ರೈತರ ನೆರವಿಗೆ ಸಂಗೊಳ್ಳಿ ರಾಯಣ್ಣ ಸಹಕಾರಿ ನೆರವಾಗಲಿ

0
29
loading...

ಚಿಕ್ಕೋಡಿ 08: ದೊಡ್ಡವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸೇರಿದಂತೆ ಎಲ್ಲರೂ ಸಾಲ ಕೊಡುತ್ತಾರೆ. ಆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿಯು ಸಣ್ಣ,ಸಣ್ಣ ಉದ್ಯೋಗ ಕೈಗೊಳ್ಳುವವರಿಗೆ ಸಾಲ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.
ತಾಲೂಕಿನ ಅಂಕಲಿ ಗ್ರಾಮದಲ್ಲಿ ಶನಿವಾರ ಬೆಳಗಾವಿಯ ದಿ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿಯ 31ನೇ ಶಾಖೆ ಹಾಗೂ ಶ್ರೀ ಭೀಮಾಂಬಿಕಾ ಮಹಿಳಾ ವಿವಿದೊದ್ದೇಶ ಸಹಕಾರಿಯ 11ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೈಪಲಾಯಿನ್‍ಗಾಗಿ ಸಾಲ ನೀಡುವುದರಿಂದ ರೈತರಿಗೆ ಕೃಷಿ ಚಟುವಟಿಕೆಗೆ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಕೃಷ್ಣಾ ನದಿಯಿಂದ ಪೈಪಲೈನ್ ಮಾಡಿಕೊಳ್ಳಲು ರೈತರಿಗೆ ಸಾಲ ನೀಡಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿಯು ಚಿಂತನೆ ನಡೆಸಬೇಕೆಂದು ಹೇಳಿದರು.
ಆನಂದ ಅಪ್ಪುಗೋಳ ಅವರು ಸಹಕಾರ ಕ್ಷೇತ್ರದ ಜೊತೆಗೆ ಚಲನಚಿತ್ರ ನಿರ್ಮಾಣದಲ್ಲಿ ಯಶಸ್ಸು ಕಂಡಿದ್ದು, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಚಲನಚಿತ್ರದ ಮೂಲಕ ದಾಖಲೆ ನಿರ್ಮಿಸಿ ನಾಡಿನುದ್ದಕ್ಕೂ ಹೆಸರು ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ,ಜೀವನದಲ್ಲಿ ನಿರ್ದಿಷ್ಠ ಗುರಿಯೊಂದಿಗೆ ಮುನ್ನಡೆದಾಗ ಬರುವ ಕಷ್ಟಗಳೇ ಒಂದು ದಿನ ಸುಖ ಕೊಡುತ್ತದೆ.ಆದ್ದರಿಂದ ಪ್ರತಿಯೊಬ್ಬರು ಜೀವನದಲ್ಲಿಯ ಹಿಂದಿನ ಘಟನೆಗಳನ್ನು ನೆನೆಸಿಕೊಂಡು ಮುನ್ನಡೆದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ ಈ ನಿಟ್ಟಿನಲ್ಲಿ ಇಂದು ಆನಂದ ಅಪ್ಪುಗೋಳ ಬೆಳೆದು ನಿಂತಿದ್ದಾರೆ ಎಂದರು.
ದಿವ್ಯ ಸಾನಿಧ್ಯ ವಹಸಿದ್ದ ಶ್ರೀಶೈಲ,ಹಿಪ್ಪರಿಗಿ,ಯಡೂರಿನ ಶ್ರೀ 1008 ಜಗದ್ಗುರು ಡಾ.ಚನ್ನಸಿದ್ದರಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ,ಮನುಷ್ಯ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕಾದರೆ ಸಹಕಾರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ವಿಶಾಲಮನೋಭಾವನೆಯುಳ್ಳ ಆನಂದ ಅಪ್ಪುಗೋಳ ಸಿನೇಮಾ ರಂಗದಲ್ಲಿ ಸಾಧನೆ ಮಾಡಿದ್ದಾರೆ.ಕೆಲಸ ಮಾಡುವವರಿಗೆ ಕಷ್ಟ ಬರುತ್ತವೆ ಏಳುಬೀಳುಗಳನ್ನು ಅನುಭವಿಸಿ,ನಿರ್ದಿಷ್ಠ ಗುರಿ,ಛಲ ಇದ್ದವರು ಮಾತ್ರ ಯಶಸ್ಸಿಗಳಾಗುತ್ತಾರೆ ಇದಕ್ಕೆ ಉದಾಹರಣೆ ಆನಂದ ಅಪ್ಪುಗೊಳ ಎನ್ನಬಹುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಾಂತಿವಿರ ಸಂಗೋಳ್ಳಿ ರಾಯಣ್ಣ ಸಹಕಾರಿಯ ಸಂಸ್ಥಾಪಕ ಆನಂದ ಅಪ್ಪುಗೋಳ ಮಾತನಾಡಿ, 3 ಲಕ್ಷ ರೂಗಳ ಬಂಡವಾಳದೊಂದಿಗೆ ಪ್ರಾರಂಭವಾದ ಸಹಕಾರಿಯು ಇಂದು 300 ಕೋಟಿ ಠೇವು ಸಂಗ್ರಹಸಿದೆ.ಇದಕ್ಕೆ ಸಹಕಾರಿಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸ,ಪ್ರತಿಯೇ ಕಾರಣ ಎಂದರು.
ಬರುವ ಡಿಸೆಂಬರ್ ಅಂತ್ಯದವರೆಗೆ ಸಹಕಾರಿಯು 100 ಶಾಖೆಗಳನ್ನು ಶ್ರೀ ಭೀಮಾಂಬಿಕಾ ಮಹಿಳಾ ವಿವಿದೊದ್ದೇಶ ಸಹಕಾರಿಯ 50 ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಿದೆ ಎಂದರು.
ಪ್ರೇಮಾ ಆನಂದ ಅಪ್ಪುಗೋಳ, ಡಾ.ದೇವೆಂದ್ರ ಮಗದುಮ್ಮ,ಅಣ್ಣಾ ಕಟಾಂಬಳೆ,ಕೃಷ್ಣಾಬಾಯಿ ಚೌಧರಿ, ಸುರೇಶ ಪಾಟೀಲ,ಸಚೀನ ಜೋಷಿ,ಕೃಷ್ಣಾ ಹಿಪ್ಪರಗಿ,ಮಹಾಂತೇಶ ಅಂಗಡಿ,ಎಸ್.ಶರಣಗೌಡಾ,ವಾಘ ಹವಾಲ್ದಾರ್, ಕಲ್ಲಪ್ಪ ಬಬನಗೋಳ, ಹೆದ್ದರೂಶೆಟ್ಟಿ, ಮಹೇಂದ್ರ ಅಪ್ಪುಗೋಳ, ಸಂಜಯ ಪಾಟೀಲ, ಜಯವಂತ ಸರವೀರ,ಜಯಾನಂದ ಮಸ್ತಿ ಸೇರಿದಂತೆ ಸಹಕಾರಿಯ ನಿರ್ದೇಶಕರು ,ಗ್ರಾಹಕರು ಉಪಸ್ಥಿತರಿದ್ದರು.
ಮಲ್ಲಯ್ಯ ಜಡೆ ನಿರೂಪಿಸಿದರು. ಸಂತೋಷ ಮಠಪತಿ ವಂದಿಸಿದರು.

loading...

LEAVE A REPLY

Please enter your comment!
Please enter your name here