ಮಾನವೀಯ ಮೌಲ್ಯಗಳನ್ನು ನೀಡುವ ಶಿಕ್ಷಣದ ಅವಶ್ಯಕತೆ ಇದೆ: ಕೃಷಿಕ ಅಬ್ದುಲ್ ಶೇಕ್

0
55
loading...

ಶಿರಸಿ : ವರ್ತಮಾನದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿದ್ದು, ಮಾನವೀಯ ಮೌಲ್ಯಗಳನ್ನು ನೀಡುವ ಶಿಕ್ಷಣದ ಅಗತ್ಯತೆ ಇದೆ ಎಂದು ಉತ್ತಮ ಕೃಷಿಕ ಅಬ್ದುಲ್ ರವೂಫ್ ಶೇಕ್ ಹೇಳಿದರು.
ಇಲ್ಲಿನ ಅರಣ್ಯ ನೌಕರರ ಸಭಾಭವನದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವ ಅಂಗವಾಗಿ ಸದಸ್ಯತ್ವ ಸ್ವೀಕಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಶಿಕ್ಷಣ ವ್ಯವಸ್ಥೆ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಪುರಾತನ ಶಿಕ್ಷಣಕ್ಕೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸವಾಗಿದೆ. ಈ ಮೊದಲಿನ ಶಿಕ್ಷಣವು ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವ ಜೊತೆಗೆ ಜೀವನ ರೂಪಿಸುವ ಆತ್ಮಸ್ಥೈರ್ಯ ನೀಡುತ್ತಿತ್ತು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಮಾನವೀಯ ಮೌಲ್ಯಗಳು ಕಳೆದುಹೋಗಿದ್ದು ಪುಸ್ತಕದ ಹುಳುಗಳನ್ನಾಗಿ ಮಾಡಿದೆ. ಹೀಗಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿ ರಾಜ್ಯ ಸಂಚಾಲಕ ಶ್ರೀಸತ್ಯ ಮಾತನಾಡಿ, ಆದರ್ಶ ವ್ಯಕ್ತಿಗಳ ಜಯಂತಿಗಳೂ ಇಂದು ತಾರತಮ್ಯದಡಿ ನಡೆಯುತ್ತಿವೆ. ಈ ಹಿಂದೆ ಸಮಾಜದಲ್ಲಿ ಬೇರುಬಿಟ್ಟಿದ್ದ ಜಾತಿ ವ್ಯವಸ್ಥೆ ಇಂದು ಹಲವು ಮಜಲುಗಳ ಮೂಲಕ ಕಾಡುತ್ತಿದೆ. ಎಲ್ಲರೂ ಒಂದು ಎಂಬ ಭಾವನೆಯಡಿ ಮಹಾಪುರುಷರ ಜಯಂತಿ ಆಚರಿಸುವ ಮೂಲಕ ಸಮಾಜ ಒಗ್ಗೂಡಬೇಕು ಎಂದರು.
ಬನವಾಸಿ ಹೊಳೆಮಠದ ನಾಗಭೂಷಣ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಶಿರಸಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುಗಳವಳ್ಳಿ ಕೇಶವ ಧರಣಿ, ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮರೀಶ ನಾಗಣ್ಣನವರ್, ಪ್ರಮುಖರಾದ ಎಸ್.ಎನ್.ಮಲ್ಲಪ್ಪ, ಮಾಧವ ರೇವಣಕರ ಹಾಗೂ ಇತರರು ಇದ್ದರು.

loading...

LEAVE A REPLY

Please enter your comment!
Please enter your name here