ರಾಜಕಾರಣದ ಅಧಿಕಾರ ವ್ಯಕ್ತಿ, ಕುಟುಂಬಕ್ಕೆ ಸಮೀತವಾಗಬಾರದು: ಡಾ. ಬಾಬುರಾಜೇಂದ್ರ

0
13
loading...

ಬೆಳಗಾವಿ 24: ರಾಜಕಾರಣ, ಅಧಿಕಾರ ಎಂಬುದು ಯಾವುದೇ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ಸಿಮೀತ ಆಗಿರಬಾರದು. ಇಂದು ಯಾವುದೇ ರಾಜಕೀಯ ಪಕ್ಷದ ಉದಾಹರಣೆ ತೆಗೆದುಕೊಂಡರೂ, ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಎಲ್ಲೆ ಮೀರಿದೆ. ಕುಟುಂಬ ರಾಜಕಾರಣ ಮಾಡುವ ವ್ಯಕ್ತಿಗಳಿಗೆ, ಪ್ರಬುದ್ಧರಾದ ಪದವೀಧರ ಮತದಾರರು ತಕ್ಕ ಉತ್ತರ ಕೊಡಬೇಕು ಎಂದು ವಾಯವ್ಯ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಬಾಬುರಾಜೇಂದ್ರ ನಾಯಿಕ ಹೇಳಿದರು.

ಮಂಗಳವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜ, ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆಯಬೇಕು ಎಂದು ಭಾಷಣ ಮಾಡುತ್ತಾರೆ. ಆದರೆ, ಅದೇ ಉನ್ನತ ಶಿಕ್ಷಣ ಪಡೆದ ಪದವೀಧರರ ಮತದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಈವರೆಗೆ ಏನು ಮಾಡಿದ್ದಾರೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಲಕ್ಷಾಂತರ ಜನರು ಪದವಿ ಪಡೆದವರಿದ್ದಾರೆ. ಆದರೆ, ಕೆಲವೇ ಕೆಲವರು ಮಾತ್ರ ಉದ್ಯೋಗದಲ್ಲಿದ್ದಾರೆ. ಪದವೀಧರ ಮತಕ್ಷೇತ್ರದ ಮತದಾರ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ಪದವೀಧರರಲ್ಲ. ಉನ್ನತ ಶಿಕ್ಷಣ ಪಡೆದು, ನಿರುದ್ಯೋಗಿಗಳಾಗದವರೂ ಪದವೀಧರರೇ, ಅವರಿಗೆ ಉದ್ಯೋಗ, ಜೀವನ ಭದ್ರತೆ ಕೊಡುವ ಕೆಲಸ ಈ ವರೆಗೆ ನಡೆದಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಈಶ್ವರ ಇಂಡಿ, ಡಾ.ಜುವಿನ್ ರತಂಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here