಂತೇಶ ಕೌಜಲಗಿಯವರ ಗೆಲವು ಖಚಿತ: ಪಾಟೀಲ

0
23
loading...

ಮೋಳೆ 15: ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿಯವರು ಪದವಿಧರ ಜಾಗೃತ ಮತದಾರರ ಅಭ್ಯರ್ಥಿ. ಸದಾ ನಮ್ಮೊಂದಿಗೆ ಬೆರೆತು ಪಕ್ಷದ ತತ್ವ ಸಿದ್ದಾಂತಕ್ಕೆ ಅನುಗುಣವಾಗಿ ಜನಸೇವೆ ಮಾಡುವ ಜಾತ್ಯಾತೀತ ಮನೋಭಾವದ ನಾಯಕ ನಮಗೆ ಬೇಕಾಗಿದ್ದಾರೆ. ಆ ಸ್ಥಾನವನ್ನು ಮಹಾಂತೇಶ ಕೌಜಲಗಿಯವರು ತುಂಬಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ ಹೇಳಿದರು.
ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಐನಾಪೂರ ಗ್ರಾಮದಲ್ಲಿಂದು ಬ್ಲಾಕ್ ಕಾಂಗ್ರಸ್ ಪದವಿಧರರ ಸಮಾವೇಶದಲ್ಲಿ ಮಾತನಾಡಿದ ಅವರು ಜೂನ ತಿಂಗಳಲ್ಲಿ ಪಕ್ಷದಿಂದ ನಡೆಯಲಿರುವ ರಾಜ್ಯ ಪದವಿಧರ ಮತಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿರುವ ಮಹಾಂತೇಶ ಕೌಜಲಗಿಯವರ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪದವಿಧರ ಕ್ಷೇತ್ರದ ಅಭ್ಯರ್ಥಿ ಹಾಗೂ ವಿಧಾನಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಅವರು ಐನಾಪೂರದಲ್ಲಿ ಮಾತನಾಡುತ್ತ ಒಟ್ಟು 1.5 ಲಕ್ಷ ಮತದಾರರಿರಿದ್ದು, 33 ವಿಧಾನಸಭಾ ಮತಕ್ಷೇತ್ರ, ಮತ್ತು 4 ಲೋಕಸಭಾ ಮತಕ್ಷೇತ್ರವನ್ನೋಳಗೊಂಡ ರಾಜ್ಯದಲ್ಲಿಯೇ ಅತೀ ದೊಡ್ಡ ವಿಧಾನಪರಿಷತ್ ಮತಕ್ಷೇತ್ರವಾಗಿದೆಎಂದರು.
ರಾಜ್ಯದಲ್ಲಿ ಕಳೆದ ಮುರು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳೆ ನಮಗೆ ಶ್ರೀರಕ್ಷೆ ಆಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೋಳೆ, ಪಟ್ಟಣ ಪಂಚಾಯತ್ ಸದಸ್ಯ ರವೀಂದ್ರ ಗಾಣಿಗೇರ ಮುಖಂಡರಾದ ರಾಜೇಂದ್ರ ಪೋತದಾರ, ವಿವೇಕ ಶೆಟ್ಟಿ ಪದವಿಧರ ಕ್ಷೇತ್ರದ ಅಭ್ಯರ್ಥಿ ಮಹಾಂತೇಶ ಕೌಜಲಗಿಯವರ ತಂದೆಯವರ ಕೊಡುಗೆ ಉತ್ತರ ಕರ್ನಾಟಕ್ಕೆ ಅನನ್ಯವಾಗಿದೆ. ಅವರು ಮಾಡಿದ ಕಾರ್ಯಗಳನ್ನು ಸ್ಮರಿಸುತ್ತ ಕೌಜಲಗಿಯವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ , ಕೆಪಿಸಿಸಿ ಸದಸ್ಯ ಚಂದ್ರಕಾಂತ ಇಮ್ಮಡಿ. ಪ್ರಶಾಂತ ಐಹೋಳೆ, ಮಾನಸಾ ಪೋತದಾರವಿಜಯ ಅಕಿವಾಟೆ, ಮಹಾದೇವ ಕೋರೆ, ಬಿ.ಆರ್.ಅಲಸಂದಿ, ಬಾಬಾಸಾಬ ಸಿಂದೆ, ಓಂಪ್ರಕಾಶ ಪಾಟೀಲ, ಯಶವಂತ ಪಾಟೀಲ, ಅಜೀತ ಪಾಟೀಲ, ಶ್ರೀಶೈಲ ತುಗಶೆಟ್ಟಿ, ಉಜ್ವಲಾ ಶೆಟ್ಟಿ, ಜ್ಯೋತಿಕುಮಾರ ಪಾಟೀಲ, ಪಾಯಪ್ಪ ಕುಡವಕ್ಕಲಗಿ, ಸೇರಿದಂತೆ ಮತಕ್ಷೇತ್ರದ ನೂರಾರು ಪಧವಿದರರು, ಮುಖಂಡರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here